ಭಾರತ ಶೀಘ್ರದಲ್ಲೇ ವಿಶ್ವಕ್ಕೆ ಹಡಗುಗಳನ್ನು ನಿರ್ಮಿಸಲಿದೆ: ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆಗೊಳಿಸಿ ರಾಜನಾಥ್ ಸಿಂಗ್ ಹೇಳಿಕೆ

TV9 Digital Desk

| Edited By: shivaprasad.hs

Updated on: Nov 21, 2021 | 3:15 PM

INS Visakhapatnam: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು (ನವೆಂಬರ್ 21) ಐಎನ್​​ಎಸ್ ವಿಶಾಖಪಟ್ಟಣಂ ಹಡಗನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.

ಭಾರತ ಶೀಘ್ರದಲ್ಲೇ ವಿಶ್ವಕ್ಕೆ ಹಡಗುಗಳನ್ನು ನಿರ್ಮಿಸಲಿದೆ: ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆಗೊಳಿಸಿ ರಾಜನಾಥ್ ಸಿಂಗ್ ಹೇಳಿಕೆ
ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್

ಭಾರತವು ತನ್ನ ಅಗತ್ಯಕ್ಕಾಗಿ ಮಾತ್ರವಲ್ಲದೆ ಪ್ರಪಂಚದ ಅಗತ್ಯಕ್ಕಾಗಿ ಹಡಗುಗಳನ್ನು ನಿರ್ಮಿಸಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಐಎನ್ಎಸ್ ವಿಶಾಖಪಟ್ಟಣಂ ಅನ್ನು ಮುಂಬೈನ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಅರ್ಪಿಸಿ, ಭಾರತೀಯ ನೌಕಾಪಡೆಗೆ ನಿಯೋಜಿಸಿದ ನಂತರ ಅವರು ಮಾತನಾಡಿದರು. ‘‘INS ವಿಶಾಖಪಟ್ಟಣಂನ ವೈಶಿಷ್ಟ್ಯಗಳು ಇಂದಿನ ಅಗತ್ಯಗಳನ್ನು ಮಾತ್ರವಲ್ಲದೆ ಭವಿಷ್ಯದ ಅಗತ್ಯಗಳನ್ನೂ ಪೂರೈಸಲಿವೆ. ಇದರ ಕಾರ್ಯಾರಂಭವು ನಮ್ಮ ಪ್ರಾಚೀನ, ಮಧ್ಯಕಾಲೀನ ಭಾರತದ ಕಡಲ ಶಕ್ತಿ, ಹಡಗು ನಿರ್ಮಾಣ ಕೌಶಲ್ಯ ಮತ್ತು ಅದ್ಭುತ ಇತಿಹಾಸವನ್ನು ನಮಗೆ ನೆನಪಿಸುತ್ತದೆ’’ ಎಂದು ಸಿಂಗ್ ನುಡಿದಿದ್ದಾರೆ.

ಇಂಡೋ- ಪೆಸಿಫಿಕ್ ಪ್ರದೇಶವನ್ನು ಸಾರ್ವತ್ರಿಕ ನಿಯಮಗಳಿಂದ ರೂಪಿಸಲಾಗಿದ್ದು, ಇದರಿಂದ ಎಲ್ಲಾ ಸದಸ್ಯ ರಾಷ್ಟ್ರಗಳೂ ಸುರಕ್ಷಿತವಾಗಿರಲಿವೆ ಎಂದು ಸಿಂಗ್ ಹೇಳಿದ್ದಾರೆ. ಈ ಪ್ರದೇಶದ ‘ಭದ್ರತೆ’ಯಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿರುವುದರಿಂದ, ಭಾರತೀಯ ನೌಕಾಪಡೆಯ ಪಾತ್ರವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ರಕ್ಷಣಾ ಸಚಿವರು ವಿವರಿಸಿದ್ದಾರೆ.

Rajanath Singh

ಐಎನ್​ಎಸ್ ವಿಶಾಖಪಟ್ಟಣಂ ನೌಕೆಯನ್ನು ನೌಕಾಪಡೆಗೆ ಹಸ್ತಾಂತರಿಸಿದ ರಾಜನಾಥ್ ಸಿಂಗ್

2023 ರ ವೇಳೆಗೆ, ಜಗತ್ತಿನಾದ್ಯಂತ ಭದ್ರತೆಯ ವೆಚ್ಚವು 2.1 ಟ್ರಿಲಿಯನ್ ಡಾಲರ್ ತಲುಪಲಿದೆ ಎಂಬ ವರದಿಗಳನ್ನು ರಕ್ಷಣಾ ಸಚಿವ ಸಿಂಗ್ ಉಲ್ಲೇಖಿಸಿದ್ದಾರೆ. ಇದರಿಂದ ಭಾರತವು ತನ್ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ರಾಷ್ಟ್ರ ಸ್ವದೇಶಿ ಹಡಗು ನಿರ್ಮಾಣದತ್ತ ಸಾಗಲು ಸಂಪೂರ್ಣ ಅವಕಾಶ ಹೊಂದಿದೆ ಎಂದು ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ ಮೂಲಕ ತೆಗೆದುಕೊಂಡ ಕ್ರಮಗಳಿಂದ, ಭಾರತೀಯ ನೌಕಾಪಡೆಯು 2014 ರಲ್ಲಿ ದೇಶದ ಮಾರಾಟಗಾರರಿಗೆ ಶೇಕಡಾ 76 ರಷ್ಟು ಏರ್ ಆಪರೇಷನ್ಸ್ ನೆಟ್ (AON) ಮತ್ತು ಶೇಕಡಾ 66ರಷ್ಟು ಕಾಸ್ಟ್ ಬೇಸಿಸ್ ಒಪ್ಪಂದಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಸುಮಾರು ಶೇಕಡಾ 90ರಷ್ಟು ನೌಕಾಪಡೆಯ ಮದ್ದುಗುಂಡುಗಳ ಒಪ್ಪಂದಗಳನ್ನೂ ಒದಗಿಸಲಾಗಿದೆ ಎಂದಿದ್ದಾರೆ.

ಪ್ರಾಜೆಕ್ಟ್ 15B ಅಡಿಯಲ್ಲಿ ನಾಲ್ಕು ಸ್ಟೆಲ್ತ್ ಗೈಡೆಡ್-ಮಿಸೈಲ್ ನಾಶ ಮಾಡುವ ಹಡಗುಗಳಲ್ಲಿ ಒಂದಾದ INS ವಿಶಾಖಪಟ್ಟಣಂ ಅನ್ನು ಸ್ಥಳೀಯವಾಗಿ Mazagon Dock Shipbuilders ತಯಾರಿಸಿದೆ. ಇದು ಮೇಕ್ ಇನ್ ಇಂಡಿಯಾ ಪ್ರಯತ್ನಕ್ಕೆ ಗಮನಾರ್ಹ ಶಕ್ತಿಯನ್ನು ನೀಡಲಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ:

ಸಂಗೀತ್​ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆಲಿಯಾ ಭಟ್​; ಲೀಕ್​​ ಆಯ್ತು ವಿಡಿಯೋ

INS Visakhapatnam: ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಂ ಇಂದು ನೌಕಾಪಡೆಗೆ ಸೇರ್ಪಡೆ; ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ರಾಜನಾಥ್ ಸಿಂಗ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada