ಮಂಡ್ಯ: ದುಡಿಯೋಕೆ ವಯಸ್ಸಿತ್ತು.. ದಂಡಿಸೋಕೆ ದೇಹವಿತ್ತು. ಬಡತನವಿದ್ರೂ ನೆಮ್ಮದಿಯಾಗಿ ಬದುಕೋಕೆ ದಾರಿಗಳಿದ್ವು. ಆದ್ರೆ, ಶೋಕಿ ಲೈಫು ಸುಮ್ನೆ ಬಿಡ್ಬೇಕಲ್ಲ. ಹೈಲು, ಪೈಲು ಆಲೋಚನೆಗಳನ್ನ ತಲೆಗೆ ಹತ್ತಿಸಿಕೊಂಡು ದಾರಿಗೆ ಇಳಿದಿದ್ರು. ಅಲ್ಲಿಗೆ ಅವರ ದಿಕ್ಕೇ ಬದಲಾಗಿ ಹೋಗಿತ್ತು.
ಒಂದೇ ಏಜು.. ಒಂದೇ ಮೈಕಟ್ಟು.. ಒಂಬತ್ತು ಮಂದಿಯಾದ್ರೂ, ಇವ್ರದ್ದೆಲ್ಲ ಒಂದೇ ಗ್ಯಾಂಗು.. ಒಂದೇ ಗುರಿ.. ಹೆದ್ದಾರಿಗೆ ಇಳಿದ್ ಬಿಟ್ರೆ ಮುಗೀತು. ಇವರ ಹಾವಳಿ ಅಷ್ಟಿಷ್ಟಲ್ಲ. ಕೈಗೆ ಸಿಕ್ಕವ್ರನ್ನ ಈ ಕಿರಾತಕರು ಹುರಿದು ಮುಕ್ತಿದ್ರು. ಅದ್ರಲ್ಲೂ, ಅವತ್ತು ರಾತ್ರಿ ಖಾಕಿ ಪಡೆಯನ್ನೇ ಬೆಚ್ಚಿಸಿ ಬಿಟ್ಟಿದ್ರು.
ಒಂದೇ ರಾತ್ರಿ ಕಿರಾತಕರಿಂದ ಎರಡು ಕಡೆ ದರೋಡೆ!
ಮಾರುತಿ ಓಮ್ನಿ ಕಾರ್ಗೆ ಮಚ್ಚು, ದೊಣ್ಣೆ ತುಂಬ್ಕೊಂಡು ಕಿರಾತಕರೆಲ್ಲ ದರೋಡೆಗೆ ಹೋಗ್ತಿದ್ರು. ರಾತ್ರಿ ವೇಳೆ ಒಂಟಿಯಾಗಿ ಹೋಗೋರನ್ನೇ ಟಾರ್ಗೆಟ್ ಮಾಡ್ತಿದ್ರು. ಕಳೆದ ತಿಂಗಳು ಕೊನೆಯ ವಾರದಲ್ಲಿ ಗೂಡ್ಸ್ ವಾಹನವನ್ನ ಅಡ್ಡಗಟ್ಟಿ ಅಡಿಕೆ ವ್ಯಾಪಾರಿಯಿಂದ 11 ಸಾವಿರ ಹಣ, ಮೊಬೈಲ್ ಕಿತ್ತಿದ್ರು. ನಂತರ, ಇದೇ ತಿಂಗಳ 3ನೇ ತಾರೀಖು, ಮಹದೇವಪುರ ಹಾಗೂ ರಮ್ಮನಹಳ್ಳಿ ಬಳಿ ಇಬ್ಬರನ್ನ ಸುಲಿಗೆ ಮಾಡಿದ್ರು.
ದರೋಡೆಗೆ ಕಾರ್ನಲ್ಲಿ ಹೊರಟವರು ದಾರಿಯಲ್ಲೇ ಲಾಕ್:
ಒಂದೇ ವಾರದೊಳಗೆ ಕಿಡಿಗೇಡಿಗಳು ಮೂರು ದರೋಡೆ ಮಾಡಿದ್ರು. ಮೊನ್ನೆ ಕೂಡ, ಮತ್ತೊಂದು ದರೋಡೆಗೆ ಸ್ಕೆಚ್ ಹಾಕಿ ಹೊರಟಿದ್ರು. ಆದ್ರೆ, ಚೆಕ್ಪೋಸ್ಟ್ನಲ್ಲಿ ಈ ಕ್ರಿಮಿಗಳ ಮುಖ ನೋಡಿದ ಪೊಲೀಸ್ರಿಗೆ ಡೌಟ್ ಬಂದಿತ್ತು. ವೆಹಿಕಲ್ ಚೆಕ್ ಮಾಡಿದಾಗ, ಮಚ್ಚು, ಲಾಂಗ್ ಪತ್ತೆಯಾಯ್ತು. ಅಲ್ಲಿಗೆ ಖತರ್ನಾಕ್ಗಳು ಲಾಕ್ ಆದ್ರು.
ಮಧ್ಯರಾತ್ರಿಯ ಈ ಕಿರಾತಕರಿಂದ ಮಂಡ್ಯದ ಜನ್ರಿಗೆ ಕೊಂಚು ದಿಗಿಲು ಮೂಡಿತ್ತು. ಆದ್ರೆ, ಹುಳುಗಳ ತಲೆ ಬಲಿಯುವ ಮೊದಲೇ ಪೊಲೀಸ್ರು, ಎಲ್ಲರನ್ನೂ ಹಿಡಿದು ಹೊಸಕಿದ್ದಾರೆ.