ಮಂಡ್ಯದಲ್ಲಿ ಧ್ವಜ ವಿವಾದ ಪ್ರಕರಣ: ಕೆರೆಗೋಡು ಪಂಚಾಯ್ತಿಯ ನಡಾವಳಿ ಬುಕ್ ನಾಪತ್ತೆ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಧ್ವಜ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಗ್ರಾಮ ಪಂಚಾಯತ್​ ನಡಾವಳಿ ಬುಕ್ ನಾಪತ್ತೆ ಆಗಿದೆ. ಜನವರಿ 25ರಂದು ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಸಭೆಯಲ್ಲಿ 18 ಸದಸ್ಯರು ಹನುಮಧ್ವಜ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ನಡಾವಳಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು.

ಮಂಡ್ಯದಲ್ಲಿ ಧ್ವಜ ವಿವಾದ ಪ್ರಕರಣ: ಕೆರೆಗೋಡು ಪಂಚಾಯ್ತಿಯ ನಡಾವಳಿ ಬುಕ್ ನಾಪತ್ತೆ
ಹನುಮನ ಧ್ವಜ ತೆರವು ಪ್ರಕರಣ
Edited By:

Updated on: Jan 30, 2024 | 5:24 PM

ಮಂಡ್ಯ, ಜನವರಿ 30: ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಆರಂಭವಾದ ಧ್ವಜ (flag) ದಂಗಲ್ ರಾಜಕೀಯ ವಾಗ್ಯುದ್ಧಕ್ಕೆ ತಿರುಗಿದೆ. ಈ ನಡುವೆ ಗ್ರಾಮಪಂಚಾಯಿತಿ ನೀಡಿದ್ದ ಅನುಮತಿ ಬಗ್ಗೆ ಹಲವು ಆಯಾಮಗಳಲ್ಲಿ ಚರ್ಚೆ ವಾದ-ಪ್ರತಿವಾದಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ರಾಷ್ಟ್ರಧ್ವಜ ಹರಿಸಲು ಸೂಚನೆ ನೀಡಿದ್ದರು. ಆದರೆ ವಿಪಕ್ಷ ನಾಯಕ ಆರ್.ಅಶೋಕ್ ವಿವಾದಿತ ಸ್ಥಳದ ಬಳಿ ಹನುಮ ಧ್ವಜವನ್ನು ಹಾರಿಸಿದ್ದರು. ಸದ್ಯ ಇವೆಲ್ಲದರ ಮಧ್ಯೆ ಇದೀಗ ಧ್ವಜ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಗ್ರಾಮ ಪಂಚಾಯತ್​ ನಡಾವಳಿ ಬುಕ್ ನಾಪತ್ತೆ ಆಗಿದೆ. ಜನವರಿ 25ರಂದು ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಸಭೆಯಲ್ಲಿ 18 ಸದಸ್ಯರು ಹನುಮಧ್ವಜ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ನಡಾವಳಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು.

ಇದೀಗ ಏಕಾಏಕಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಪುಸ್ತಕ ನಾಪತ್ತೆ ಆಗಿದೆ. ನಡಾವಳಿಕೆ ಪುಸ್ತಕ ಎಲ್ಲಿದೆ ಎಂದು ಗ್ರಾಮ ಪಂಚಾಯತ್​ ಸದಸ್ಯರು ಪ್ರಶ್ನಿಸುತ್ತಿದ್ದಾರೆ. ಕೆರಗೋಡು ಗ್ರಾ.ಪಂ. ಕಚೇರಿಯಲ್ಲಿ ಕಾರ್ಯದರ್ಶಿ ರತ್ನಮ್ಮರನ್ನು ತರಾಟೆ ತೆಗೆದುಕೊಳ್ಳಲಾಗಿದೆ.

ಗ್ರಾ.ಪಂ. ಕಾರ್ಯದರ್ಶಿ ರತ್ನಮ್ಮಗೆ ತರಾಟೆ

ನಡಾವಳಿ ಪುಸ್ತಕ ನಮ್ಮ ಸುಪರ್ದಿಗೆ ಕೊಟ್ಟಿಲ್ಲ ಎಂದು ಗ್ರಾ.ಪಂ. ಕಾರ್ಯದರ್ಶಿ ರತ್ನಮ್ಮ ಹೇಳುತ್ತಿದ್ದಾರೆ. ಸದ್ಯ ಕೆರಗೋಡು ಗ್ರಾಮ ಪಂಚಾಯತ್​ ನಡಾವಳಿ ಬುಕ್ ನಾಪತ್ತೆ ವಿಚಾರ ಅನುಮಾನಕ್ಕೆ ಕಾರಣವಾಗಿದೆ.

ಹನುಮ ಧ್ವಜ ಪ್ರಕರಣಕ್ಕೆ ಬಿಗ್ ಟಿಸ್ಟ್: ನಡವಳಿ ಪುಸ್ತಕ ತೆಗೆದುಕೊಂಡು ಹೋದ ಅಧಿಕಾರಿ

ಗ್ರಾಮ ಪಂಚಾಯ್ತಿನಲ್ಲಿ ಇದ್ದ ನಡವಳಿ ಪುಸ್ತಕವನ್ನು ಮಂಡ್ಯ ತಾಲೂಕುಪಂಚಾಯತ್ ಇಓ ವೀಣಾ ತೆಗೆದುಕೊಂಡು ಹೋಗಿದ್ದಾರೆ. ಗ್ರಾಪಂಗೆ ಒಂದು ಪತ್ರವನ್ನು ನೀಡದೇ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಸಂಬಂಧ ಯಾವುದೇ ಇಲಾಖೆಗೆ ವಹಿಸಿಲ್ಲ. ಹೀಗಿದ್ದರು ಘಟನೆ ತೀವ್ರ ಸ್ವರೂಪ ಪಡೆದ ಮೇಲೆ ನಡಾವಳಿ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಕೆರಗೋಡು ಗ್ರಾಮಸ್ಥರು ಚಂದಾ ಎತ್ತಿ ಧ್ವಜಸ್ತಂಭ ನಿರ್ಮಿಸಿರುವುದರಿಂದ ಅಲ್ಲಿ ಹನುಮ ಧ್ವಜವೇ ಹಾರಬೇಕು: ಸುಮಲತಾ ಅಂಬರೀಶ್

ಗ್ರಾಪಂ ಅಧ್ಯಕ್ಷ ಈ ಬಗ್ಗೆ ಕೇಳಿದರೆ ನಮಗೆ ಅಧಿಕಾರ ಇದೆ. ಈ‌ ಬಗ್ಗೆ ನಾನು ಯಾರ ಬಳಿಯೂ ಹೇಳಬೇಕಿಲ್ಲ. ನಾವು ಇದರ ಬಗ್ಗೆ ಯಾವ ಪತ್ರ ಕೊಡುವ ಅವಶ್ಯಕತೆ ಇಲ್ಲ. ನಡಾವಳಿ ಪುಸ್ತಕ ನಮ್ಮ ಬಳಿ ಇದೆ ಎಂದಿದ್ದಾರೆ. ಗ್ರಾಪಂ ನಲ್ಲಿ ನಡಾವಳಿ ಪುಸ್ತಕ ತೆಗೆದುಕೊಂಡು ಹೋಗಿರುವ ಯಾವುದೇ ಉಲ್ಲೇಖ ಮಾಡದೇ ತೆಗೆದುಕೊಂಡು ಹೋಗಲಾಗಿದೆ.

ಹಳೇ ಧ್ವಜಸ್ತಂಭದ ಜಾಗದಲ್ಲಿ ಹೊಸ ಧ್ವಜಸ್ತಂಭ ನಿರ್ಮಾಣ ಮಾಡುತ್ತೇವೆ ಎಂದು ಕಳೆದ ನವೆಂಬರ್ 27ರಂದು ಗ್ರಾಮ ಪಂಚಾಯಿತಿಗೆ ಶ್ರೀ ಗೌರಿಶಂಕರ್ ಸೇವಾ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಆದರೆ ಯಾವ ಬಾವುಟ ಹಾರಿಸುತ್ತೇವೆಂದು ಟ್ರಸ್ಟ್ ಹೇಳಿರಲಿಲ್ಲ. ಡಿಸೆಂಬರ್ 29 ನಡೆದ ಸಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ.

ನಾಡ ಧ್ವಜ, ರಾಷ್ಟ್ರಧ್ವಜ ಹಾರಿಸುವಂತೆ ಷರತ್ತು

ಟ್ರಸ್ಟ್‌ನವರಿಗೆ ನಾಡ ಧ್ವಜ, ರಾಷ್ಟ್ರಧ್ವಜ ಮಾತ್ರ ಹಾರಿಸುವಂತೆ ಷರತ್ತು ವಿಧಿಸಿ ಧ್ವಜಸ್ತಂಬ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಕೆರೆಗೋಡು ಗ್ರಾಮಸ್ಥರು ಕೂಡ ಅರ್ಜಿ ಸಲ್ಲಿಸಿದ್ದರು. ನಿರ್ಮಾಣವಾಗುತ್ತಿರುವ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ಅನುಮತಿ ಕೇಳಿದ್ದರು. ಈ ಸಭೆಯಲ್ಲಿ 22 ಸದಸ್ಯರ ಪೈಕಿ 18 ಸದಸ್ಯರು ಸಹಮತ ನೀಡಿದ್ದರು. ಆದರೆ ಇದು ಮೌಖಿಕವಾಗಿ ಚರ್ಚೆಯಾಗಿತ್ತು ವಿನಃ ಯಾವುದೇ ಅಧಿಕೃತ ಆದೇಶ ಆಗಿರಲಿಲ್ಲ. ಆದರೆ ಗ್ರಾಮಸ್ಥರು ಎಲ್ಲರು ಸೇರಿ ನೂತನ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದ್ದರು.

ಇದನ್ನೂ ಓದಿ: ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ತೆರವು ಪ್ರಕರಣ: ಗ್ರಾಮಸ್ಥರ ವಿರುದ್ಧ ಮತ್ತೆರಡು FIR ದಾಖಲು

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಹನುಮ ಧ್ವಜವನ್ನ ಹಾರಿಸಲಾಗಿತ್ತು. ಹನುಮ ಧ್ವಜ ಹಾರಿಸುತ್ತಿದ್ದಂತೆ ಪಂಚಾಯಿತಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆನಂತರ ಮತ್ತೆ ಸಾಮಾನ್ಯ ಸಭೆ ಕರೆದು ಗ್ರಾಮ ಪಂಚಾಯತ್​ ಅಧಿಕಾರಿಗಳು ನಡಾವಳಿ ರಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪಿಡಿಎ, ಗ್ರಾಮ ಪಂಚಾಯ್ತಿಗೆ ಯಾವುದೇ ಬಾವುಟ ಹಾರಾಟಕ್ಕೆ ಅನುಮತಿ ನೀಡಲು ಅಧಿಕಾರ ಇಲ್ಲ ಎಂದಿದ್ದರು.

ಇದೇ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಅಂತ ಪಿಡಿಓ ಸಲಹೆ ನೀಡಿದ್ದರು. ಗ್ರಾಮ ಪಂಚಾಯ್ತಿ ಗೌರಿಶಂಕರ ಟ್ರಸ್ಟ್‌ಗೆ ದಿನಾಂಕ 19 ಜನವರಿಯಂದು ನೀಡಿದ್ದ ಅನುಮತಿ ಬಗ್ಗೆಯೂ ಪಿಡಿಒ ತಕರಾರು ಎತ್ತಿದ್ದರು. ಟ್ರಸ್ಟ್​ನಿಂದ ಷರತ್ತು ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು.  ಇದಾದ ನಂತರವೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಹನುಮ ಧ್ವಜ ತೆರವು ಗೊಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:51 pm, Tue, 30 January 24