ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ವಿರೋಧಿ: ಈಶ್ವರ ಖಂಡ್ರೆ ವಾಗ್ದಾಳಿ
700 ರೈತರು ಮೃತಪಟ್ಟ ಬಳಿಕ ಕೃಷಿ ಕಾಯ್ದೆ ಹಿಂಪಡೆಯಲಾಗಿದೆ. ಗಾಂಧಿ ಕೊಂದ ಗೋಡ್ಸೆ ಮಂದಿರ ಕಟ್ಟಲು ಹೊರಟವರು ಅವರು. ಭಾರತೀಯ ಜನತಾ ಪಾರ್ಟಿ ಅಂದರೆ ಬಿಜೆಪಿ ಜೂಟ್ ಪಾರ್ಟಿ ಎಂದು ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಬೀದರ್: ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ ಎಂದು ಬಿಜೆಪಿ ಘೋಷಿಸಿದೆ. ಅದಕ್ಕೆ ಹಣ ಕೊಟ್ಟಿದ್ದು 1500 ಕೋಟಿ ರೂಪಾಯಿ, ಖರ್ಚಾಗಿದ್ದು 103 ಕೋಟಿ ರೂಪಾಯಿ. ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ವಿರೋಧಿ ಎಂದು ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ. 700 ರೈತರು ಮೃತಪಟ್ಟ ಬಳಿಕ ಕೃಷಿ ಕಾಯ್ದೆ ಹಿಂಪಡೆಯಲಾಗಿದೆ. ಗಾಂಧಿ ಕೊಂದ ಗೋಡ್ಸೆ ಮಂದಿರ ಕಟ್ಟಲು ಹೊರಟವರು ಅವರು. ಭಾರತೀಯ ಜನತಾ ಪಾರ್ಟಿ ಅಂದರೆ ಬಿಜೆಪಿ ಜೂಟ್ ಪಾರ್ಟಿ ಎಂದು ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಕೊಟ್ಟಿಲ್ಲ. ಚುನಾವಣೆ ಬಂದಾಗ ಗೌರವಧನ ಹೆಚ್ಚಿಸುವ ಮಾತಾಡುತ್ತಾರೆ. ಕೊವಿಡ್‌ನಿಂದ ಮೃತರ ಕುಟುಂಬಕ್ಕೆ ಇನ್ನೂ ಪರಿಹಾರ ಕೊಟ್ಟಿಲ್ಲ. ಉಪಚುನಾವಣೆಯಲ್ಲಿ ಸೋಲಿನ ಬಳಿಕ ಬಿಜೆಪಿಗೆ ಬುದ್ಧಿ ಬಂದಿದೆ. ಹೀಗಾಗಿ ತೈಲಬೆಲೆಯನ್ನು ಇಳಿಕೆ ಮಾಡುವ ನಾಟಕ ಮಾಡಿದ್ದಾರೆ. ರಸಗೊಬ್ಬರ ಸಮಸ್ಯೆ ಬಿಜೆಪಿ ಸರ್ಕಾರಕ್ಕೆ ಕಾಣಿಸುತ್ತಿಲ್ಲ. ಬೆಳೆ ವಿಮೆ ಹೆಸರಿನಲ್ಲಿ ವಿಮಾ ಕಂಪನಿಯವರಿಗೆ ಲಾಭದ ಉದ್ದೇಶ ಇದೆ. 6 ವರ್ಷದಲ್ಲಿ ಬೆಳೆ ವಿಮೆ ಕಂಪನಿಗಳು ಲಾಭ ಮಾಡಿಕೊಂಡಿವೆ. 2 ಸಾವಿರ ಕೋಟಿ ರೂಪಾಯಿಯಷ್ಟು ಲಾಭ ಮಾಡಿಕೊಂಡಿವೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಖಂಡ್ರೆ ಬಿಜೆಪಿಗೆ ಬರುತ್ತಾರೆಂದು ನಳಿನ್ ಕುಮಾರ್ ಕಟೀಲು ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮೂಲತಃ ಕಾಂಗ್ರೆಸ್, ಬಿಜೆಪಿಗೆ ಹೋಗುವುದಿಲ್ಲ. ನಳಿನ್ ಕುಮಾರ್ ಬರುತ್ತಾರೆಂದು ಅರ್ಜಿ ಹಾಕಿದರೆ ನಾವು ಎಲ್ಲರೂ ಸೇರಿ ವಿಚಾರ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವರೇ ಕಾಂಗ್ರೆಸ್‌ಗೆ ಬರುತ್ತಾರೆ. ಯಾವ ಅಧಿಕಾರವೂ ಬೇಡ ನಮ್ಮನ್ನ ಸೇರಿಸಿಕೊಳ್ಳಿ ಅಂತಾರೆ. ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಅಂತಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 3,000 ಕೋಟಿ ಅನುದಾನ ನೀಡಲು ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಸ್ವಲ್ಪ ಸಮಯ ಕೊಡೀ! ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸೆಲ್, ಖಾಯಂ ಕಾರ್ಯದರ್ಶಿ ನೇಮಕ ಮಾಡ್ತೇವೆ: ಸಿಎಂ ಬೊಮ್ಮಾಯಿ