AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ದಿನ ಸುಮಲತಾ ಎಲ್ಲಿ ಮಲಗಿದ್ದರು?: ಮಂಡ್ಯ ನಗರಸಭೆ ಅಧ್ಯಕ್ಷ ಎಚ್ ಎಸ್ ಮಂಜು ಪ್ರಶ್ನೆ

ಕೆಆರ್​ಎಸ್ (KRS Dam) ಸೋರುತ್ತಿದ್ದರೆ ನೀರು ಸೋರದಂತೆ ಸುಮಲತಾ ಅವರನ್ನ ಮಲಗಿಸಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಂಸದೆ ಸುಮಲತಾ ಅವರ ವಿರುದ್ಧ ಈಮುನ್ನ ಹೇಳಿದ್ದರು . ಅವರ ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇಷ್ಟು ದಿನ ಸುಮಲತಾ ಎಲ್ಲಿ ಮಲಗಿದ್ದರು?: ಮಂಡ್ಯ ನಗರಸಭೆ ಅಧ್ಯಕ್ಷ ಎಚ್ ಎಸ್ ಮಂಜು ಪ್ರಶ್ನೆ
ಎಚ್ ಎಸ್ ಮಂಜು
TV9 Web
| Edited By: |

Updated on:Jul 13, 2021 | 5:12 PM

Share

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರ ಕುರಿತು ಇತ್ತೀಚಿಗಷ್ಟೇ ಎರಡನೇ ದರ್ಜೆಯ ಅರ್ಥ ಬರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದ ಪ್ರಯೋಗಿಸಿದ್ದರು. ಈ ಘಟನೆ ಮಾಸುವ ಮುನ್ನವೇ, ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಬಳಸಿದ ಪದ ಇದೀಗ ವಿವಾದದ ಸ್ವರೂಪ ಪಡೆಯಲಾರಂಭಿಸಿದೆ. ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ‘ಇಷ್ಟು ದಿನ ಸುಮಲತಾ ಎಲ್ಲಿ ಮಲಗಿದ್ದರು?’ ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಈ ಪದಗುಚ್ಛಗಳನ್ನು ಆಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಆರ್​ಎಸ್ (KRS Dam) ಸೋರುತ್ತಿದ್ದರೆ ನೀರು ಸೋರದಂತೆ ಸುಮಲತಾ ಅವರನ್ನ ಮಲಗಿಸಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಂಸದೆ ಸುಮಲತಾ ಅವರ ವಿರುದ್ಧ ಈಮುನ್ನ ಹೇಳಿದ್ದರು . ಅವರ ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ. ಕೆಆರ್​ಎಸ್ ನ್ನು ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ.ಕೆಆರ್​ಎಸ್ ನ್ನು ಸೋರುತ್ತಿದ್ದರೆ ಕೆಆರ್​ಎಸ್ ನ್ನು ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು. ಡ್ಯಾಂ ಬಿರುಕುಬಿಟ್ಟಿದೆ ಎಂದು ಸುಮಲತಾ ಹೇಳಿದ್ದರು ಎಂದು ಸುಮಲತಾ ಹೇಳಿಕೆ ಖಂಡಿಸಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿ. ಸಂಸದರಾಗಿ ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಲಿ ಎಂದಿದ್ದರು.

ಮಂಡ್ಯ ಮೈ ಶುಗರ್ ಖಾಸಗೀಕರಣಕ್ಕೆ ಸಂಸದರ ಒತ್ತಡ ಇದೆಯಾ ಅಂತ ಅವರನ್ನೇ ಕೇಳಬೇಕು. ಅಂಥಹ ಸಂಸದೆ ಮಂಡ್ಯಕ್ಕೆ ಸಿಕ್ಕಿಲ್ಲ, ಸಿಗಲ್ಲ. ಮೊನ್ನೆ ಯಾವುದೋ ಸಭೆಯಲ್ಲಿ ಇವರೇ ರಕ್ಷಣೆ ಮಾಡ್ತಿರುವ ಹಾಗೆ ಹೇಳಿಕೆ ಕೊಟ್ಟಿದ್ದಾರೆ. ಕೆಆರ್​ಎಸ್ ಬಾಗಿಲಿಗೆ ನೀರು ಹೋಗದಂತೆ ಅವರನ್ನೇ ಮಲಗಿಸಿಬಿಟ್ರೆ ಬಿಗಿಯಾಗುತ್ತದೆ. ಸಂಸದರು ಕೆಲಸ ಯಾವ ರೀತಿ ಮಾಡಬೇಕು ಅಂತ ಮಾಹಿತಿ ಪಡೆಯಲ್ಲ. ಕಾಟಾಚಾರಕ್ಕೆ ಯಾರ ಮೇಲಿನ ದ್ವೇಷಕ್ಕೋ ಹೇಳಿಕೆ ಕೊಡೋದು ಸರಿಯಲ್ಲ. ಇದು ಬಹಳ ದಿನ ನಡೆಯಲ್ಲ. ಅನುಕಂಪದ ಮೇಲೆ ಗೆದ್ದ ಮೇಲೆ ಜನರ ಕೆಲಸ ಮಾಡಬೇಕು. ಅನುಕಂಪದ ಅವಕಾಶ ಸದ್ಬಳಕೆ ಮಾಡಿಕೊಳ್ಳದಿದ್ರೆ ಮುಂದೆ ಜನರೇ ಪಾಠ ಕಲಿಸ್ತಾರೆ ಎಂದಿದ್ದರು

ಇದನ್ನೂ ಓದಿ: 

ಸುಮಲತಾ ಹೆಚ್​ಡಿಕೆ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

ಕುಮಾರಸ್ವಾಮಿ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾತಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ: ರಾಕ್​ಲೈನ್ ವೆಂಕಟೇಶ್

(Mandya Municipality Chairman HS Manju questions Where did MP Sumalatha Ambareesh sleep this day )

Published On - 5:03 pm, Tue, 13 July 21