AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀಲ್ಸ್​ ಮಾಡ್ತಿದ್ದ ಪತ್ನಿಯ ಮೇಲೆ ಸಂಶಯದ ಭೂತ, ಹತ್ಯೆ ಮಾಡಿ ದೇಹವನ್ನ ಕಾವೇರಿ ನದಿಗೆ ಎಸೆದ ಪತಿ, ಸಾಥ್ ಕೊಟ್ಟ ಮಾವ!

ಗಂಡ ಶ್ರೀನಾಥ್ ಹಾಗೂ ಮಾವ ದೊರೆಸ್ವಾಮಿ ಇಬ್ಬರೂ ಪ್ಲಾನ್ ಮಾಡಿಕೊಂಡಿದ್ದಾರೆ. ಬೈಕ್ ನಲ್ಲಿ ಬ್ಯಾಗ್​​ನಲ್ಲಿ ಪತ್ನಿಯ ದೇಹ ತುಂಬಿ ದೂರದಲ್ಲಿರೋ ಕಾವೇರಿ ನದಿಗೆ ಕಲ್ಲುಕಟ್ಟಿ ಎಸೆದಿದ್ದಾರೆ. ಇನ್ನು ಮೃತದೇಹ ಎಸೆದಿರೋ ಜಾಗ ಸಾಕಷ್ಟು ಮೊಸಳೆಗಳು ಇರುವ ಕಾವೇರಿ ನದಿ. ಮೊಸಳೆಗಳು ಮೃತದೇಹವನ್ನ ತಿಂದು ಗುರುತು ಸಿಗುವುದಿಲ್ಲ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ..

ರೀಲ್ಸ್​ ಮಾಡ್ತಿದ್ದ ಪತ್ನಿಯ ಮೇಲೆ ಸಂಶಯದ ಭೂತ, ಹತ್ಯೆ ಮಾಡಿ ದೇಹವನ್ನ ಕಾವೇರಿ ನದಿಗೆ ಎಸೆದ ಪತಿ, ಸಾಥ್ ಕೊಟ್ಟ ಮಾವ!
ಪತ್ನಿಯ ಮೇಲೆ ನಿಲ್ಲದ ಸಂಶಯ, ಹತ್ಯೆ ಮಾಡಿ ದೇಹವನ್ನ ಕಾವೇರಿ ನದಿಗೆ ಎಸೆದ ಪತಿ,
ಪ್ರಶಾಂತ್​ ಬಿ.
| Updated By: ಸಾಧು ಶ್ರೀನಾಥ್​|

Updated on:Aug 11, 2023 | 1:49 PM

Share

ಅವರಿಬ್ಬರೂ ಒಂದೇ ಗ್ರಾಮದವರು. ಪರಸ್ಪರ ಒಬ್ಬರನೊಬ್ಬರು ಪ್ರೀತಿಸಿ ವಿವಾಹ ಕೂಡ ಆಗಿದ್ದರು. ಎಂಟು ವರ್ಷದ ಮುದ್ದಾದ ಮಗಳು ಕೂಡ ಇದ್ದಾಳೆ. ಇವರ ಸಂಸಾರ ನೋಡುಗರ ಕಣ್ಣು ಕುಕ್ಕುವಂತೆ ಇತ್ತು. ಆದರೆ ಆಂತಹ ಸುಂದರ ಸಂಸಾರದಲ್ಲಿ, ಕ್ರೂರಿ ಪತಿಗೆ ಅನುಮಾನವೆಂಬ ಭೂತ ಆವರಿಸಿತ್ತು. ಪದೇ ಪದೇ ಪತ್ನಿಯ ಶೀಲದ ಮೇಲೆಯೇ ಅನುಮಾನ ಆತನಿಗೆ. ಹೀಗಾಗಿ ಪತ್ನಿಯನ್ನ ಮನೆಯಲ್ಲಿಯೇ ಹಾಡುಹಗಲೇ ವೇಲ್​​ನಿಂದ ಕತ್ತು ಬಿಗಿದು ಕೊಲೆಗೈದು, ನಂತರ ಮೃತದೇಹವನ್ನ ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಎಸೆದಿದ್ದಾನೆ. ಇನ್ನು ಇದಕ್ಕೆ ಪತ್ನಿಯ ತಂದೆಯೇ ಸಾಥ್ ಕೊಟ್ಟಿದ್ದಾನೆ. ಹೌದು ಸಂಸಾರವೆಂಬ ನೌಕೆಯಲ್ಲಿ ಕಟ್ಟಿಕೊಂಡ ಹೆಂಡತಿ ಮೇಲೆ ಕ್ರೂರ ಪತಿಗೆ, ಶೀಲದ ಮೇಲೆ ಶಂಕೆ. ಹೀಗಾಗಿ ಹಾಡಹಗಲೇ ಮನೆಯಲ್ಲಿ ಪತ್ನಿಯನ್ನೇ ವೇಲ್​​ನಿಂದ ಭೀಕರವಾಗಿ ಹತ್ಯೆಗೈದು (murder), ಆನಂತರ ಮೃತದೇಹವನ್ನ ಮೊಸಳೆಗಳು ತಿನ್ನಲಿ ಎಂದು ಕಾವೇರಿ ನದಿಗೆ ಎಸೆದಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಮಂಡ್ಯಕೊಪ್ಪಲು (MandyaKoppalu) ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಪೂಜಾ (26) ಕೊಲೆಯಾದ ದುರ್ದೈವಿ. ಶ್ರೀನಾಥ್ (34) ಕ್ರೂರವಾಗಿ ಕೊಲೆ ಮಾಡಿದ ಪತಿ. ಅಂದಹಾಗೆ ಆಗಸ್ಟ್6 7ರ ಬೆಳಗ್ಗೆ ಮಗಳು ಶಾಲೆಗೆ ಹೋದವೇಳೆ ಶ್ರೀನಾಥ್, ಪತ್ನಿ ಪೂಜಾಳನ್ನ ತಾನಿದ್ದ ಬಾಡಿಗೆ ಮನೆಯಲ್ಲಿ ದುಪ್ಪಟ್ಟದಿಂದ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ. ಆನಂತರ ವಿಚಾರವನ್ನ ಪೂಜಾಳ ತಂದೆಗೂ ಮುಟ್ಟಿಸಿದ್ದಾನೆ. ಒಂದು ದಿನ ಕಾಲ ಮೃತದೇಹವನ್ನ ತನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ಮಗಳು ಶಾಲೆ ಮುಗಿಸಿಕೊಂಡು ಬಂದಾಗ ಅನುಮಾನಬಾರದಿರಲಿ ಎಂದು ಶ್ರೀನಾಥ ತನ್ನ ಪತ್ನಿಯ ದೇಹವನ್ನು ತನ್ನ ಅಮ್ಮನ ಮನೆಯಲ್ಲಿ ಇರಿಸಿದ್ದಾನೆ!

ನಂತರ ಮಾರನೇ ದಿನ ಅಂದರೇ ಆಗಸ್ಟ್ 8ರಂದು ಶ್ರೀನಾಥ್ ಹಾಗೂ ಮಾವ ದೊರೆಸ್ವಾಮಿ ಇಬ್ಬರೂ ಪ್ಲಾನ್ ಮಾಡಿಕೊಂಡಿದ್ದಾರೆ. ಶ್ರೀನಾಥ ತನ್ನದೇ ಬೈಕ್ ನಲ್ಲಿ ತರಕಾರಿ ತುಂಬುವ ಬ್ಯಾಗ್​​ನಲ್ಲಿ ಪತ್ನಿಯ ದೇಹವನ್ನು ತುಂಬುಕೊಂಡು ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರೋ ಕಾವೇರಿ ನದಿಗೆ ಎಸೆದಿದ್ದಾನೆ, ಎಸೆಯುವ ಮುನ್ನ ಮೃತದೇಹಕ್ಕೆ ಕಲ್ಲು ಕಟ್ಟಿಬಿಟ್ಟಿದ್ದಾನೆ. ಇನ್ನು ಮೃತದೇಹ ಎಸೆದಿರೋ ಜಾಗ ಸಾಕಷ್ಟು ಮೊಸಳೆಗಳು ಇರುವ ಕಾವೇರಿ ನದಿ. ಹೀಗಾಗಿ ಇಲ್ಲಿ ಮೃತದೇಹವನ್ನ ಎಸೆದರೇ ಮೊಸಳೆಗಳು ತಿನ್ನುತ್ತವೆ ಎಂಬುದು ಅವನ ಲೆಕ್ಕಾಚಾರವಾಗಿತ್ತು. ನಿನ್ನೆ ಬುಧವಾರ ಮೃತ ದೇಹವನ್ನ ಫಾರೆಸ್ಟ್ ಗಾರ್ಡ್ ಒಬ್ಬರು ನೋಡಿ, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ಪರಿಶೀಲನೆ ಮಾಡಿದಾಗ ಕೊಲೆಯ ರಹಸ್ಯ ಗೊತ್ತಾಗಿದೆ.

ಅಂದಹಾಗೆ ಶ್ರೀನಾಥ್ ಹಾಗೂ ಪೂಜಾ ಇಬ್ಬರು ಮಂಡ್ಯಕೊಪ್ಪಲು ಗ್ರಾಮದವರು. ಶ್ರೀನಾಥ್ ಲಾರಿ ಚಾಲಕನಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ಒಂಬತ್ತು ವರ್ಷದ ಕೆಳಗೆ ವಿವಾಹವಾಗಿದ್ದರು.

ಒಬ್ಬರಿಗೂ ಒಂದು ಮುದ್ದಾದ ಮಗಳು ಇದ್ದಾಳೆ. ಪ್ರೀತಿ ಮಾಡುವ ಸಂದರ್ಭದಲ್ಲಿ ನೀನೆ ಎಲ್ಲ ಎಂದಿದ್ದ. ಮದುವೆಯಾದ ನಂತರ ಕೆಲ ವರ್ಷಗಳ ಕಾಲ ಇಬ್ಬರ ಸಂಸಾರವೂ ಚೆನ್ನಾಗಿಯೇ ಇತ್ತು. ಆದರೆ ಕಳೆದ ಹಲವು ತಿಂಗಳಿಂದ ಪತ್ನಿ ಪೂಜಾಳ ಮೇಲೆ ಅನುಮಾನ ಮೂಡಿತ್ತು. ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಗಾಗ ಜಗಳ ಸಹಾ ಮಾಡುತ್ತಿದ್ದ. ಇನ್ನು ಪೂಜಾ ಏನು ಕೆಲಸ ಮಾಡದಿದ್ದರು, ಗ್ರಾಮದ ಸಮೀಪವೇ ಇರುವ ಅರಕೆರೆ ಗ್ರಾಮದಲ್ಲಿರೋ ತಂದೆಯ ಹೋಟಲ್ ಗೆ ಆಗಾಗ ಹೋಗುತ್ತಿದ್ದಳು. ಕ್ಯಾಶ್ ಕೌಂಟರ್ ನಲ್ಲಿ ಕೂರುತ್ತಿದ್ದಳು. ಜೊತೆಗೆ ಸಾಮಾಜಿಕ ಜಾಲತಾಣವಾದ ಇನ್ ಸ್ಟಾ ಗ್ರಾಂ ನಲ್ಲಿ ಸಾಕಷ್ಟು ರೀಲ್ಸ್ ಸಹಾ ಮಾಡುತ್ತಿದ್ದಳು.

ಹೀಗಾಗಿ ಪೂಜಾಳ ಮೇಲೆ ಶ್ರೀನಾಥ್ ಗೆ ಅನುಮಾನ ಮೂಡಿತ್ತು.ಈ ವಿಚಾರವಾಗಿ ಸಾಕಷ್ಟು ಗಲಾಟೆಗಳು ಕೂಡ ನಡೆಯುತ್ತಿತ್ತು. ಈ ವಿಚಾರವನ್ನ ಪೂಜಾಳ ತಂದೆಯ ಬಳಿಯೂ ಹೇಳಿದ್ದ. ಹೀಗಾಗಿ ಮನೆಯಲ್ಲಿಯೇ ಪೂಜಾಳನ್ನ ಕೊಲೆಗೈದು, ಕಾವೇರಿ ನದಿಯಲ್ಲಿ ಮೃತದೇಹ ಎಸೆದಿದ್ದಾನೆ. ಈ ಸಂಬಂಧ ಅರಕೆರೆ ಪೊಲೀಸರು ಆರೋಪಿ ಶ್ರೀನಾಥ್ ಹಾಗೂ ಪೂಜಾಳ ತಂದೆ ದೊರೆಸ್ವಾಮಿಯನ್ನ ಬಂಧಿಸಿದ್ದಾರೆ.

ಒಟ್ಟಾರೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕ್ರೂರ ಪತಿ ಹತ್ಯೆಗೈದು ಇದೀಗ ಜೈಲುಪಾಲಾಗಿದ್ದಾನೆ. ಇನ್ನು ಅಳಿಯನ ಈ ಕ್ರೂರಿತನಕ್ಕೆ ಹೆತ್ತ ತಂದಯೇ ಸಾಥ್ ನೀಡಿರುವುದು ವಿಪರ್ಯಾಸವೇ ಸರಿ.

ಮಂಡ್ಯ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Fri, 11 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ