ರಾಜಸ್ಥಾನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ; ಸಚಿನ್​ ಪೈಲಟ್ ಬಣದ ಐವರಿಗೆ ಮಂತ್ರಿ ಸ್ಥಾನ

TV9 Digital Desk

| Edited By: Lakshmi Hegde

Updated on: Nov 21, 2021 | 7:36 AM

Rajasthan Politics: ಮೊಟ್ಟಮೊದಲು ರಾಜೀನಾಮೆ ಶುರುವಾಗಿದ್ದು, ಕ್ಯಾಬಿನೆಟ್​ ಸಚಿವರಾಗಿದ್ದ ರಘು ಶರ್ಮಾ, ಹರೀಶ್ ಚೌಧರಿ ಮತ್ತು ಗೋವಿಂದ್​ ಸಿಂಗ್ ದೋತಸ್ರರಿಂದ. ಈ ಮೂವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದರು.

ರಾಜಸ್ಥಾನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ; ಸಚಿನ್​ ಪೈಲಟ್ ಬಣದ ಐವರಿಗೆ ಮಂತ್ರಿ ಸ್ಥಾನ
ಸಚಿನ ಪೈಲಟ್​ ಮತ್ತು ಅಶೋಕ್​ ಗೆಹ್ಲೋಟ್​

ರಾಜಸ್ಥಾನ ರಾಜಕಾರಣದಲ್ಲಿ ಮಹಾನ್​ ನಾಟಕವೇ ನಡೆದುಹೋಗಿದೆ. ಅಶೋಕ್​ ಗೆಹ್ಲೋಟ್​ ಸಂಪುಟದ ಎಲ್ಲ ಮಂತ್ರಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಎಲ್ಲರ ರಾಜೀನಾಮೆಯೂ ಅಂಗೀಕಾರವಾಗಿದೆ. ಇನ್ನು ಅಶೋಕ್​ ಗೆಹ್ಲೋಟ್​ ಇಂದು ತಮ್ಮ ಹೊಸ ಸಂಪುಟ ರಚನೆ ಮಾಡಲಿದ್ದು, ಒಟ್ಟು 15 ಹೊಸ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇವರಲ್ಲಿ 11 ಮಂದಿ ಕ್ಯಾಬಿನೆಟ್​ ದರ್ಜೆಯ ಸಚಿವರಾಗಿದ್ದರೆ, ನಾಲ್ಕು ಮಂದಿ ರಾಜ್ಯ ದರ್ಜೆ ಸಚಿವರು.  

ಒಂದು ಮಹತ್ವದ ಸಂಗತಿಯೆಂದರೆ ಇಂದು ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ 15 ಸಚಿವರಲ್ಲಿ 12 ಮಂದಿ ಹೊಸಬರು. ಅದರಲ್ಲೂ ಐವರು  ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​​ ಬಣದವರು.  ಇಂದು ಪ್ರಮಾಣ ವಚನ ಸ್ವೀಕಾರ ಮಾಡುವವರ ಹೆಸರುಗಳ ಪಟ್ಟಿಯನ್ನು ಮಾಜಿ ಶಿಕ್ಷಣ ಸಚಿವ (ನಿನ್ನೆ ರಾಜೀನಾಮೆ ಕೊಟ್ಟಿರುವ ಸಚಿವ) ಗೋವಿಂದ್ ದತಾಸ್ರಾ ತಮ್ಮ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡು ಶುಭಕೋರಿದ್ದಾರೆ.

ಮೊಟ್ಟಮೊದಲು ರಾಜೀನಾಮೆ ಶುರುವಾಗಿದ್ದು, ಕ್ಯಾಬಿನೆಟ್​ ಸಚಿವರಾಗಿದ್ದ ರಘು ಶರ್ಮಾ, ಹರೀಶ್ ಚೌಧರಿ ಮತ್ತು ಗೋವಿಂದ್​ ಸಿಂಗ್ ದೋತಸ್ರರಿಂದ. ಈ ಮೂವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ ಸೋನಿಯಾಗಾಂಧಿಯವರಿಗೆ ರಾಜೀನಾಮೆ ಸಲ್ಲಿಸಿ, ಪತ್ರವನ್ನೂ ಬರೆದಿದ್ದರು. ನಂತರ ಅಶೋಕ್​ ಗೆಹ್ಲೋಟ್​​ರ ಜೈಪುರದ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಳಿದ ಎಲ್ಲ ಸಚಿವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.   ಕಳೆದ ವರ್ಷವೂ ರಾಜಸ್ಥಾನ ರಾಜಕಾರಣದಲ್ಲಿ ಹೈಡ್ರಾಮಾ ನಡೆದಿತ್ತು. ಆಗ ಸಚಿನ್​ ಪೈಲಟ್​ ಮತ್ತು ಅವರ ಬಣದ 18 ಶಾಸಕರು ಬಂಡಾಯ ಎದ್ದು, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್​ ಕೂಡ ಮಧ್ಯಪ್ರವೇಶ ಮಾಡಿತ್ತು.

ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವ ಸಚಿವರ ಪಟ್ಟಿ ಇಲ್ಲಿದೆ: ಕ್ಯಾಬಿನೆಟ್​ ಮಂತ್ರಿಗಳು 1. ಹೇಮ್​ರಾಮ್​ ಚೌಧರಿ, 2) ಮಹೇಂದ್ರಜಿತ್​ ಸಿಂಗ್​ ಮಾಳವಿಯಾ, 3)ರಾಮ್​ಲಾಲ್​ ಜಾಟ್​, 4)ಮಹೇಶ್ ಜೋಶಿ, 5)ವಿಶ್ವೇಂದ್ರ ಸಿಂಗ್​, 6)ರಮೇಶ್​ ಮೀನಾ, 7) ಮಮತಾ ಭೂಪೇಶ್,​​ 8) ಭಜನ್​ಲಾಲ್​ ಜಟವಾ, 9)ಟಿಕಾರಾಮ್​ ಜುಲಿ 10)ಗೋವಿಂದ್​ ರಾಮ್ ಮೇಘ್ವಾಲ್​ 11)ಶಕುಂತಲಾ ರಾವತ್.

ರಾಜ್ಯ ಸಚಿವರು 1. ಜಹಿದಾ 2. ಬ್ರಿಜೇಂದ್ರ ಸಿಂಗ್​ ಓಲಾ, 3. ರಾಜೇಂದ್ರ ದುರ್ಹಾ 4. ಮುರಳೀಲಾಲ್​ ಮೀನಾ.

ಇವರಲ್ಲಿ ಹೇಮ್​ರಾಮ್​ ಚೌಧರಿ, ವಿಶ್ವೇಂದ್ರ ಸಿಂಗ್​, ರಮೇಶ್​ ಮೀನಾ, ಮುರಳೀಲಾಲ್ ಮೀನಾ ಮತ್ತು ಬ್ರಿಜೇಂದ್ರ ಸಿಂಗ್​ ಓಲಾ ಅವರು ಸಚಿನ್​ ಪೈಲಟ್ ಬಣದವರಾಗಿದ್ದಾರೆ.  ಭಜನ್​ಲಾಲ್​ ಜಾಟವ್​, ಮಮತಾ ಭೂಪೇಶ್​ ಭೈರ್ವಾ, ಟಿಕಾರಾಮ್​ ಜೂಲಿ ಎಸ್​ಸಿ ಸಮುದಾಯದವರು.

ಇದನ್ನೂ ಓದಿ:  ಅತಿಯಾಗಿ ಮೊಬೈಲ್​ ಬಳಸುತ್ತೀರಾ? ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ಇರಲಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada