ಕೆರಗೋಡು ಗ್ರಾಮಸ್ಥರು ಚಂದಾ ಎತ್ತಿ ಧ್ವಜಸ್ತಂಭ ನಿರ್ಮಿಸಿರುವುದರಿಂದ ಅಲ್ಲಿ ಹನುಮ ಧ್ವಜವೇ ಹಾರಬೇಕು: ಸುಮಲತಾ ಅಂಬರೀಶ್

ಕೆರಗೋಡು ಗ್ರಾಮಸ್ಥರು ಚಂದಾ ಎತ್ತಿ ಧ್ವಜಸ್ತಂಭ ನಿರ್ಮಿಸಿರುವುದರಿಂದ ಅಲ್ಲಿ ಹನುಮ ಧ್ವಜವೇ ಹಾರಬೇಕು: ಸುಮಲತಾ ಅಂಬರೀಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2024 | 4:21 PM

ಸರ್ಕಾರದ ಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ವಿಶ್ವಾಶಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಕೊನೆಗಾಣಿಸಬೇಕಿತ್ತೇ ಹೊರತು, ಹೀಗೆ ಅಸಂವೈಧಾನಿಕ ರೀತಿಯಲ್ಲಿ ಖಂಡಿತ ಅಲ್ಲ ಎಂದು ಸುಮಲತಾ ಹೇಳಿದರು.

ಬೆಂಗಳೂರು: ಕೆರಗೋಡು ಗ್ರಾಮದಲ್ಲಿ(Keragodu village) ಈಗ ವಿವಾದಕ್ಕೀಡಾಗಿರುವ ಧ್ವಜಸ್ತಂಭದ ಮೇಲೆ ಯಾವ ಧ್ವಜ ಹಾರಬೇಕು ಅಂತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುಮಲತಾ, ಕೆರಗೋಡು ಗ್ರಾಮದ ಜನ ಊರಲ್ಲಿ ಚಂದಾ ಎತ್ತುವ ಮೂಲಕ (crowdfunding) ಹಣ ಸಂಗ್ರಹಿಸಿ ಅಲ್ಲಿ ಹನುಮ ದ್ವಜಸ್ತಂಭ ನಿರ್ಮಿಸಿದ್ದಾರೆ, ಹಾಗಾಗಿ ಅಲ್ಲಿ ಹನುಮ ಧ್ವಜವನ್ನೇ ಹಾರಿಸಬೇಕು ಎಂದು ಹೇಳಿದರು. ರಾಷ್ಟ್ರಧ್ವಜವನ್ನು ಈಗ ಜನ ತಮ್ಮ ಮನೆಗಳ ಮೇಲೂ ಹಾರಿಸಬಹುದು, ಅದಕ್ಕಾಗಿ ಪ್ರತ್ಯೇಕ ಸ್ಥಳ ಬೇಕಿಲ್ಲ ಎಂದು ಹೇಳಿದ ಅವರು ಪ್ರಕರಣದ ಹಿಂದಿನ ಉದ್ದೇಶ ಕ್ರಮೇಣ ಸ್ಪಷ್ಟವಾಗುತ್ತಿದೆ ಎಂದರು. ಒಂದು ಪಕ್ಷ ಸರ್ಕಾರ ಹೇಳುತ್ತಿರುವ ಹಾಗೆ ಕಾನೂನಿನ ಉಲ್ಲಂಘನೆಯಾಗಿದ್ದರೆ, ಪ್ರಕರಣ ವಿವಾದಕ್ಕೀಡುವ ಸನ್ನಿವೇಶ ಕಂಡಿದ್ದರೆ ಅದನ್ನು ಹೇಗೆ ಬಗೆಹರಿಸಬೇಕೆನ್ನುವುದು ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಸರ್ಕಾರದ ಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ವಿಶ್ವಾಶಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಕೊನೆಗಾಣಿಸಬೇಕಿತ್ತೇ ಹೊರತು, ಹೀಗೆ ಅಸಂವೈಧಾನಿಕ ರೀತಿಯಲ್ಲಿ ಖಂಡಿತ ಅಲ್ಲ ಎಂದು ಸುಮಲತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ