Pratap Simha: ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಸಾಗುವ ವಾಹನಗಳ ಮಧ್ಯೆ ಬೈಕ್-ಆಟೋಗೆ ಅವಕಾಶ ನೀಡಬೇಕಾ!?

Pratap Simha: ವಾಸ್ತವ ನೋಡುವುದಾದರೆ ಈ ದಶಪಥ ಹೆದ್ದಾರಿಯಲ್ಲಿ ನೂರಾರು ಕಿ.ಮೀ. ವೇಗದಲ್ಲಿ ಹೋದರಷ್ಟೇ ಈ ರಸ್ತೆಯ ಸುಖ ಅನುಭವಿಸಲು ಸಾಧ್ಯ. ಅದು ನಾಲ್ಕು ಚಕ್ರ ವಾಹನದಾರರಿಗೆ ಹೇಳಿಮಾಡಿಸಿದಂತಹ ರಸ್ತೆಯೇ ಸರಿ. ಅದು ಬಿಟ್ಟು ಅವರ ಮಧ್ಯೆ ಬೈಕು ಆಟೋದಾರರು ಅಲುಗಾಡುತ್ತಾ ಹೋದರೆ...

Pratap Simha: ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಸಾಗುವ ವಾಹನಗಳ ಮಧ್ಯೆ ಬೈಕ್-ಆಟೋಗೆ ಅವಕಾಶ ನೀಡಬೇಕಾ!?
ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಸಾಗುವ ವಾಹನಗಳ ಮಧ್ಯೆ ಬೈಕ್-ಆಟೋಗೆ ಅವಕಾಶ ನೀಡಬೇಕಾ!?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 07, 2023 | 11:51 AM

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ (Bengaluru Mysuru Expressway) ಕೇವಲ ಮೈಸೂರು, ಬೆಂಗಳೂರಿಗರ ಕನಸಷ್ಟೇ ಅಲ್ಲ. ಸುತ್ತಮುತ್ತಲ ಭಾಗದ ಜನರ ಕನಸೂ ಹೌದು. ಅದು ನನಸಾಗುತ್ತಾ ಬಂದಿದೆ. ಈ ಮಧ್ಯೆ ಅದು ಉಳ್ಳವರ ಅಂದರೆ ನಾಲ್ಕು ಚಕ್ರ ವಾಹನದಾರರಿಗಷ್ಟೇ ಅಲ್ಲ, ಸಾಮಾನ್ಯ ದ್ವಿಚಕ್ರ/ತ್ರಿಚಕ್ರ ವಾಹನ ಸವಾರರಿಗೂ ಸಲ್ಲುವಂತಾಗಬೇಕು ಎಂಬ ಆಸೆಯೂ ಇದೆ. ಅದಿನ್ನೇನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆಯಾಗಲಿದೆ. ಆದ್ರೆ ಹಾವಿನಂತೆ ಬಳಕುತ್ತಾ ಸಾಗುವ ಈ ಎಕ್ಸ್​​ಪ್ರೆಸ್ ಹೆದ್ದಾರಿಯಲ್ಲಿ ಬೈಕರ್‌ಗಳಿಗೆ ಅವಕಾಶ ಇಲ್ಲವಾಗಿದೆ. ಇನ್ನು, ಆಟೋದಂತಹ ತ್ರಿಚಕ್ರ ವಾಹನಗಳಿಗೂ ಅಲ್ಲಿ ಎಂಟ್ರಿ ಇಲ್ಲವಾಗಿದೆ. ಇದರಿಂದ ಸಹಜವಾಗಿಯೇ ಬೈಕರ್‌ಗಳು ಮತ್ತು ಆಟೋದಾರರು ಆಕ್ರೋಶಗೊಂಡಿದ್ದಾರೆ. ಆದರೆ ವಾಸ್ತವ ಮತ್ತು ಹೆದ್ದಾರಿ ನಿಯಮಗಳು ಬೇರೆಯದ್ದನ್ನೇ ಹೇಳುತ್ತಿದೆ. ವಾಹನದಾರರ ಹಿತದೃಷ್ಟಿ, ಸುರಕ್ಷತೆ ಕಾಪಾಡಲು ಇದು ಅನಿವಾರ್ಯ ಎಂಬ ಒಂದು ಸಾಲಿನ ಸಮಜಾಯಿಷಿ ಕೇಳಿಬರುತ್ತಿದೆ.

ಅದು ಮೈಸೂರು-ಬೆಂಗಳೂರು ದಶಫಥ ರಸ್ತೆ. ರಾಜ್ಯದಲ್ಲಿ ಸದ್ಯಕ್ಕೆ ಅದು ಅತ್ಯುತ್ತಮ ರಸ್ತೆ. ಎಂದಿನಂತೆ ಕಿತ್ತೋಗಿರೋ ರಸ್ತೆಗಳಲ್ಲಿ/ ಟ್ರಾಫಿಕ್​ ಜಾಮುಗಳ ಮಧ್ಯೆ ಸಂಚರಿಸಿ, ಬಸವಳಿದಿರುವ ವಾಹನ ಸವಾರರಿಗೆ ಈ ರಸ್ತೆಯಲ್ಲಿ‌ ಹೋಗೋದೆ ಒಂದು ರೀತಿಯ ದಿವ್ಯ ಅನುಭವ ಕೊಡುವಂತಿದೆ. ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೈಸೂರು ಬೆಂಗಳೂರು ರಸ್ತೆ ಎರಡು‌ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು‌ ಕಡಿಮೆ ಮಾಡಲಿದೆ.

ಮೂರು ಗಂಟೆಯ ಪ್ರಯಾಣ ಬರೋಬ್ಬರಿ ಒಂದು ಗಂಟೆಗೆ ಇಳಿಯಲಿದೆ. ನಿನ್ನೆ ಶುಕ್ರವಾರವಷ್ಟೇ ಖುದ್ದು ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ (Nitin Gadkari) ಈ ದಶಪಥ ರಸ್ತೆಯ ವೀಕ್ಷಣೆ ಮಾಡಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಬೆನ್ನಿಗೆ ಸ್ಥಳೀಯ ಸಂಸದ ಪ್ರತಾಪ್​ ಸಿಂಹ (Pratap Simha) ಬಾಂಬ್ ಶಾಕ್ ಕೊಟ್ಟಿದ್ದು, ಈ ರಸ್ತೆಯಲ್ಲಿ ನಿಮ್ಮನ್ನು ಅಂದರೆ ಬೈಕ್ -ಆಟೋದಾರರನ್ನು (Bike -Auto Rickshaw) ಬಿಡುವುದಿಲ್ಲ ಎಂದಿದ್ದಾರೆ.

No room for bike and autos on Bangalore Mysore Expressway clarifies MP Pratap Simha 1

ಹೌದು ಹೊಸದಾಗಿ ನಿರ್ಮಾಣವಾಗಿರುವ ಮೈಸೂರು ಬೆಂಗಳೂರು ರಸ್ತೆಯಲ್ಲಿ ಬೈಕ್ ಹಾಗೂ ತ್ರಿಚಕ್ರ ವಾಹನಗಳಿಗೆ ಅವಕಾಶವಿಲ್ಲವಂತೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಸ್ತೆ ಪೂರ್ಣ ಆಗುವವರೆಗೂ ಮಾತ್ರ ಬೈಕ್‌ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಒಮ್ಮೆ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಬೈಕ್‌ಗಳಿಗೆ ಅವಕಾಶ ಇಲ್ಲ ಅಂತಾ ಪ್ರತಾಪ್ ಸಿಂಹ ಕಡ್ಡಿಮುರಿದಂತೆ ಹೇಳಿಬಿಟ್ಟಿದ್ದಾರೆ. ಅದು ಹೆದ್ದಾರಿ ಪ್ರೋಟೋಕಾಲ್​ ಅನುಸಾರವೇ ಸಂಸದ ಪ್ರತಾಪ್ ಈ ಮಾತನ್ನು ಹೇಳಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

Also Read:

ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಪರಿಶೀಲನೆಗೆ ದಶಪಥ ಹೆದ್ದಾರಿಯಲ್ಲೆ ಹೆಲಿಕಾಪ್ಟರ್ ಇಳಿಸಲಿದ್ದಾರೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ

ಇನ್ನು ವಾಸ್ತವ ನೋಡುವುದಾದರೆ ಈ ದಶಪಥ ಹೆದ್ದಾರಿಯಲ್ಲಿ ನೂರು ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ಹೋದರಷ್ಟೇ ಈ ರಸ್ತೆಯ ಸುಖ ಅನುಭವಿಸಲು ಸಾಧ್ಯ. ಅದು ನಾಲ್ಕು ಚಕ್ರ ವಾನಹದಾರರಿಗೆ ಹೇಳಿಮಾಡಿಸಿದಂತಹ ರಸ್ತೆಯೇ ಸರಿ. ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಮುಂದೆ ಸಾಗಲು ಅವರಿಗಷ್ಟೇ ಸಾಧ್ಯವಾದೀತು. ಅದು ಬಿಟ್ಟು ಅವರ ಮಧ್ಯೆ ಬೈಕು ಆಟೋದಾರರು ಅಲುಗಾಡುತ್ತಾ ಹೋದರೆ… ಆ ಯಮನಿಗಷ್ಟೇ ಅದು ಪ್ರೀತಿ ತಂದೀತು.

ನಾವೇನು ತೆರಿಗೆ ಕಟ್ಟಲ್ವಾ? ನಮ್ಮಿಂದ ಮಾತ್ರ ಅಪಘಾತ ಆಗುತ್ತಾ?

ಆದರೂ ಬೈಕ್ ಆಟೋಗೆ ನೋ ಎಂಟ್ರಿ ಎನ್ನುವ ಸಂಸದ ಪ್ರತಾಪ್ ಮಾತು ಸಹಜವಾಗಿ ಆ ಸವಾರರನ್ನು ಕೆರಳಿಸಿದೆ. ನಾವೇನು ತೆರಿಗೆ ಕಟ್ಟಲ್ವಾ? ನಮ್ಮಿಂದ ಮಾತ್ರ ಅಪಘಾತ ಆಗುತ್ತಾ? ಪೂನಾ ದೆಹಲಿ ಮುಂಬೈ ಹೈವೆಗೆ ಇಲ್ಲದ ನಿರ್ಬಂಧ ಇಲ್ಲಿ ಮಾತ್ರ ಏಕೆ ಅಂತೆಲ್ಲ ಕಿಡಿಕಾರಿದ್ದಾರೆ. ಆದರೂ ವಾಹನ ಸವಾರರು ವಾಸ್ತವವನ್ನು ಒಪ್ಪಿಕೊಳ್ಳುವುದು ಒಳಿತು/ ಎಲ್ಲರಿಗೂ ಕ್ಷೇಮಕರ ಎಂದು ಪ್ರಾಜ್ಞರು ಹೇಳುತ್ತಿದ್ದಾರೆ.

ದಶಪಥ ಹೆದ್ದಾರಿ ನಿರ್ಮಾಣದ ವೇಳೆ ಹತ್ತಾರು ವಿಘ್ನಗಳು ಎದುರಾದಂತೆ ಇದೀಗ ಹೈಟೆಕ್ ರಸ್ತೆ ನಿರ್ಮಾಣವಾದ ಮೇಲೂ ಅದು ಮತ್ತೊಂದು ಸಂಘರ್ಷಕ್ಕೆ ದಾರಿಯಾಗುತ್ತದಾ? ಕಾದು ನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:48 am, Sat, 7 January 23

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ