ಕಲ್ಲುಕ್ವಾರಿ ಸರ್ವೆಗೆ ತೆರಳಿದ್ದ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆಗೆ ಯತ್ನ

| Updated By: ಸಾಧು ಶ್ರೀನಾಥ್​

Updated on: Aug 11, 2023 | 10:26 AM

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಂಕಾಪುರದಲ್ಲಿ ಜಮೀನಿನ ಸಮೀಕ್ಷೆಗೆ ತೆರಳಿದ್ದ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ. ಗಣಿ ಇಲಾಖೆ ಅಧಿಕಾರಿಗಳು ಕಲ್ಲುಕ್ವಾರಿ ಬಗ್ಗೆ ಸರ್ವೆಗೆ ಮುಂದಾದ ವೇಳೆ ಬಂಕಾಪುರ ಗ್ರಾಮದ ಬೋರೇಗೌಡ ಕುಟುಂಬಸ್ಥರಿಂದ ಈ ಹೈಡ್ರಾಮಾ ನಡೆದಿದೆ.

ಮಂಡ್ಯ, ಆಗಸ್ಟ್​ 11: ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಬಂಕಾಪುರದಲ್ಲಿ ಜಮೀನಿನ ಸಮೀಕ್ಷೆಗೆ (quarry survey) ತೆರಳಿದ್ದ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿರುವ (suicide attempt) ಘಟನೆಯೂ ನಡೆದಿದೆ. ಗಣಿ ಇಲಾಖೆ ಅಧಿಕಾರಿಗಳು ಕಲ್ಲುಕ್ವಾರಿ ಬಗ್ಗೆ ಸರ್ವೆಗೆ ಮುಂದಾದ ವೇಳೆ ಬಂಕಾಪುರ ಗ್ರಾಮದ ಬೋರೇಗೌಡ ಕುಟುಂಬಸ್ಥರಿಂದ ಈ ಹೈಡ್ರಾಮಾ ನಡೆದಿದೆ.

ಸಂಕನಹಳ್ಳಿ ಗ್ರಾಮದ ಸರ್ವೆ ನಂಬರ್ 54ರ ಜಮೀನಿನ ಸಮೀಕ್ಷೆ ನಡೆದಿತ್ತು. ಇಲ್ಲಿ ಕೆ.ಎಂ.ರವಿ ಎಂಬುವವರು ಗುತ್ತಿಗೆ ಆಧಾರದಲ್ಲಿ ಕಲ್ಲುಕ್ವಾರಿಗೆ ಅನುಮತಿ ಪಡೆದಿದ್ದರು. ಬಳಿಕ ರವಿ ಅವರು ಮಂಜೂರಾದ ಜಾಗದ ಜಂಟಿ ಸರ್ವೆಗೆ ಮನವಿ ಮಾಡಿದ್ದರು. ತಾಲೂಕು ಭೂಮಾಪಕ, ಗಣಿ ಅಧಿಕಾರಿಗಳಿಂದ ಜಂಟಿ ಸರ್ವೆ ಕಾರ್ಯ ನಡೆಯಬೇಕಿತ್ತು.

ಇನ್ನೂ ಓದಿ: NIA: ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 24 ಅಕ್ರಮ ಬಾಂಗ್ಲಾ ವಲಸಿಗರು, ಏನಿದರ ಹಕೀಕತ್ತು?

ಆದರೆ ಸರ್ವೆ ವಿರೋಧಿಸಿ ಬೋರೇಗೌಡ ಕುಟುಂಬಸ್ಥರಿಂದ ಆತ್ಮಹತ್ಯೆ ಯತ್ನ ನಡೆಯಿತು. ಜಾಗ ಕೈತಪ್ಪುವ ಭೀತಿಯಿಂದ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಅಧಿಕಾರಿಗಳು ನಾಗಮಂಗಲ ಠಾಣೆಗೆ ದೂರು ನೀಡಿದ್ದಾರೆ. ರಾಮಚಂದ್ರ, ಬಸವರಾಜು ಸೇರಿದಂತೆ ಹಲವರ ವಿರುದ್ಧ FIR ದಾಖಲಾಗಿದೆ.

ಮಂಡ್ಯ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ