ಮಂಡ್ಯ: ಜಿಲ್ಲೆಯ ಬಾಲಾಜಿ ರೈಸ್ ಮಿಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಮೂರು ಲಾರಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ಅಕ್ಕಿ ಜಪ್ತಿ ಮಾಡಲಾಗಿದೆ. ಆಂಧ್ರದಿಂದ ಪಡಿತರ ಅಕ್ಕಿ ತಂದು ಪಾಲಿಶ್ ಮಾಡಿ ರಫ್ತು ಮಾಡುತ್ತಿದ್ದರು. ಪಾಲಿಶ್ ಅಕ್ಕಿ ಸಣ್ಣ ಅಕ್ಕಿ ರೀತಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. 10ಕ್ಕೂ ಹೆಚ್ಚು ಬ್ರಾಂಡ್ ಮೂಲಕ ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು.
ಬಾಲಾಜಿ ರೈಸ್ ಮಿಲ್ ದಾಳಿ ನಡೆಸಿದಾಗ ನಕಲಿ ಬ್ರಾಂಡ್ ಸೃಷ್ಟಿಸಿ ಪಾಲಿಶ್ ಅಕ್ಕಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಫ್ರಿಕಾ, ಮಲೇಷ್ಯಾ, ಸೌದಿ ಹೆಸರಿನ ಬ್ರಾಂಡ್ನಲ್ಲಿ ಮಾರಾಟ ಮಾಡುತ್ತಿದ್ದರಂತೆ. ಸದ್ಯ ಆಂಧ್ರಪ್ರದೇಶದಿಂದ ತಂದಿದ್ದ 3 ಲಾರಿ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಬಾಗಲಕೋಟೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 200 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕಂದಾಯ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದರು. ಬಾಗಲಕೋಟೆ ಜಿಲ್ಲೆಯ ರಬಕವಿ ನಗರದ ಬಾರಪೇಟ ಗಲ್ಲಿಯ ಗೋಡೌನ್ನಲ್ಲಿ ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುಲೇಮಾನ್ ಎಂಬುವರ ಗೋಡೌನ್ನಲ್ಲಿ ಸಂಗ್ರಹಿಸಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿದ್ದರು.
ಪಡಿತರ ಅಕ್ಕಿ ಸೇರಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಅಕ್ಕಿಯನ್ನು ಸುಲೇಮಾನ್ ಎಂಬುವವರು ಗೋಡೌನ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದರು. ಗೋದಾಮಿನಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿರುವ ಬಗ್ಗೆ ನಿನ್ನೆ ರಾತ್ರಿ ಅನಾಮಿಕರಿಂದ ಆಹಾರ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣವೇ ಆಹಾರ ಇಲಾಖೆ ಡಿಡಿ ಶ್ರೀಶೈಲ್ ಕಂಕಣವಾಡಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದರು. ಸದ್ಯ ಅಧಿಕಾರಿಗಳು ಗೋಡೌನ್ನ ಸೀಜ್ ಮಾಡಿದ್ದರು.
ಇದನ್ನೂ ಓದಿ
ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ
ಕ್ರಿಸ್‌ಮಸ್, ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲುಗಳನ್ನು ಪ್ರಾರಂಭಿಸಲಿರುವ ಭಾರತೀಯ ರೈಲ್ವೆ; ಮಾಹಿತಿ ಇಲ್ಲಿದೆ