ಕರ್ನಾಟಕದಲ್ಲಿರೋದು ಹೆಚ್​ಡಿ ದೇವೇಗೌಡ ಪ್ರೊಡಕ್ಷನ್ ಕಂಪನಿ‌ ಜನ: ಹೆಚ್​ಡಿ ರೇವಣ್ಣ ವಾಗ್ದಾಳಿ

ಕುಮಾರಣ್ಣ ಆಗ ಕೊಟ್ಟಿದ್ದಕ್ಕೆ ಇವರು ಶಂಖ ಊದಿದ್ದಲ್ಲವೇ? ಇಲ್ಲವಾದರೆ ಶಂಖ ಊದಲು ಇವರಿಗೆ ಜನರು ಇರಲಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಹೆಚ್​.ಡಿ.ರೇವಣ್ಣ ವ್ಯಂಗ್ಯ ಆಡಿದ್ದಾರೆ.

ಕರ್ನಾಟಕದಲ್ಲಿರೋದು ಹೆಚ್​ಡಿ ದೇವೇಗೌಡ ಪ್ರೊಡಕ್ಷನ್ ಕಂಪನಿ‌ ಜನ: ಹೆಚ್​ಡಿ ರೇವಣ್ಣ ವಾಗ್ದಾಳಿ
ಹೆಚ್.ಡಿ. ರೇವಣ್ಣ

ಹಾಸನ: ಕರ್ನಾಟಕ ರಾಜ್ಯವನ್ನು ಹೇಳೋರು ಕೇಳೋರು ಯಾರೂ ಇಲ್ಲ. ನಮ್ಮ ರೈತರು ಸತ್ರೂ ಪರ್ವಾಗಿಲ್ಲ. ಇವರಿಗೆ ಚುನಾವಣೆ ಬೇಕು. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಲು ಹೊರಟಿವೆ. ಇವರಿಗೆ ದೇವರೇ ಶಿಕ್ಷೆ ಕೊಡುವಂತಹ ಕಾಲ ಬಂದೇ ಬರುತ್ತೆ. ಜೆಡಿಎಸ್​ಗೆ ಶಂಖ ಊದೋರು ಯಾರೂ ಇಲ್ಲ ಅಂತಾರೆ. ಈ ರಾಜ್ಯದಲ್ಲಿ ಕುಮಾರಣ್ಣ, ಕಾಂಗ್ರೆಸ್​ನವರು ಇಲ್ಲದಿದ್ದರೆ, ಬಿಜೆಪಿಯಲ್ಲಿ ಶಂಖ ಊದಲು ಜನರನ್ನು ಹುಡುಕಬೇಕಿತ್ತು ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ.

ಸಚಿವ ಈಶ್ವರಪ್ಪ ಹೇಳಿಕೆಗೆ ಹೆಚ್​.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. ಕುಮಾರಣ್ಣ 2006ರಲ್ಲಿ ಶಂಖ ಊದಿ ಎಂದು ಕೊಟ್ಟರು. ಕುಮಾರಣ್ಣ ಆಗ ಕೊಟ್ಟಿದ್ದಕ್ಕೆ ಇವರು ಶಂಖ ಊದಿದ್ದಲ್ಲವೇ? ಇಲ್ಲವಾದರೆ ಶಂಖ ಊದಲು ಇವರಿಗೆ ಜನರು ಇರಲಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಹೆಚ್​.ಡಿ.ರೇವಣ್ಣ ವ್ಯಂಗ್ಯ ಆಡಿದ್ದಾರೆ.

ಕರ್ನಾಟಕದಲ್ಲಿರೋದು ಹೆಚ್​.ಡಿ. ದೇವೇಗೌಡ ಪ್ರೊಡಕ್ಷನ್ ಕಂಪನಿ‌ ಜನ. ಹೆಚ್.​ಡಿ. ದೇವೇಗೌಡ ಎಲ್ಲರನ್ನು ಸೃಷ್ಟಿಸಿ ಎಲ್ಲ ಪಕ್ಷಗಳಿಗೂ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಾಗಿದ್ದರೆ ಕುಟುಂಬದಿಂದ ಒಬ್ಬರು ಎಂದು ಕಾನೂನು ಮಾಡಿ. ಕಾನೂನು ಮಾಡಿದ್ರೆ ಅದಕ್ಕೆ ನಾನೂ ಕೂಡ ಬದ್ಧ ಎಂದು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ.

ಈ ಸರ್ಕಾರ ಯಾವಾಗ ಹೋಗುತ್ತೋ ಎಂದು ಜನರ ಶಾಪ ಇದೆ. ಇದು ಬಡ ರೈತರನ್ನು ಮುಗಿಸಲು ಬಂದಿರುವಂತಹ ಸರ್ಕಾರ. ಇವರಿಗೆ ಜನರು ಸತ್ತರೂ ಪರವಾಗಿಲ್ಲ ಶಂಖ ಊದಬೇಕು. ದೇವಾಲಯದಲ್ಲಿರುವಂತೆ ಬಿ.ಎಸ್. ಯಡಿಯೂರಪ್ಪ ಹುಂಡಿ ಇಟ್ಟುಕೊಂಡಿದ್ದರು. ಯಾರು ಹುಂಡಿ ಕಾಸ್ ಕೊಡುತ್ತಾರೆ ಅವರ ಕೆಲಸವಾಗುತ್ತೆ. ದೇವೇಗೌಡರಿಗೂ ಹೇಳ್ತೀನಿ, ಕುಮಾರಸ್ವಾಮಿಗೂ ಹೇಳ್ತೀನಿ. 2 ರಾಷ್ಟ್ರೀಯ ಪಕ್ಷಗಳನ್ನೂ ದೂರವಿಡಿ ಎಂದು ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ದೇಶಕ್ಕೆ ಕಂಟಕ ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು: ಕ್ಷೇತ್ರದ ಜೆಡಿಎಸ್‌ ಟಿಕೆಟ್ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೆಚ್‌.ಡಿ. ಕುಮಾರಸ್ವಾಮಿ ಹೇಳಿಕೆ
ಪರಿಷತ್‌ನ ಮೈಸೂರು ಕ್ಷೇತ್ರದ ಜೆಡಿಎಸ್‌ ಟಿಕೆಟ್ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೆಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಟಿಕೆಟ್ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚಿಸುವೆ. ಕಾರ್ಯಕರ್ತರ ಸಭೆ ಬಳಿಕ ಅಂತಿಮ ನಿರ್ಧಾರ ತಿಳಿಸ್ತೇವೆ. ರಾಜಕಾರಣ ಏನೇ ಇರಲಿ ಸಂದೇಶ್ ನಾಗರಾಜ್ ಸ್ನೇಹಿತರು. ಇವತ್ತು ಊಟಕ್ಕೆ ಬಂದಿದ್ದ ವೇಳೆ ಸಂದೇಶ್ ನಾಗರಾಜ್ ಭೇಟಿ ಮಾಡಿದ್ದೇನೆ. ಟಿಕೆಟ್ ಬಗ್ಗೆ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನಿಸ್ತೇವೆ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಂದೇಶ್ ನಾಗರಾಜ್ ಮತ್ತೆ ಜೆಡಿಎಸ್ ಬಾಗಿಲು ಬಡಿದಿದ್ದಾರೆ. 3 ವರ್ಷದ ಬಳಿಕ ಕುಮಾರಸ್ವಾಮಿಯನ್ನು ಸಂದೇಶ್ ನಾಗರಾಜ್ ಭೇಟಿಯಾಗಿದ್ದಾರೆ. ಮೈಸೂರಿನ ಜೆಡಿಎಸ್​ ಮುಖಂಡರ ಮನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ಆಗಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಸಂದೇಶ್ ಜೆಡಿಎಸ್ ಬಾಗಿಲು ತಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಆಪ್ತ ಸಿ.ಎನ್. ಮಂಜೇಗೌಡ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಮೈಸೂರಿನ ವಿಜಯನಗರದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆ ಆಗಿದ್ದಾರೆ. ಹೆಚ್​.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮಂಜೇಗೌಡ JDSಗೆ ಸೇರ್ಪಡೆ ಆಗಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ತಂದೆಗೆ, ಮಧ್ಯಾಹ್ನ ಮಗನಿಗೆ, ಸಂಜೆ ಸೊಸೆಗೆ ನಮಸ್ಕಾರ ಮಾಡಬೇಕು: ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಇದನ್ನೂ ಓದಿ: ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ: ಬಿಜೆಪಿ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಟೀಕೆ

Click on your DTH Provider to Add TV9 Kannada