ಸುದೀಪ್ ಸಿನಿಮಾ ಶೂಟಿಂಗ್ ನಡೆಸಿದ್ದ ನೂರಾರು ವರ್ಷ ಇತಿಹಾಸದ ಸರ್ಕಾರಿ ಶಾಲೆ ಅಧೋಗತಿ! ಜೀವ ಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

| Updated By: ಸಾಧು ಶ್ರೀನಾಥ್​

Updated on: Dec 24, 2022 | 10:33 AM

Kiccha Sudeep: 102 ವರ್ಷಗಳ ಇತಿಹಾಸವುಳ್ಳ ಪಾಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು ದಿನ ನಿತ್ಯ ಪ್ರಾಣ ಭಯದಲ್ಲೇ ಪಾಠ ಕೇಳುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಸಿನಿಮಾ ಚಿತ್ರೀಕರಣಕ್ಕೆ ಶಾಲೆಯನ್ನ ಬಳಸಿಕೊಳ್ಳಲಾಗಿತ್ತು.

ಸುದೀಪ್ ಸಿನಿಮಾ ಶೂಟಿಂಗ್ ನಡೆಸಿದ್ದ ನೂರಾರು ವರ್ಷ ಇತಿಹಾಸದ ಸರ್ಕಾರಿ ಶಾಲೆ ಅಧೋಗತಿ! ಜೀವ ಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಸುದೀಪ್ ಸಿನಿಮಾ ಶೂಟಿಂಗ್ ನಡೆಸಿದ್ದ ನೂರಾರು ವರ್ಷ ಇತಿಹಾಸದ ಸರ್ಕಾರಿ ಶಾಲೆ ಅಧೋಗತಿ!
Follow us on

ಮಂಡ್ಯ: ನೂರಾರು ವರ್ಷ ಇತಿಹಾಸವುಳ್ಳ ಸರ್ಕಾರಿ ಶಾಲೆಯ ಪರಿಸ್ಥಿತಿ ಕೇಳೊರೆ ಇಲ್ಲಾವಾಗಿದೆ. ಗೋಡೆ ಕುಸಿದು ಶಾಲೆಯಲ್ಲಿ ಕುಳಿತುಕೊಳ್ಳಲೂ ಸ್ಥಳವಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಟ ನಡೆಸಿದ್ದಾರೆ. ವಿದ್ಯಾರ್ಥಿಗಳು (students) ಜೀವ ಭಯದಲ್ಲೇ ಪಾಠ ಕೇಳುತ್ತಿದ್ದಾರೆ; ಅಧ್ಯಾಪಕರೂ ಸಹ ಜೀವ ಭಯದಲ್ಲೇ ಪಾಠ ಮಾಡುತ್ತಿದ್ದಾರೆ. ಇದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ (srirangapattana, mandya) ತಾಲೂಕಿನ ಪಾಲಹಳ್ಳಿ ಸರ್ಕಾರಿ ಶಾಲೆಯ (Palahalli government school) ಶೋಚನೀಯ ಸ್ಥಿತಿ.

ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡುವಂತೆ ಮಾನವಿ ಮಾಡಿದ್ದರೂ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತೋರಿದೆ. ಇದರೊಂದಿಗೆ 47 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರಿ ಶಾಲೆ ಉಳಿಸಿ ಸರ್ಕಾರಿ ಶಾಲೆ ಬೆಳಸಿ ಅನ್ನೋದು ಬರಿ ಬಾಯಿ ಮಾತಿಗೆ ಸೀಮಿತವಾಯ್ತಾ? ಎಂಬ ಆತಂಕವೂ ನಿರ್ಮಾಣವಾಗಿದೆ.

Also Read:

Burial Ground: ಆರಗ ಜ್ಞಾನೇಂದ್ರ ಕ್ಷೇತ್ರದ ಗ್ರಾಮಸ್ಥರಿಗೆ ಸಾವಿನ ನೋವಿಗಿಂತ ಅಂತ್ಯಸಂಸ್ಕಾರ ಮಾಡುವುದೇ ಸಂಕಟಮಯ!

ಜಿಲ್ಲಾಡಳಿತವು ಬಡವರು, ರೈತರ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ಕಾದು ಕುಳಿತಿದ್ಯಾ ಎಂಬ ಅನುಮಾನವೂ ಮೂಡಿದೆ. ವಿದ್ಯಾರ್ಥಿ ಹಾಗೂ ಶಿಕ್ಷಕರ ಜೀವದ ಜೊತೆ ಜಿಲ್ಲಾಡಳಿತ ಚೆಲ್ಲಾಟವಾಡುತ್ತಿದೆ. ಜಿಲ್ಲಾಡಳಿತದ ಈ ಧೋರಣೆಗೆ ಪಾಲಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

102 ವರ್ಷಗಳ ಇತಿಹಾಸವುಳ್ಳ ಪಾಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು ದಿನ ನಿತ್ಯ ಪ್ರಾಣ ಭಯದಲ್ಲೇ ಪಾಠ ಕೇಳುತ್ತಿದ್ದಾರೆ. ಮೈ ಆಟೋ ಗ್ರಾಫ್ ಚಿತ್ರದಲ್ಲಿ ಬಳಕೆಯಾಗಿರೊ ಪಾಲಹಳ್ಳಿ ಸರ್ಕಾರಿ ಶಾಲೆ ಇದಾಗಿದೆ. ಕಿಚ್ಚ ಸುದೀಪ್ (Kiccha Sudeep) ಅಭಿನಯದ ಮೈ ಆಟೋಗ್ರಾಫ್ ಸಿನಿಮಾ ಚಿತ್ರೀಕರಣಕ್ಕೆ ಶಾಲೆಯನ್ನ ಬಳಸಿಕೊಳ್ಳಲಾಗಿತ್ತು. ಯಾವ ಕ್ಷಣದಲ್ಲಿ ಬೇಕಾದರೂ ಕಟ್ಟಡ ಕುಸಿದು ಅಪಾಯ ಸಂಭವಿಸೋ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Sat, 24 December 22