ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಮಧ್ಯೆ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಯುದ್ಧದಂತಾಗಿದೆ: ಕಂದಾಯ ಸಚಿವ ಆರ್ ಅಶೋಕ್ ಹೋಲಿಕೆ

| Updated By: guruganesh bhat

Updated on: Jul 08, 2021 | 6:32 PM

ಮಾಜಿ ಪ್ರಧಾನಿ ದೇವೇಗೌಡರೇ ಇದರಿಂದ ಹಿಂದೆ ಸರಿದಿದ್ದಾರೆ ಎಂದು ಅಕ್ರಮ‌ ಗಣಿಗಾರಿಕೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಗ್ವಾದದ ಕುರಿತು ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಮಧ್ಯೆ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಯುದ್ಧದಂತಾಗಿದೆ: ಕಂದಾಯ ಸಚಿವ ಆರ್ ಅಶೋಕ್ ಹೋಲಿಕೆ
ಆರ್.ಅಶೋಕ್
Follow us on

ಬೆಂಗಳೂರು: ಕೆಆರ್​ಎಸ್​ ಸುತ್ತಮುತ್ತ ಗಣಿಗಾರಿಕೆ ನಿಷೇಧ ಮಾಡಲಾಗಿದೆ. ಡ್ಯಾಂನಿಂದ ಇಷ್ಟು ದೂರದಲ್ಲೇ ನಡೆಸಬೇಕೆಂಬ ನಿಯಮವಿದೆ. ಸಂಸದೆ ಸುಮಲತಾ ಬಳಿ ದಾಖಲೆಗಳಿದ್ದಲ್ಲಿ ಅವರು ಕಚೇರಿಗೆ ಬಂದು ದೂರು ಸಲ್ಲಿಸಬಹುದು. ನಮ್ಮ ಕಚೇರಿ ಓಪನ್ ಇರುತ್ತದೆ. ಇದು ಇಬ್ಬರ ನಡುವಿನ ದ್ವೇಷದಿಂದ ನಡೆಯುತ್ತಿರುವ ನಿಲ್ಲದ ಯುದ್ಧ.ಈ ಯುದ್ಧ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಯುದ್ಧದಂತಾಗಿದೆ. ಮಾಜಿ ಪ್ರಧಾನಿ ದೇವೇಗೌಡರೇ ಇದರಿಂದ ಹಿಂದೆ ಸರಿದಿದ್ದಾರೆ ಎಂದು ಅಕ್ರಮ‌ ಗಣಿಗಾರಿಕೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಗ್ವಾದದ ಕುರಿತು ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಬಾಡಿಗೆದಾರರ ಅಧಿನಿಯಮ ಜಾರಿ ಮಾಡಲಿದ್ದೇವೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಫ್ಲ್ಯಾಟ್​ಗಳು ಖಾಲಿ ಇವೆ. ಬಾಡಿಗೆದಾರರು, ಮಾಲೀಕರ ನಡುವೆ ಸದಾ ಜಗಳವಿತ್ತು. ಬಾಡಿಗೆದಾರರು, ಮಾಲೀಕರ ಗೊಂದಲ ಹಾಗೇ ಇರುತ್ತಿತ್ತು. ಕೋರ್ಟ್ ಕಚೇರಿ ಎಂದು ಇಬ್ಬರೂ ಅಲೆಯಬೇಕಿತ್ತು. ಈಗ ಬಾಡಿಗೆದಾರ, ಮಾಲೀಕರ ನಡುವೆ ಅಗ್ರಿಮೆಂಟ್ ಅಂತಿಮವಾಗುತ್ತದೆ. ನಾವು ಮನೆ ಮಾಲೀಕರ ಹಿತರಕ್ಷಣೆಗೆ ಮುಂದಾಗಿಲ್ಲ. ಕಾನೂನಿನಡಿ ಬಾಡಿಗೆದಾರ, ಮಾಲೀಕರಿಗೆ ಅನುಕೂಲವಾಗುತ್ತದೆ. ಸರ್ಕಾರದ ಆ್ಯಪ್​ನಲ್ಲಿ ಅಗ್ರಿಮೆಂಟ್ ಅಪ್ಲೋಡ್ ಮಾಡಬೇಕು. ಬಾಡಿಗೆದಾರರ ಅಧಿನಿಯಮ ಬಗ್ಗೆ ಚಿಂತನೆ ನಡೆಸಿದ್ದೇವೆ. ಸಲಹೆ ಸೂಚನೆಗಳನ್ನು ಕೊಟ್ಟರೆ ನಂತರ ಜಾರಿಗೆ ತರುತ್ತೇವೆ ಎಂದು ಸಹ ಅವರು ಮಾಹಿತಿ ನೀಡಿದ್ದಾರೆ.

ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ, ಆದರೆ ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ: ಸಂಸದೆ ಸುಮಲತಾಗೆ ಕೈಮುಗಿದ ಮಾಜಿ ಸಿಎಂ ಕುಮಾರಸ್ವಾಮಿ
ಸಂಸದೆ ಸುಮಲತಾ ಅಂಬರೀಶ್ ಅವರ ಅಂಬರೀಶ್ ವಿಚಾರ ಚರ್ಚಿಸಿದರೆ ಮಣ್ಣಾಗುತ್ತಾರೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೈ ಮುಗಿದಿದ್ದಾರೆ. ಜತೆಗೆ ಮಣ್ಣಾಗುವುದು ನಾನಲ್ಲ. ಅವರು ಎಂದು ತಿರುಗೇಟನ್ನೂ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಮಾತನಾಡಿದ ಅವರು, ನಾನಿಲ್ಲದಿದ್ದರೆ ಆಗ ಏನಾಗುತ್ತಿತ್ತು ಎಂದು ಎಲ್ಲವೂ ಗೊತ್ತಿದೆ. ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ. ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ ಎಂದು ಕೈಮುಗಿದಿದ್ದಾರೆ. ಹಿರಿಯ ನಟ ವಿಷ್ಣುವರ್ಧನ್ ಅವರ ಸ್ಮಾರಕ ಏನಾಯಿತು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಸರ್ಕಾರದವರು ಈವರೆಗೆ ಏನಾದರೂ ಮಾಡಿದ್ದಾರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 

ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ, ಆದರೆ ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ: ಸಂಸದೆ ಸುಮಲತಾಗೆ ಕೈಮುಗಿದ ಮಾಜಿ ಸಿಎಂ ಕುಮಾರಸ್ವಾಮಿ

ನಾನೇನು ಅಂಬರೀಶ್‌ಗೆ ಗುಲಾಮ ಆಗಿದ್ದೆನಾ? ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ: ಕುಮಾರಸ್ವಾಮಿ ತಿರುಗೇಟು

(MP Sumalatha Ambarish versus former CM Kumaraswamy fight like Israel and Palestine war say Revenue Minister R Ashok)