AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ

ಮಂಡ್ಯದಲ್ಲಿ ಪದೇಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಇದೀಗ ಮನೆ ಮುಂದೆ ಕಟ್ಟಿದ್ದ ನಾಯಿಯನ್ನೇ ಚಿರತೆಯೊಂದು ಹೊತ್ತೊಯ್ದಿದೆ.

ಮಂಡ್ಯ: ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ
ಮಂಡ್ಯದಲ್ಲಿ ನಾಯಿಯನ್ನು ಕಚ್ಚಿ ಕೊಂಡೊಯ್ಯುತ್ತಿರುವ ಚಿರತೆ
TV9 Web
| Updated By: Rakesh Nayak Manchi|

Updated on:Dec 27, 2022 | 7:46 AM

Share

ಮಂಡ್ಯ: ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ಚಿರತೆ ಉಪಟಳ (Leopard menace) ಹೆಚ್ಚಾಗುತ್ತಿದೆ. ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಚಿರತೆ ಹೊತ್ತೊಯ್ದ (Leopard Attacks On Dog) ಘಟನೆ ಜಿಲ್ಲೆಯ ಕೆ.ಆರ್​.ಪೇಟೆ ತಾಲೂಕಿನ ಚಟ್ಟಂಗೆರೆಯಲ್ಲಿ ನಡೆದಿದೆ. ಗ್ರಾಮದ ಸುತ್ತಮುತ್ತ ಹಲವು ಬಾರಿ ಚಿರತೆ ಪ್ರತ್ಯಕ್ಷ (Leopard Spotted)ಗೊಂಡಿದ್ದು, ಇದೀಗ ನಾಯಿಯನ್ನು ಹೊತ್ತೊಯ್ದಿದೆ. ಇದು ಸಹಜವಾಗಿ ಚಟ್ಟಂಗೆರೆ ಗ್ರಾಮಸ್ಥರಲ್ಲಿ ಇದ್ದ ಆತಂಕವನ್ನು ಹೆಚ್ಚಿಸಿದೆ. ಹೊಲ ಗದ್ದೆಗಳಿಗೆ, ರಸ್ತೆಗೆ ಇಳಿಯಲು ಜನರು ಭಯಪಡುವಂತಾಗಿದೆ. ಚಿರತೆ ಪ್ರತ್ಯಕ್ಷದ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ಚಿರತೆಯ ಉಪಟಳ ಹೆಚ್ಚಾಗುತ್ತಿದ್ದು, ಕತ್ತಲಾದರೆ ಸಾಕು ಮನೆಯಿಂದ ಆಚೆ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಮನೆ ಮುಂದೆ ಕಟ್ಟಿ ಹಾಕಿದ್ದ ಶ್ವಾನವನ್ನು ಕಚ್ಚಿ ಎಳೆದು ಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ದಾಳಿಯ ಭೀಕರ ದೃಶ್ಯ ಟಿವಿ9ಗೆ ಲಭ್ಯವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಚಿರತೆ ಮರಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ರೈತ

ಚಿರತೆ ದಾಳಿಯಿಂದ ಕಂಗೆಟ್ಟ ಚಟ್ಟಂಗೆರೆ ಗ್ರಾಮಸ್ಥರು, ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಗ್ರಾಮಸ್ಥರು ಎಷ್ಟೇ ಮನವಿ ಮಾಡಿದರೂ ಅರಣ್ಯಾಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲವಂತೆ. ಕೇವಲ ಒಂದು ಬಾರಿ ದಾಳಿ ಮಾಡಿದರೆ ಬೋನ್ ಇಡಲು ಸಾದ್ಯವಿಲ್ಲ. ಎರಡು ಬಾರಿ ದಾಳಿ ಮಾಡಿದರೆ ಮಾತ್ರ ಬೋನ್ ಇಡುವುದಾಗಿ ಹೇಳುತ್ತಿದ್ದಾರೆ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಚಟ್ಟಂಗೆರೆ ಗ್ರಾಮಸ್ಥರ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 am, Tue, 27 December 22