ರಾಕ್​ಲೈನ್ ವೆಂಕಟೇಶ್ ರಂಗಪ್ರವೇಶ: ಕುಮಾರಸ್ವಾಮಿ ಬಗ್ಗೆ ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ರೂ ಕೆಲಸ ಮಾಡ್ತಿದ್ದರು ಅಂದ್ರು

Rockline venkatesh: ಮಂಡ್ಯಕ್ಕೆ ಅಂಬರೀಷ್ ಅವರ ದೇಹವನ್ನು ಸೇನಾ ಹೆಲಿಕಾಪ್ಟರ್​​ನಲ್ಲಿ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಯಾಗಿ ನಾನೇ ಸಹಾಯ ಮಾಡಿದೆ ಎಂದು ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಕ್​ಲೈನ್ ವೆಂಕಟೇಶ್ ರಂಗಪ್ರವೇಶ: ಕುಮಾರಸ್ವಾಮಿ ಬಗ್ಗೆ ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ರೂ ಕೆಲಸ ಮಾಡ್ತಿದ್ದರು ಅಂದ್ರು
ಕುಮಾರಸ್ವಾಮಿ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾತಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ: ರಾಕ್​ಲೈನ್ ವೆಂಕಟೇಶ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 09, 2021 | 11:21 AM

ಬೆಂಗಳೂರು: ಕೆಆರ್​ಎಸ್ ಡ್ಯಾಂ ಮತ್ತು ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್​ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ನಡುವಣ ಜಗಳ ತಾರಕಕ್ಕೆ ಏರಿರುವಾಗಲೇ ಅಂಬರೀಷ್ ಕುಟುಂಬದ ಆತ್ಯಾಪ್ತ ರಾಕ್​ಲೈನ್ ವೆಂಕಟೇಶ್ ರಂಗಪ್ರವೇಶ ಮಾಡಿದ್ದಾರೆ. ಅಣ್ಣಾ ಕುಮಾರಣ್ಣಾ ನಾನು ಯಾರು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ಅಂಬರೀಷ್ ಕುಟುಂಬದ ಬಗ್ಗೆ ಇತ್ತೀಚೆಗೆ ಹೆಚ್​ ಡಿ ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದರ ವಿರುದ್ಧ ಕಿಡಿಕಿಡಿಯಾಗಿದ್ದಾರೆ.

ಮಂಡ್ಯಕ್ಕೆ ಅಂಬರೀಷ್ ಅವರ ದೇಹವನ್ನು ಸೇನಾ ಹೆಲಿಕಾಪ್ಟರ್​​ನಲ್ಲಿ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಯಾಗಿ ನಾನೇ ಸಹಾಯ ಮಾಡಿದೆ ಎಂದು ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಆ ಕೆಲಸ ಮಾಡ್ತಿದ್ರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಬರೀಶ್ ವಿಚಾರ ಮಾತನಾಡುವಾಗ ಪ್ರಜ್ಞೆ ಇರಲಿ. ಭ್ರಷ್ಟಾಚಾರ ಅಂತಾರೆ ಮತ್ತೊಂದ್ಕಡೆ ಸ್ನೇಹಿತ ಅಂತಾ ಹೇಳ್ತಾರೆ. ಚಿತ್ರರಂಗದ ಬಗ್ಗೆ ಮಾತನಾಡುತ್ತೀರಾ ಅಲ್ವಾ..? ಚಿತ್ರರಂಗದಿಂದ ನೀವೂ ಲಾಭ ಮಾಡಿಕೊಂಡಿದ್ದೀರಾ. ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ..? ಅಭಿಷೇಕ್​ ಒತ್ತಾಯ ಮಾಡಿ ತಮ್ಮ ತಂದೆ ಅಂಬರೀಷ್​ರ ಮೃತದೇಹವನ್ನ ತಾಯ್ನೆಲ ಮಂಡ್ಯಕ್ಕೆ ಕೊಂಡೊಯ್ಯಲು ಹೇಳಿದ್ರು. ಅಂಥದ್ದರಲ್ಲಿ ಸಾವಿನ ರಾಜಕಾರಣ ಯಾಕೆ ಮಾಡಲು ಹೋಗ್ತಿದ್ದೀರಾ..? ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಆ ಕೆಲಸ ಮಾಡ್ತಿದ್ರು. ನೀವು ಮಾತನಾಡಿದ್ದು ತುಂಬಾ ನೋವಾಗುತ್ತೆ ಕುಮಾರಣ್ಣ. ಅಂಬಿ ಕುಟುಂಬಕ್ಕೆ ನಾನು ಎಷ್ಟು ಆಪ್ತ ಅನ್ನೋದು ನಿಮಗೂ ಗೊತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಬ್ಬರಿಗೆ ಗೌರವ ಕೊಡೋದು ತಪ್ಪಲ್ಲ ಸ್ವಾಮಿ. ಕುಮಾರಸ್ವಾಮಿ ನನ್ನ ಮುಂದೆ ಬಂದ್ರೂ ನಮಸ್ಕಾರ ಹೇಳ್ತೀನಿ. ಅಂಬಿ ಇದ್ದಾಗ ನೀವು ಯಾವ ಟೋನ್ ನಲ್ಲಿ ಮಾತನಾಡ್ತಿದ್ರಿ. ಈಗ ವಾಲ್ಯೂಮ್ ರೈಸ್ ಮಾಡಿ ಮಾತನಾಡಬೇಡಿ. ನಿಮ್ಮ ಪಕ್ಷದವರ ಕೈಯಲ್ಲಿ ಅಂಬರೀಶ್​ನ ಬೈಯಿಸುತ್ತೀರಾ? ಅಂಬರೀಷ್​ ಅಣ್ಣನನ್ನ ಸ್ನೇಹಿತ ಅಂತ ಹೇಳ್ತೀರಾ.. ನಿಮ್ಮ ಪಕ್ಷದ ವಕ್ತಾರರಿಂದ ಬೈಯುಸುತ್ತೀರಾ? ಹಾಗೆಲ್ಲಾ ಮಾತನಾಡಬಾರದು ಅಂತಾ ಅವರಿಗೆ ಹೇಳೋಕ್ಕೆ ಅಗೋಲ್ಲವಾ ನಿಮಗೆ? ಎಂದು ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಬೆಂಗಳೂರಲ್ಲಿ ಕಿಡಿಕಾರಿದ್ದಾರೆ.

(Rockline venkatesh criticises hd kumaraswamy over sumalatha ambareesh row over krs dam)

Published On - 11:13 am, Fri, 9 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ