ಬೆಳಗ್ಗೆ ತಂದೆಗೆ, ಮಧ್ಯಾಹ್ನ ಮಗನಿಗೆ, ಸಂಜೆ ಸೊಸೆಗೆ ನಮಸ್ಕಾರ ಮಾಡಬೇಕು: ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಬೆಳಗ್ಗೆ ತಂದೆಗೆ ನಮಸ್ಕಾರ, ಮಧ್ಯಾಹ್ನ ಮಗನಿಗೆ ನಮಸ್ಕಾರ, ಸಂಜೆ ಸೊಸೆಗೆ ಸಮಸ್ಕಾರ ಮಾಡಬೇಕು, ಇದಕ್ಕೆ ಬೇಸತ್ತು ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಅವರು ಬಿಜೆಪಿಗೆ ಬಂದರು ಎಂದು ಹೆಚ್​ಡಿಡಿ ಕುಟುಂಬದ ವಿರುದ್ಧ ಸಚಿವೆ ಶೋಭಾ ವಾಗ್ದಾಳಿ ನಡೆಸಿದ್ದಾರೆ.

ಬೆಳಗ್ಗೆ ತಂದೆಗೆ, ಮಧ್ಯಾಹ್ನ ಮಗನಿಗೆ, ಸಂಜೆ ಸೊಸೆಗೆ ನಮಸ್ಕಾರ ಮಾಡಬೇಕು: ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Nov 21, 2021 | 7:58 PM

ಹಾಸನ: ಈ ಜಿಲ್ಲೆಯಲ್ಲೂ ಪ್ರಜಾತಂತ್ರ ವ್ಯವಸ್ಥೆ ಜಾರಿಯಾಗಬೇಕು. ಹಾಸನ ಜನ ಬುದ್ಧಿವಂತರು, ಕೃಷಿಕರು, ಒಳ್ಳೆ ನಾಯಕರ ಜಿಲ್ಲೆ. ಆದರೆ ನಿರಂತರವಾಗಿ ಕುಟುಂಬಕ್ಕೆ ಯಾಕೆ ಶರಣಾಗುತ್ತೀರಿ? ಒಂದು ಕುಟುಂಬಕ್ಕೆ ಯಾಕೆ ಶರಣಾಗ್ತಿದ್ದೀರಿ ಅರ್ಥವಾಗುತ್ತಿಲ್ಲ. ವಿಧಾನಸಭೆಗೆ ಹೆಚ್.ಡಿ.ರೇವಣ್ಣ, ಸಂಸತ್​​ಗೆ ಪ್ರಜ್ವಲ್ ಸಾಕಿತ್ತು. ಆದರೆ ಇನ್ನೂ ಎಷ್ಟು ಜನರನ್ನು ನೀವು ಗೆಲ್ಲಿಸುತ್ತೀರಾ ಹೇಳಿ? ಎಂದು ಹಾಸನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು (ನವೆಂಬರ್ 21) ಹೇಳಿಕೆ ನೀಡಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆ ಅಣಕಿಸುವಂತೆ ರಾಜಕೀಯ ಮಾಡ್ತಿದ್ದಾರೆ. ಹೆಂಡ ಮಾರುವವರನ್ನು ಕರೆತರುವ ಪ್ರಯತ್ನ ಮಾಡುತ್ತಿದೆ. ಆದರೆ ನಾವು ಒಳ್ಳೆಯ ಅಭ್ಯರ್ಥಿಯನ್ನ ತಂದು ನಿಲ್ಲಿಸಿದ್ದೇವೆ. ಕೆ. ಗೋಪಾಲಯ್ಯನವರು ಜೆಡಿಎಸ್ ಪಕ್ಷ ತೊರೆದು ಬಂದರು. ಬೆಳಗ್ಗೆ ತಂದೆಗೆ ನಮಸ್ಕಾರ, ಮಧ್ಯಾಹ್ನ ಮಗನಿಗೆ ನಮಸ್ಕಾರ, ಸಂಜೆ ಸೊಸೆಗೆ ಸಮಸ್ಕಾರ ಮಾಡಬೇಕು, ಇದಕ್ಕೆ ಬೇಸತ್ತು ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಅವರು ಬಿಜೆಪಿಗೆ ಬಂದರು ಎಂದು ಹೆಚ್​ಡಿಡಿ ಕುಟುಂಬದ ವಿರುದ್ಧ ಸಚಿವೆ ಶೋಭಾ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡ ಕುಟುಂಬದಲ್ಲಿ ರಾಜಕಾರಣಕ್ಕೆ ಬರದಿರೋದು ಯಾರು? ಹೆಚ್.ಡಿ ದೇವೇಗೌಡ ಕುಟುಂಬದಲ್ಲಿ ಎಷ್ಟು ಜನ ರಾಜಕೀಯದಲ್ಲಿದ್ದಾರೆ ಗೊತ್ತಾ? ದೇವೇಗೌಡ ಕುಟುಂಬದಲ್ಲಿ ರಾಜಕಾರಣಕ್ಕೆ ಬರದಿರೋದು ಯಾರು? ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಭವಾನಿ, ನಿಖಿಲ್, ಪ್ರಜ್ವಲ್, ಅನಿತಾ ಇವರನ್ನ ಬಿಟ್ಟರೆ ಬೇರೆ ಯಾರಿದ್ದಾರೆ? ಎಂದು ಹಾಸನದಲ್ಲಿ ಜೆಡಿಎಸ್​ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರನ್ನು ಚುನಾವಣೆಯಲ್ಲಿ ನಾವು ಸೋಲಿಸಿದ್ವಾ? ಮಂಡ್ಯ ಎಂಪಿ ಚುನಾವಣೆಯಲ್ಲಿ ನಿಖಿಲ್ ಸೋಲಿಸಿಲ್ಲವೆ? 8 ಜನ ರಾಜಕೀಯದಲ್ಲಿರುವ ಕುಟುಂಬ ಬೇರೆ ಯಾವುದಿದೆ? ಒಂದೇ ಕುಟುಂಬದ 8 ಜನ ರಾಜಕಾರಣ ಮಾಡಬಾರದು. ಅದನ್ನು ಈ ಚುನಾವಣೆ ಮೂಲಕ ನಿರ್ಧಾರ ಮಾಡಬೇಕು ಎಂದು ದೇವೇಗೌಡ ಕುಟುಂಬದ ವಿರುದ್ಧ ಸಚಿವ ಈಶ್ವರಪ್ಪ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ

ಇದನ್ನೂ ಓದಿ: ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ: ಬಿಜೆಪಿ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಟೀಕೆ

Published On - 7:42 pm, Sun, 21 November 21