INS Visakhapatnam: ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಂ ಇಂದು ನೌಕಾಪಡೆಗೆ ಸೇರ್ಪಡೆ; ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ರಾಜನಾಥ್ ಸಿಂಗ್​

Rajnath Singh:ದೇಶೀಯವಾದ​ ಡಿಎಂಆರ್​ 249ಎ ಉಕ್ಕು ಬಳಸಿ ಈ ಐಎನ್​ಎಸ್​ ವಿಶಾಖಪಟ್ಟಣಂ ಹಡಗನ್ನು ನಿರ್ಮಿಸಲಾಗಿದ್ದು, ಇದು ಭಾರತದಲ್ಲಿ ತಯಾರಿಸಲಾದ ಅತಿದೊಡ್ಡ ವಿಧ್ವಂಸಕ ನೌಕೆಗಳಲ್ಲಿ ಒಂದಾಗಿದೆ.

INS Visakhapatnam: ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಂ ಇಂದು ನೌಕಾಪಡೆಗೆ ಸೇರ್ಪಡೆ; ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ರಾಜನಾಥ್ ಸಿಂಗ್​
ಐಎನ್​ಎಸ್​ ವಿಶಾಖಪಟ್ಟಣಂ
Follow us
TV9 Web
| Updated By: Lakshmi Hegde

Updated on: Nov 21, 2021 | 8:08 AM

ಮುಂಬೈ: ಐಎನ್​ಎಸ್​ ವಿಶಾಖಪಟ್ಟಣಂ (INS Visakhapatnam) ಎಂಬ ಹೆಸರಿನ, ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಹಡಗನ್ನು ಇಂದು ಮುಂಬೈನ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ನೌಕಾಪಡೆಗೆ ಅಧಿಕೃತನವಾಗಿ ನಿಯೋಜಿಸುವ ಮೂಲಕ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಐಎನ್​ಎಸ್​ ವಿಶಾಖಪಟ್ಟಣಂ ಹಡಗು ಪ್ರಾಜೆಕ್ಟ್​ 15ಬಿಯ ಕ್ಷಿಪಣಿ ವಿಧ್ವಂಸಕ ಶಿಪ್​ ಆಗಿದೆ.  ಇಂದು ಯುದ್ಧ ಹಡಗನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಕರಂಬೀರ್​ ಸಿಂಗ್​ ಅವರು ಮುಖ್ಯಅತಿಥಿಯಾಗಿದ್ದು, ರಾಜನಾಥ್ ಸಿಂಗ್​ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ದೇಶೀಯವಾದ​ ಡಿಎಂಆರ್​ 249ಎ ಉಕ್ಕು ಬಳಸಿ ಈ ಐಎನ್​ಎಸ್​ ವಿಶಾಖಪಟ್ಟಣಂ ಹಡಗನ್ನು ನಿರ್ಮಿಸಲಾಗಿದ್ದು, ಇದು ಭಾರತದಲ್ಲಿ ತಯಾರಿಸಲಾದ ಅತಿದೊಡ್ಡ ವಿಧ್ವಂಸಕ ನೌಕೆಗಳಲ್ಲಿ ಒಂದಾಗಿದೆ. ಇದರ ಒಟ್ಟಾರೆ ಉದ್ದ 163 ಮೀಟರ್​​ಗಳಿದ್ದು, 704 ಟನ್​​ಗಳಷ್ಟು ಭಾರವನ್ನು ಸ್ಥಳಾಂತರ ಮಾಡಬಹುದಾಗಿದೆ. ಈ ನೌಕೆಯಲ್ಲಿ ಶಸ್ತ್ರಾಸ್ತ್ರಗಳ ಅಳವಡಿಗೆ ಮುಂದುವರಿದ ವಿಧಾನದಲ್ಲಿ ಇದ್ದು, ಬಹುವಿಧದ ಕಾರ್ಯ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.   ಈ ಕ್ಷಿಪಣಿ ಧ್ವಂಸಕ ಹಡಗು ಶಕ್ತಿಯುತ ಅನಿಲ ಮತ್ತು ಅನಿಲ ಸಂಚಲನೆಯಿಂದ ಚಾಲಿತವಾಗಲ್ಪಡುತ್ತದೆ. ಅಲ್ಲದೆ, ಎರಡು ಹೆಲಿಕಾಪ್ಟರ್​​ಗಳನ್ನು ಹೊರುವಷ್ಟು ಬಲಿಷ್ಠವಾಗಿದೆ.  ಅಷ್ಟೇ ಅಲ್ಲ, ಅತ್ಯಾಧುನಿಕ ಡಿಜಿಟಲ್​ ನೆಟ್​ವರ್ಕ್​ಗಳು, ಕಾಂಬ್ಯಾಟ್​ ಮ್ಯಾನೇಜ್​ಮೆಂಟ್​ ವ್ಯವಸ್ಥೆ, ಇಂಟಿಗ್ರೇಟೆಡ್​ ಪ್ಲಾಟ್​ಫಾರ್ಮ್​​ ನಿರ್ವಹಣಾ ವ್ಯವಸ್ಥೆಯೊಂದಿಗೆ ಹೆಚ್ಚಿನ ಮಟ್ಟದಲ್ಲಿ ಯಾಂತ್ರೀಕೃತಗೊಂಡಿದೆ.

ಐಎನ್​ಎಸ್​ ವಿಶಾಖಪಟ್ಟಣಂ ನೌಕೆ ಉದ್ಘಾಟನೆ ಬಗ್ಗೆ ಬಗ್ಗೆ ನಿನ್ನೆ ರಾತ್ರಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ನಾಳೆ (ನ.21) ಮುಂಬೈಗೆ ತೆರಳುತ್ತಿದ್ದೇನೆ. ಐಎನ್​ಎಸ್​ ವಿಶಾಖಪಟ್ಟಣಂ ಕ್ಷಿಪಣಿ ವಿಧ್ವಂಸಕ ಹಡಗನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ. ಈ ವರ್ಗದ ಒಟ್ಟು ನಾಲ್ಕು ನೌಕೆಗಳಲ್ಲಿ ಮೊದಲನೆಯದು ನಾಳೆ ನೌಕಾಪಡೆ ಸೇರುವ ಮೂಲಕ ರಾಷ್ಟ್ರಕ್ಕೆ ಸಮರ್ಪಿತವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ: ಮೌಢ್ಯದ ಹೆಸರಿನಲ್ಲಿ ಶ್ರೀತಾಳೆ ಮರ ಕಡಿಯಲು ಮುಂದಾದ ಗ್ರಾಮಸ್ಥರು; ಪರಿಸರ ಪ್ರೀಯರಿಂದ ಆಕ್ರೋಶ