ಕಾಂಗ್ರೆಸ್ ಬರ್ಬಾದ್ ಯಾತ್ರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು

ಸುಳ್ಳು ಹೇಳಲು ನೊಬೆಲ್ ಪ್ರಶಸ್ತಿ ಇಟ್ರೆ ಸಿದ್ದರಾಮಯ್ಯ ಗೆಲ್ತಾರೆ. ಡಿಕೆಶಿ, ಸಿದ್ದರಾಮಯ್ಯಗೆ ಪಂದ್ಯ ಇಟ್ಟರೆ ಸಿದ್ದರಾಮಯ್ಯ ಗೆಲ್ತಾರೆ. ಕೊವಿಡ್ ಬಂದಾಗ ಮೋದಿ ಸರ್ಕಾರ ಹಳ್ಳಿಗಳಿಗೆ ವ್ಯಾಕ್ಸಿನ್ ಕೊಟ್ರೆ ಡಿಕೆಶಿ, ಸಿದ್ದರಾಮಯ್ಯ ಆ ವ್ಯಾಕ್ಸಿನ್ ಮುಟ್ಟಬೇಡಿ ಅಂದರು.

ಕಾಂಗ್ರೆಸ್ ಬರ್ಬಾದ್ ಯಾತ್ರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು
ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)

ಮಂಡ್ಯ: ಜನಸ್ವರಾಜ್ ಅಲ್ಲ ಜನ ಬರ್ಬಾದ್ ಯಾತ್ರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಬರ್ಬಾದ್ ಆಗುತ್ತಾ? ಜನ ಬರ್ಬಾದ್ ಆಗುತ್ತಾ? ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಕಿತ್ತಾಕಿದ್ದೇವೆ. ಕಾಂಗ್ರೆಸ್ ಬರ್ಬಾದ್ ಆಗಿದೆ, ಎಲ್ಲ ಕಡೆ ಕಾಂಗ್ರೆಸ್ ಸೋಲ್ತಿದೆ. ಕಾಂಗ್ರೆಸ್ ಬರ್ಬಾದ್ ಯಾತ್ರೆ ಅಂತ ಮಂಡ್ಯದ ಜನಸ್ವರಾಜ್ ಸಮಾವೇಶದಲ್ಲಿ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸುಳ್ಳು ಹೇಳಲು ನೊಬೆಲ್ ಪ್ರಶಸ್ತಿ ಇಟ್ರೆ ಸಿದ್ದರಾಮಯ್ಯ ಗೆಲ್ತಾರೆ. ಡಿಕೆಶಿ, ಸಿದ್ದರಾಮಯ್ಯಗೆ ಪಂದ್ಯ ಇಟ್ಟರೆ ಸಿದ್ದರಾಮಯ್ಯ ಗೆಲ್ತಾರೆ. ಕೊವಿಡ್ ಬಂದಾಗ ಮೋದಿ ಸರ್ಕಾರ ಹಳ್ಳಿಗಳಿಗೆ ವ್ಯಾಕ್ಸಿನ್ ಕೊಟ್ರೆ ಡಿಕೆಶಿ, ಸಿದ್ದರಾಮಯ್ಯ ಆ ವ್ಯಾಕ್ಸಿನ್ ಮುಟ್ಟಬೇಡಿ ಅಂದರು. ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಂಡಸ್ತನ ಹೋಗಿಬಿಡುತ್ತೆ ಎಂದ್ರು. ಕೊನೆಗೆ ಜನರೇ ಜಾಗೃತಿಯಾಗಿ ವ್ಯಾಕ್ಸಿನ್ ಹಾಕಿಸಿಕೊಂಡರು. ಸಿದ್ದು, ಡಿಕೆ ಬೆಂಬಲಿಗರು ಕದ್ದು ಬಂದು ಲಸಿಕೆ ಪಡೆದರು. ಕಾಂಗ್ರೆಸ್ ನಾಯಕರು ಸುಳ್ಳು ಹೇಳ್ತಿದ್ದಾರೆ ಅಂತ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಬಡವರು, ಸೈನಿಕರು ಮೋದಿ ಮೆಚ್ಚಿದ್ದಾರೆ. ಇವರು ಏಕವಚನದಲ್ಲಿ ಮೋದಿಗೆ ಮಾತನಾಡುತ್ತಾರೆ. ಸುಳ್ಳು ಹೇಳಿ ದೇಶವನ್ನ ದಾರಿ ತಪ್ಪಿಸುತ್ತಿದ್ದಾರೆ. ಇವತ್ತು ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ ಅಂತ ಮಂಡ್ಯದಲ್ಲಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ

ಭಾರತ ಶೀಘ್ರದಲ್ಲೇ ವಿಶ್ವಕ್ಕೆ ಹಡಗುಗಳನ್ನು ನಿರ್ಮಿಸಲಿದೆ: ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆಗೊಳಿಸಿ ರಾಜನಾಥ್ ಸಿಂಗ್ ಹೇಳಿಕೆ

ನೂತನವಾಗಿ ಆಯ್ಕೆ ಆಗುವ ಶಾಸಕರಿಗೆ ತರಬೇತಿ; ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ: ವಿಶ್ವೇಶ್ವರ ಹೆಗಡೆ ಕಾಗೇರಿ

Click on your DTH Provider to Add TV9 Kannada