ಮಂಡ್ಯ: ಮಹಿಳೆ ಮೇಲೆ ಚಿರತೆ ದಾಳಿ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2023 | 2:49 PM

ಜಿಲ್ಲೆಯ ಅವ್ವೇರಹಳ್ಳಿ ಗ್ರಾಮದಲ್ಲಿ ಗೃಹಿಣಿ ಮೇಲೆ ಚಿರತೆ ದಾಳಿ ನಡೆಸಿದೆ. ತಕ್ಷಣ ಮಹಿಳೆ ಕೂಗಿದ್ದಾಳೆ ಅಕ್ಕ ಪಕ್ಕದ ಮನೆಯವರು ಬರುತ್ತಿದ್ದಂತೆ ಸ್ಥಳದಿಂದ ಚಿರತೆ ಓಡಿಹೋಗಿದೆ.

ಮಂಡ್ಯ: ಮಹಿಳೆ ಮೇಲೆ ಚಿರತೆ ದಾಳಿ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ
ಚಿರತೆ ದಾಳಿ
Follow us on

ಮಂಡ್ಯ: ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಗೆ ಹೋದ ಬಸಮ್ಮಣ್ಣಿ ಎಂಬ ಗೃಹಿಣಿ ಮೇಲೆ ಏಕಾ ಏಕಿ ಚಿರತೆ ದಾಳಿ ಮಾಡಿದೆ. ಮಹಿಳೆಯು ಗಾಬರಿಯಿಂದ ಕಿರುಚಾಡುತ್ತಾ ಚಿರತೆಗೆ ಒದ್ದಿದ್ದು, ಚಿರತೆ ಗುಂಡಿಯೊಳಗೆ ಬಿದ್ದಿದೆ. ಮಹಿಳೆಯ ಕೂಗು ಕೇಳುತ್ತಿದ್ದಂತೆ ಅಕ್ಕ ಪಕ್ಕದ ಜನರು ಬಂದಿದ್ದಾರೆ. ತಕ್ಷಣವೇ ಚಿರತೆ ಅಲ್ಲಿಂದ ಓಡಿ ಹೋಗಿದೆ. ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಬಂದಿದ್ದು ಚಿರತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಕಾಡುತ್ತಿದೆ ಚಿರತೆ, ನಿನ್ನೆ ಮೊನ್ನೆ ಶ್ವಾನದ ಮೇಲೆ ದಾಳಿಯಾಗುತ್ತಿದ್ದು ಈಗ ಮನುಷ್ಯರ ಮೇಲೆ ದಾಳಿ ಮಾಡಲು ಆರಂಭಿಸಿದೆ. ಪದೇ ಪದೇ ಹೆಚ್ಚುತ್ತಿರುವ ಚಿರತೆ ದಾಳಿಗೆ ಗ್ರಾಮಸ್ಥರು ಭಯದಿಂದ ಹೊರ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕತ್ತಲಾಗುತ್ತಿದ್ದಂತೆ ಮನೆಯಿಂದ ಆಚೆ ಬರಲಾರದೆ ಗ್ರಾಮಸ್ಥರ ಪೀಕಲಾಟ ಹೇಳತೀರದು. ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:ಮಂಡ್ಯ; ಒಂದೇ ತಿಂಗಳಲ್ಲಿ ಬೋನಿಗೆ ಬಿದ್ದ 3 ಚಿರತೆಗಳು; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ನಿನ್ನೆಯಷ್ಟೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲಿನಲ್ಲಿರುವ ಶಿವರಾಮ್ ಎಂಬುವವರ ತೋಟದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿತ್ತು. ಕಳೆದ 30 ದಿನಗಳಲ್ಲಿ ಬೋನಿಗೆ ಬಿದ್ದ ಮೂರನೇ ಚಿರತೆ ಇದಾಗಿದ್ದು, ಡಿಸೆಂಬರ್ 12 ಹಾಗೂ ಡಿಸೆಂಬರ್ 27 ರಂದು ಎರಡು ಚಿರತೆಗಳನ್ನ ಸೆರೆ ಹಿಡಿಯಲಾಗಿತ್ತು. ಇನ್ನೇನು ಚಿರತೆಯಿಂದ ಬಚಾವ್​ ಆದ್ವಿ ಅನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಮತ್ತೆ ಚಿರತೆ ಅಟ್ಟಹಾಸ ಶುರುವಾಗಿದೆ. ಆದಷ್ಟು ಬೇಗ ಚಿರತೆಯನ್ನ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ತಮ್ಮ ಅಳಲನ್ನ ಅರಣ್ಯಾಧಿಕಾರಿಗಳ ಮುಂದೆ ತೋಡಿಕೊಂಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:50 am, Sat, 7 January 23