AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಮಳೆ ಪರಿಹಾರ ನೀಡಿದರಾ ಮಾಜಿ ಶಾಸಕ ರಮೇಶ್ ಬಾಬು?

Karnataka Legislative Council Elections: ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರು ನೀತಿ ಸಂಹಿತೆ ಉಲ್ಲಂಘನೆ ಕುರಿತು ವರದಿ ಕೇಳಿದ್ದಾರೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಮಳೆ ಪರಿಹಾರ ನೀಡಿದರಾ ಮಾಜಿ ಶಾಸಕ ರಮೇಶ್ ಬಾಬು?
ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಮಳೆ ಪರಿಹಾರ ನೀಡಿದರಾ ಮಾಜಿ ಶಾಸಕ ರಮೇಶ್ ಬಾಬು?
TV9 Web
| Edited By: |

Updated on:Nov 22, 2021 | 9:33 AM

Share

ಮಂಡ್ಯ: ಕರ್ನಾಟಕ ವಿಧಾನ ಪರಿಷರ್​ಗೆ ನಡೆಯುವ ದ್ವೈವಾರ್ಷಿಕ ಚುನಾವಣೆ (Karnataka Legislative Council Elections) ಮುಂದಿನ ತಿಂಗಳು ಡಿಸೆಂಬರ್​ನಲ್ಲಿ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು (Ramesh Babu Bandi Siddanagouda) ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀರಂಗಪಟ್ಟಣ (Srirangapatna) ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರು ನೀತಿ ಸಂಹಿತೆ ಉಲ್ಲಂಘನೆ ಕುರಿತು ವರದಿ ಕೇಳಿದ್ದಾರೆ. ಚುನಾವಣಾ ಸ್ವ್ಕಾಡ್ ಅಗಿರೊ ಹಿರಿಯ ತೋಟಗಾರಿಕೆ ಅಧಿಕಾರಿಗೆ 24 ಗಂಟೆಯೊಳಗೆ ವರದಿ ನೀಡುವಂತೆ ಸೂಚನೆ ತಹಸೀಲ್ದಾರ್ ಶ್ವೇತಾ ಸೂಚನೆ ನೀಡಿದ್ದಾರೆ.

ಶ್ರೀರಂಗಪಟ್ಟಣದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧನ ಸಹಾಯ ಮಾಡಿರುವುದಾಗಿ ವರದಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹೊಸುಂಡವಾಡಿ, ಬಸ್ತಿಪುರ ಹಾಗೂ ಹುಲಿಕೆರೆ ಗ್ರಾಮಗಳಿಗೆ ಕೆಲವು ಗ್ರಾ ಪಂ ಸದಸ್ಯರ ಜೊತೆ ಭೇಟಿ ನೀಡಿದ ಮಾಜಿ ಶಾಸಕ ರಮೇಶ್ ಬಾಬು ಮಳೆಯಿಂದಾಗಿ ಕುಸಿದಿರುವ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕವಾಗಿ 5 ಸಾವಿರ ಧನ ಸಹಾಯ ಮಾಡಿದ್ದಾರೆ. ಇದರಿಂದಾಗಿ ಹಣ ನೀಡಿ ನೀತಿ ಸಂಹಿತೆಯನ್ನು ಉಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ.

Vidhanaparishat Election: ಹೊಸುಂಡವಾಡಿ ಗ್ರಾಮದಲ್ಲಿ 5 ಸಾವಿರ ರೂ. ನೆರವು ನೀಡಿರುವ ರಮೇಶ್‌ಬಾಬು|Tv9Kannada

Published On - 8:34 am, Mon, 22 November 21