ಪಾಕ್ ಪ್ರಧಾನಿಯನ್ನು ಹಿರಿಯ ಅಣ್ಣ ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಬಿಜೆಪಿ, ಅಕಾಲಿದಳ ವಾಗ್ದಾಳಿ
Navjot Singh Sidhu . ಕಾಂಗ್ರೆಸ್‌ನ ರಾಜ್ಯ ಮುಖ್ಯಸ್ಥರಾದ ಸಿಧು ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ (ಕರ್ತಾರ್‌ಪುರ ಕಾರಿಡಾರ್ ಮೂಲಕ) ಭೇಟಿ ನೀಡಿದ್ದರು. ಅದಕ್ಕೂ ಮೊದಲು ಅವರನ್ನು ಮತ್ತು ಅವರ ಪರಿವಾರದ ಸದಸ್ಯರನ್ನು ಪಾಕ್ ಅಧಿಕಾರಿಗಳು ಹಾರ ಹಾಕಿ ಸ್ವೀಕರಿಸಿದ್ದಾರೆ
ಚಂಡೀಗಢ: ನವಜೋತ್ ಸಿಂಗ್ ಸಿಧು(Navjot Singh Sidhu ) ಮತ್ತೆ ಕಾಂಗ್ರೆಸ್ನ್ನು ಸಮಸ್ಯೆಗೆ ಸಿಲುಕಿಸಿದ್ದಾರೆ. ಪಂಜಾಬ್‌ನ ಅಮೃತಸರ (ಪೂರ್ವ) ಕ್ಷೇತ್ರದ ಶಾಸಕರಾದ ಸಿಧು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಅವರ “ಬಡಾ ಭಾಯ್” ಅಥವಾ ಹಿರಿಯ ಸಹೋದರ ಎಂದು ಕರೆದಿದ್ದು, ಇದಕ್ಕೆ ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್‌ನ ರಾಜ್ಯ ಮುಖ್ಯಸ್ಥರಾದ ಸಿಧು ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ (ಕರ್ತಾರ್‌ಪುರ ಕಾರಿಡಾರ್ ಮೂಲಕ) ಭೇಟಿ ನೀಡಿದ್ದರು. ಅದಕ್ಕೂ ಮೊದಲು ಅವರನ್ನು ಮತ್ತು ಅವರ ಪರಿವಾರದ ಸದಸ್ಯರನ್ನು ಪಾಕ್ ಅಧಿಕಾರಿಗಳು ಹಾರ ಹಾಕಿ ಸ್ವೀಕರಿಸಿದ್ದಾರೆ. ಈ ಸಂವಾದದ ವಿಡಿಯೊವನ್ನು ಬಿಜೆಪಿಯ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಪಾಕ್ ಅಧಿಕಾರಿಯು ಪ್ರಧಾನ ಮಂತ್ರಿ ಖಾನ್ ಪರವಾಗಿ ಸಿಧು ಅವರನ್ನು ಸ್ವಾಗತಿಸಿದರು. ಇದಕ್ಕೆ ಮಾಜಿ ಭಾರತ ಕ್ರಿಕೆಟಿಗ ಪ್ರತಿಕ್ರಿಯಿಸುವಂತೆ ತೋರುತ್ತಿದೆ: “ಧನ್ಯವಾದಗಳು… ಅವರು (ಇಮ್ರಾನ್ ಖಾನ್) ನನ್ನ ಭಾಯಿಯಂತೆ… ನನ್ನ ಬಡಾ ಭಾಯ್.” 2018 ರಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರನ್ನು ಸಿಧು ಆಲಿಂಗಿಸಿದ ಬಗ್ಗೆ ಮತದಾರರಿಗೆ ನೆನಪಿಸುವುದೂ ಸೇರಿದಂತೆ, ಕಾಂಗ್ರೆಸ್, ಗಾಂಧಿಗಳು ಮತ್ತು “ಪಾಕಿಸ್ತಾನ ಪ್ರೇಮಿ ಸಿಧು” ವಿರುದ್ಧ ಮಾಳವೀಯ ಕಿಡಿ ಕಾರಿದ್ದಾರೆ.
Rahul Gandhi’s favourite Navjot Singh Sidhu calls Pakistan Prime Minister Imran Khan his “bada bhai”. Last time he had hugged Gen Bajwa, Pakistan Army’s Chief, heaped praises.
Is it any surprise that the Gandhi siblings chose a Pakistan loving Sidhu over veteran Amarinder Singh? pic.twitter.com/zTLHEZT3bC
— Amit Malviya (@amitmalviya) November 20, 2021
“ರಾಹುಲ್ ಗಾಂಧಿಯವರ ನೆಚ್ಚಿನ ನವಜೋತ್ ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ಬಡಾ ಭಾಯ್’ ಎಂದು ಕರೆಯುತ್ತಾರೆ. ಕಳೆದ ಬಾರಿ ಅವರು ಪಾಕ್ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ಅಪ್ಪಿಕೊಂಡು ಹೊಗಳಿದ್ದರು. ಗಾಂಧಿ ಸಹೋದರರು ಅನುಭವಿ ಅಮರಿಂದರ್ ಸಿಂಗ್ ಅವರಿಗಿಂತ ಪಾಕಿಸ್ತಾನ-ಪ್ರೀತಿಯ ಸಿಧು ಅವರನ್ನು ಆಯ್ಕೆ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ
ಅಮರಿಂದರ್ ಸಿಂಗ್ ಅವರು ತಮ್ಮದೇ ಆದ ರಾಜಕೀಯ ಸಂಘಟನೆಯನ್ನು ರಚಿಸಿದ್ದಾರೆ. ಅವರು ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದಗಳಿಗೆ ಮತ್ತು ಅಕಾಲಿದಳದ ಜತೆಗೆ ಮಾತುಕತೆಗೆ ಸಿದ್ಧ ಎಂದು ಹೇಳಿರುವ ಕಾರಣ ಮಾಳವೀಯ ಅವರು ಅಮರಿಂದರ್ ಬಗ್ಗೆ ಹೇಳಿರುವುದು ಅಚ್ಚರಿ ಉಂಟುಮಾಡಿದೆ.
ಸಲ್ಮಾನ್ ಖುರ್ಷಿದ್ ಅವರ “ಹಿಂದುತ್ವ” ಮತ್ತು ಐಸಿಸ್‌ನಂತಹ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪುಗಳನ್ನು ಹೋಲಿಸುವ ಪುಸ್ತಕವನ್ನು ಉಲ್ಲೇಖಿಸಿ ಬಿಜೆಪಿಯ ಸಂಬಿತ್ ಪಾತ್ರ ಅವರು ಕಾಂಗ್ರೆಸ್ ಅನ್ನು ‘ತುಷ್ಟಗೊಳಿಸುವ ರಾಜಕೀಯ’ ಎಂದು ಆರೋಪಿಸಿದರು.
“ಕಾಂಗ್ರೆಸ್‌ನ ಇತರ ನಾಯಕರು ಕೂಡ ಹಿಂದುತ್ವದ ವಿರುದ್ಧ ಹೇಳಿಕೆಗಳನ್ನು ನೀಡಿದರು. ರಾಹುಲ್ ಗಾಂಧಿ ಅವರು “ಹಿಂದುತ್ವ ಕೋ ಭಾರತ್ ಸೇ ಖತ್ರಾ ಹೈ” ಎಂದು ಹೇಳಿದರು. ಇದು “ವಿನ್ಯಾಸಗೊಳಿಸಿದ ಮಾದರಿ… ಪಾಕ್ ಪರ ಹೇಳಿಕೆಗಳನ್ನು ನೀಡುವುದು” ಎಂದು ಪಾತ್ರಾ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿಯಂತೆಯೇ ಅಕಾಲಿದಳ ಕೂಡಾ ಟೀಕೆ ಮಾಡಿದೆ. ಅಕಾಲಿದಳದ ಮುಖ್ಯಸ್ಥ ಸುಖಬೀರ್ ಬಾದಲ್ ಅವರು ಸಿಧು ಅವರ “ಪದೇ ಪದೇ ದೇಶದ ಸೈನಿಕರನ್ನು ಅವಮಾನಿಸುತ್ತಿದ್ದಾರೆ ಮತ್ತು ಹತಾಶಗೊಳಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು. ಅಮರಿಂದರ್ ಸಿಂಗ್ ಅವರೊಂದಿಗಿನ ಜಟಾಪಟಿಯಲ್ಲಿ ಸಿಧು ಅವರನ್ನು ಬೆಂಬಲಿಸಿದ ಗಾಂಧಿ ಕುಟುಂಬ ಈ ಬಗ್ಗೆ ವಿವರಣೆ ನೀಡಿ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದರು. “ಸಿಧು ಅವರ ಮಾತುಗಳು ಅವರ ಸ್ವಂತ ಇಚ್ಛೆಯಿಂದ ಕೂಡಿದೆಯೇ ಅಥವಾ ಅವರು ಗಾಂಧಿ ಕುಟುಂಬದ ಪರವಾಗಿ ಮಾತನಾಡುತ್ತಾರೆಯೇ ಎಂಬುದನ್ನು ಅವರು ವಿವರಿಸಬೇಕು. ಪಂಜಾಬಿಗಳು ಗಾಂಧಿ ಕುಟುಂಬವು ರಾಜ್ಯದಲ್ಲಿ ಮತ್ತೆ ತೊಂದರೆಯನ್ನು ಉಂಟುಮಾಡುತ್ತಿದೆಯೇ ಎಂದು ತಿಳಿಯಲು ಬಯಸುತ್ತಾರೆ” ಎಂದು ಬಾದಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಎಪಿ ನಾಯಕ ರಾಘವ್ ಚಡ್ಡಾ ಕೂಡ “ಪಂಜಾಬ್‌ನ ಆಡಳಿತ ಪಕ್ಷ ಮತ್ತು ಮುಖ್ಯಮಂತ್ರಿ ಪಾಕ್ ಪ್ರಧಾನಿ ಮತ್ತು ಪಾಕಿಸ್ತಾನದ ಮೇಲೆ ತಮ್ಮ ಪ್ರೀತಿಯನ್ನು ಪ್ರತಿಪಾದಿಸುತ್ತಿರುವುದು ತುಂಬಾ ಕಳವಳಕಾರಿಯಾಗಿದೆ ಎಂದು ಹೇಳಿದರು. ಪಂಜಾಬ್‌ನ ಆಡಳಿತ ಪಕ್ಷದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿಗಳು ಪಾಕ್ ಪ್ರಧಾನಿ ಮತ್ತು ಪಾಕಿಸ್ತಾನದ ಮೇಲೆ ತಮ್ಮ ಪ್ರೀತಿಯನ್ನು ತೋರಿಸುತ್ತಿರುವುದು ಕಳವಳಕಾರಿ. ಭಯೋತ್ಪಾದನೆಯನ್ನು ರಫ್ತು ಮಾಡುವ, ಭಯೋತ್ಪಾದನಾ ಘಟಕಗಳನ್ನು ಕಾರ್ಯಗತಗೊಳಿಸುವ, ಟಿಫಿನ್ ಬಾಂಬ್‌ಗಳು ಮತ್ತು ಡ್ರೋನ್ ಶಸ್ತ್ರಾಸ್ತ್ರಗಳು/ಡ್ರಗ್‌ಗಳನ್ನು ಪಂಜಾಬ್‌ಗೆ ಕಳುಹಿಸುವ ದೇಶ. ಸಿಧು ಮತ್ತು ಚನ್ನಿ ನಮ್ಮ ಯೋಧರಪ ಹುತಾತ್ಮರಾಗಿದ್ದಕ್ಕೆ ಬೆಲೆ ಕಲ್ಪಿಸುವುದಿಲ್ಲವೇ ಎಂದು ಚಡ್ಡಾ ಪ್ರಶ್ನಿಸಿದ್ದಾರೆ. ಪಂಜಾಬ್ ಚುನಾವಣಗೆ ತಿಂಗಳುಗಳ ಮೊದಲು ಕಾಂಗ್ರೆಸ್ ಮೇಲೆ ಈ ರೀತಿ ವಾಗ್ದಾಳಿ ನಡೆದಿದೆ.
ಸಿಧು ಅವರ ಹೇಳಿಕೆಯನ್ನು ಅವರ ಪಕ್ಷವೂ ಟೀಕಿಸಿದೆ. “ಇಮ್ರಾನ್ ಖಾನ್ ಯಾರಿಗಾದರೂ ಹಿರಿಯ ಸಹೋದರನಾಗಿರಬಹುದು ಆದರೆ, ಭಾರತಕ್ಕೆ ಪಾಕಿಸ್ತಾನ ಐಎಸ್ಐ-ಮಿಲಿಟರಿ ಸಂಯೋಜನೆಯ ಬೆಕ್ಕಿನ ಪಂಜ” ಎಂದು ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.
ಆದಾಗ್ಯೂ, ಚುನಾವಣೆಗೆ ಮುಂಚಿತವಾಗಿ ಪಕ್ಷದ ಶ್ರೇಣಿಯಲ್ಲಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುವುದಕ್ಕಾಗಿ ಸಚಿವ ಪರ್ಗತ್ ಸಿಂಗ್ ಅವರು ಸಿಧು ಅವರನ್ನು ಸಮರ್ಥಿಸಿಕೊಂಡರು. “ಪ್ರಧಾನಿ ಮೋದಿ (ಪಾಕ್‌ಗೆ) ಹೋದಾಗ ಅವರು ‘ದೇಶ ಪ್ರೇಮಿ’. ಸಿಧು ಹೋದಾಗ ಅವರು ‘ದೇಶ ದ್ರೋಹಿ’. ನಾನು ನಿಮ್ಮನ್ನು ಸಹೋದರ ಎಂದು ಕರೆಯಲಾರೆವೇ? ನಾವು ಗುರುನಾನಕ್ ದೇವ್ ಅವರ ತತ್ವವನ್ನು ಅನುಸರಿಸುತ್ತೇವೆ” ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.
ಆದಾಗ್ಯೂ ಟೀಕೆಗಳ ಬಗ್ಗೆ ಸಿಧು ತಲೆಕೆಡಿಸಿಕೊಂಡಿಲ್ಲ. ಬಿಜೆಪಿಯ ಆರೋಪಗಳ ಕುರಿತು ಕೇಳಿದಜಾಗ ಬಿಜೆಪಿಯವರು ಏನು ಬೇಕಾದರೂ ಹೇಳಲಿ ಎಂದರು.
ಕಾರಿಡಾರ್ ಅನ್ನು ಮತ್ತೆ ತೆರೆದಾಗ ಸಿಧು ಅವರು ಪ್ರಧಾನಿ ಖಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರನ್ನೂ ಹೊಗಳಿದರು ಮತ್ತು ಪಂಜಾಬ್ ಮೂಲಕ ಗಡಿಯಾಚೆಗಿನ ವ್ಯಾಪಾರವನ್ನು ಪುನಃ ತೆರೆಯುವಂತೆ ಕರೆ ನೀಡಿದರು. ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮುಚ್ಚಲಾಗಿದ್ದ ಕರ್ತಾರ್‌ಪುರ ಕಾರಿಡಾರ್ ಅನ್ನು ಭಾರತವು ಇತ್ತೀಚೆಗೆ ಮತ್ತೆ ತೆರೆದಿದೆ. ಯಾತ್ರಾರ್ಥಿಗಳು ಸೇರಿದಂತೆ ಪಂಜಾಬ್‌ನ ರಾಜಕೀಯ ನಾಯಕರು ಪಾಕಿಸ್ತಾನದ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಚರಂಜಿತ್ ಚನ್ನಿ ನೇತೃತ್ವದ ಗುಂಪಿನಿಂದ ಸಿಧು ಅವರನ್ನು ಹೊರಗಿಟ್ಟ ನಂತರ ಆ ಭೇಟಿಗಳು ಹೆಚ್ಚು ವಿವಾದವನ್ನು ಉಂಟುಮಾಡಿದವು.
ಇದನ್ನೂ ಓದಿ: ಸಿಧು ತಮ್ಮ ಮಕ್ಕಳನ್ನು ಗಡಿ ಕಾಯಲು ಕಳಿಸಿ, ಬಳಿಕ ಇಮ್ರಾನ್ರನ್ನು ಅಣ್ಣ ಎನ್ನಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್