ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಮಗೆ 2 ಕಣ್ಣುಗಳಿದ್ದಂತೆ. ತುಮಕೂರಿನಿಂದ ಜನಜಾಗೃತಿ ಕಾರ್ಯಕ್ರಮ ಶುಭಾರಂಭ ಆಗಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದರಲ್ಲಿ ಸಂಶಯವೇ ಇಲ್ಲ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರು: ಕೃಷಿ ಕಾಯ್ದೆ ವಿರೋಧಿಸಿ ಹೋರಾಟದಲ್ಲಿ 700 ರೈತರ ಸಾವು ಸಂಭವಿಸಿದೆ. ಪ್ರಾಣಾರ್ಪಣೆ ಮಾಡಿದ ರೈತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಏನು ಮಾಡಲಿಲ್ಲವೆಂದು ಹೇಳುತ್ತಾರೆ. ಪ್ರಧಾನಿ, ಸಂಪುಟ ಸದಸ್ಯರು ಏನೂ ಮಾಡಿಲ್ಲವೆಂದು ಹೇಳ್ತಾರೆ. ಕಾಂಗ್ರೆಸ್ ಚರಿತ್ರೆ, ಇತಿಹಾಸವನ್ನ ಬಿಜೆಪಿಯವರು ಓದಿಕೊಳ್ಳಲಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ರು. ಸ್ವಾತಂತ್ರ್ಯ ನಂತರ 54 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಭವ್ಯ ಭಾರತ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಭಾಕ್ರಾನಂಗಲ್, ಹೆಚ್ಎಎಲ್, ಡಿಆರ್ಡಿಒ, ಹೆಚ್ಎಂಟಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕಟ್ಟಿದ್ದು ನೀವಾ? ದೇಶದಲ್ಲಿ ಹಸಿರು ಕ್ರಾಂತಿ ನಿಮ್ಮಿಂದ ಆಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಮಾಡಿರುವ ಸಾಧನೆ ಮೇಲೆ ನೀವು ನಿಂತಿದ್ದೀರಿ. ಭಾರತ ಸಾಧಿಸಿದೆ ಎಂದು ಹೊರದೇಶದಲ್ಲಿ ಮೋದಿ ಹೇಳ್ತಾರೆ. ದೇಶದ ಬಗ್ಗೆ ಬಿಜೆಪಿಯವರಿಗೆ ಜ್ಞಾನ, ಪರಿಜ್ಞಾನ ಇದೆಯಾ? ದೇಶವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿರುವ ಬಿಜೆಪಿ ಕೋಮುವಾದಿ ಪಕ್ಷ ಎಂದು ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಹೋಗಿ ಹೇಳಬೇಕು. ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಮಗೆ 2 ಕಣ್ಣುಗಳಿದ್ದಂತೆ. ತುಮಕೂರಿನಿಂದ ಜನಜಾಗೃತಿ ಕಾರ್ಯಕ್ರಮ ಶುಭಾರಂಭ ಆಗಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದರಲ್ಲಿ ಸಂಶಯವೇ ಇಲ್ಲ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವು ಕಾಂಗ್ರೆಸ್ಸಿಗರು, ತ್ರಿವರ್ಣ ಧ್ವಜದ ಹಕ್ಕುದಾರರು ನಾವು ನಾವು ಕಾಂಗ್ರೆಸ್ಸಿಗರು, ತ್ರಿವರ್ಣ ಧ್ವಜದ ಹಕ್ಕುದಾರರು ನಾವು. ದೇಶದ ಜನರ ಶಕ್ತಿ, ರೈತರ ಶಕ್ತಿ ಯುಟರ್ನ್ ಹೊಡೆಸಿದೆ. ಕೇಂದ್ರ ಸರ್ಕಾರ ಯುಟರ್ನ್ ಹೊಡೆಯುವಂತೆ ಮಾಡಿಸಿದೆ. ಎಲ್ಲಾ ರೈತರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಈ ದೇಶದ ಯುವ ಜನತೆ, ಮಹಿಳೆಯರ ಮೇಲೆ ನಂಬಿಕೆಯಿದೆ. ನೀವು ಹೋರಾಟ ಆರಂಭಿಸಿದರೆ ಸರ್ಕಾರ ತಡೆಯಲಾಗಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದ ಪ್ರಧಾನಿ, ಬಿಜೆಪಿ ಅಧಿಕಾರಕ್ಕೆ ಬಂದು 7 ವರ್ಷವಾದರೂ ದ್ವಿಗುಣವಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಬದಲು ಬೆಲೆ ಏರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಸಿ ಪಿಕ್ಪಾಕೆಟ್ ಮಾಡುತ್ತಿದ್ದಾರೆ ಎಂದು ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೈಎಲೆಕ್ಷನ್ ರಿಸಲ್ಟ್ ಬಂದ ರಾತ್ರಿಯೇ ತೈಲ ಬೆಲೆ ಇಳಿಸಿದ್ದರು. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಿರಂತರ ಆಗಿದೆ. ವಿಧಾನಸೌಧದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ. ಕೊರೊನಾ ಕಾಲದಲ್ಲಿ ಉಂಟಾದ ನಷ್ಟಕ್ಕೆ ಪರಿಹಾರ ನೀಡಲಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಘೋಷಣೆ ಮಾಡಿದ್ದರು. ಯಾರಿಗಾದರೂ ಪರಿಹಾರದ ಹಣ ತಲುಪಿದೆಯಾ? ಕೊರೊನಾ ಕಾಲದ ಭ್ರಷ್ಟಾಚಾರವನ್ನು ಜನರ ಅರಿತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಇರುವುದು ಅತಿದೊಡ್ಡ ಭ್ರಷ್ಟ ಸರ್ಕಾರ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಮಳೆಯಿಂದ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ; ಆದ್ರೆ ಸಿಎಂ ಚಲನಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ ಮಳೆಯಿಂದ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಆದ್ರೆ ಸಿಎಂ ಚಲನಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ. ನನ್ನ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಅಂತ ಹೇಳಿದ್ರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದಾರೆ. ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿ ಮೋದಿಗೆ ಪತ್ರ ಕಳಿಸಿದ್ದಾರೆ. ಯಾರಿಗೆ ಎಷ್ಟು ಕಮಿಷನ್ ಕೊಡಬೇಕೆಂದು ಪತ್ರ ಬರೆದಿದ್ದಾರೆ. 35ರಿಂದ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟಾದ್ಮೇಲೂ ರಾಜ್ಯ ಸರ್ಕಾರ ಇರಬೇಕಾ? ರಾಜ್ಯ ಸರ್ಕಾರದ ಭ್ರಷ್ಟಚಾರ ಬಿಚ್ಚಿಟ್ಟು ಬೆತ್ತಲೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಹೀಗೆ ಹೇಳಿಕೆ ನೀಡಿದ್ದಾರೆ.
ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಸಿಎಂ ಕ್ಯಾರೆ ಎನ್ನುತ್ತಿಲ್ಲ. ಮಳೆ ಬಂದು ಬೆಳೆ ನಷ್ಟವಾಗಿದೆ, ಕೂಡಲೇ ಪರಿಹಾರ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ಬಿಜೆಪಿ ಜನಸ್ವರಾಜ್ ಯಾತ್ರೆ ನಡೆಸುತ್ತಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಹಾನ್ ಪೆದ್ದ. ವೋಟು ಕೊಟ್ಟರೆ ಮಾತ್ರ ದುಡ್ಡು ಕೊಡೋದು ಎಂದು ಹೇಳ್ತಾರೆ. ಈಶ್ವರಪ್ಪ ಅವರ ತಾತನ ಮನೆಯ ದುಡ್ಡು ಕೊಡುತ್ತಾನಾ? ಸಂವಿಧಾನ, ಪ್ರಜಾಪ್ರಭುತ್ವ ಅಂದ್ರೆ ಏನೆಂದು ಇವರಿಗೆ ಗೊತ್ತಿಲ್ಲ. ಇಂಥವರ ಕೈಯಲ್ಲಿ ಅಧಿಕಾರವಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
2 ದಿನಗಳಲ್ಲಿ ಪರಿಷತ್ ಎಲೆಕ್ಷನ್‌ಗೆ ‘ಕೈ’ ಅಭ್ಯರ್ಥಿಗಳ ಪ್ರಕಟ ಮಾಡುತ್ತೇವೆ. ವಿಧಾನಪರಿಷತ್‌ನ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕಾಗಿದೆ. ತುಮಕೂರಿನಲ್ಲಿ ಕಳೆದ ಬಾರಿ ನಮ್ಮ ಅಭ್ಯರ್ಥಿ ಸೋತಿದ್ದರು. ಇಂದು ಗೆಲ್ಲುವ ಅವಕಾಶ ಕಾಂಗ್ರೆಸ್‌ಗೆ ಇದೆ. ಬಹುತೇಕ ರಾಜೇಂದ್ರನೇ ಅಭ್ಯರ್ಥಿ, ಇನ್ನೂ ಘೋಷಣೆ ಆಗಿಲ್ಲ. ಈ ಸಲ ‘ಕೈ’ ಅಭ್ಯರ್ಥಿ ರಾಜೇಂದ್ರ ನೂರಕ್ಕೆ ನೂರು ಗೆಲ್ಲಬೇಕು. ಬಿಜೆಪಿಯ ಅಭ್ಯರ್ಥಿ ಗೆಲ್ಲುವುದಕ್ಕೆ ಯಾವುದೇ ಸಕಾರಣ ಇಲ್ಲ. ಬಿಜೆಪಿಯವ್ರು ಜನ ವಿರೋಧಿಗಳೆಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ; ಜನಸ್ವರಾಜ್ ಯಾತ್ರೆ ಅಲ್ಲ, ಇದು ಜನಬರ್ಬಾದ್ ಯಾತ್ರೆ- ಸಿದ್ದರಾಮಯ್ಯ ಟ್ವೀಟ್
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಯಾವ ಬಣ ರಾಜಕೀಯವೂ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
Published On - 4:11 pm, Sun, 21 November 21