AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನಲ್ಲಿ ಯಾವ ಬಣ ರಾಜಕೀಯವೂ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

Karnataka Congress: ಸಿದ್ದರಾಮಯ್ಯ ಬೇಜಾರಾಗೋ ವ್ಯಕ್ತಿಯಲ್ಲ. ಇಂತಹದನ್ನೆಲ್ಲ ಅವರು ಖುಷಿ ಪಡುತ್ತಾರೆ. ನಾನು ನಿನ್ನೆ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೆನೆ. ನಾನು ಅನುಪಸ್ಥಿತಿಯಲ್ಲಿ ಇರೋ ಕಾರಣ ನಮ್ಮ ಜನ ಎಲ್ಲಿ ಅಂತ ಕೇಳಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನಲ್ಲಿ ಯಾವ ಬಣ ರಾಜಕೀಯವೂ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
ಡಿಕೆ ಶಿವಕುಮಾರ್
TV9 Web
| Updated By: ganapathi bhat|

Updated on: Nov 17, 2021 | 2:40 PM

Share

ದೆಹಲಿ: ತುಳಿಯುವ ಸಂಸ್ಕೃತಿ ಬಿಜೆಪಿಯಲ್ಲಿದೆ, ಕಾಂಗ್ರೆಸ್‌ನಲ್ಲಿ ಅಲ್ಲ. ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಇದರ ಅನುಭವವಿದೆ. ಬಿ.ಎಸ್‌. ಯಡಿಯೂರಪ್ಪ ಜತೆಗಿದ್ದ ಕಾರಣ ಅವರನ್ನು ಮಂತ್ರಿ ಮಾಡಿಲ್ಲ. ಸಿದ್ದರಾಮಯ್ಯ ಜೊತೆ ಇದ್ದವರನ್ನು ನಮ್ಮಲ್ಲಿ ತುಳಿಯಲ್ಲ ಎಂದು ರೇಣುಕಾಚಾರ್ಯ ಹೇಳಿಕೆಗೆ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಇಂದು (ನವೆಂಬರ್ 17) ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಅಬ್ದುಲ್ ಜಬ್ಬಾರ್ ಹೆಸರನ್ನು ನಾನೇ ಶಿಫಾರಸು ಮಾಡಿದೆ. ಜಬ್ಬಾರ್ ಆಯ್ಕೆಗೆ ನನ್ನ ಸಂಪೂರ್ಣವಾದ ಸಹಮತ ಇದೆ. ಅಧ್ಯಕ್ಷ ಸ್ಥಾನಕ್ಕೆ ನಾನು ಬೇರೆಯವರ ಹೆಸರು ಕೂಡ ಸೂಚಿಸಿದ್ದೆ. ಅಷ್ಟರೊಳಗೆ ಅಬ್ದುಲ್ ಜಬ್ಬಾರ್ ಹೆಸರಿಗೆ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ನಾನು ಕೂಡ ಅದಕ್ಕೆ ಒಪ್ಪಿದ್ದೇನೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಭಾಷಣಕ್ಕೆ ನಿನ್ನೆಯ ಕಾರ್ಯಕ್ರಮದಲ್ಲಿ ಅಡ್ಡಿಪಡಿಸಿರೋ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅದು ಅಡ್ಡಿಪಡಿಸಿರೋದಲ್ಲ, ಜೊರಾಗಿ ಜೈಕಾರ ಹಾಕಿದಷ್ಟೆ. ಸಿದ್ದರಾಮಯ್ಯ ಬೇಜಾರಾಗೋ ವ್ಯಕ್ತಿಯಲ್ಲ. ಇಂತಹದನ್ನೆಲ್ಲ ಅವರು ಖುಷಿ ಪಡುತ್ತಾರೆ. ನಾನು ನಿನ್ನೆ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೆನೆ. ನಾನು ಅನುಪಸ್ಥಿತಿಯಲ್ಲಿ ಇರೋ ಕಾರಣ ನಮ್ಮ ಜನ ಎಲ್ಲಿ ಅಂತ ಕೇಳಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

ಡಿಸೆಂಬರ್ 10 ರಂದು ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಂಬಲಿಗ ಇಸ್ಮಾಯಿಲ್‌ ತಮಟಗಾರ್​ಗೆ ಟಿಕೆಟ್ ಕೊಡಿಸುವುದಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಲಾಬಿ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹೀಗಾಗಿ ದೆಹಲಿಯಲ್ಲಿಂದು ಕೆ.ಸಿ.ವೇಣುಗೋಪಾಲ್ ಭೇಟಿ ಆಗಿದ್ದಾರೆ ಎಂದು ತಿಳಿದುಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ರನ್ನು ಶಾಸಕ ಜಮೀರ್ ಭೇಟಿಯಾಗಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣ ರಾಜಕೀಯವೂ ಇಲ್ಲ: ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣ ರಾಜಕೀಯವೂ ಇಲ್ಲ. ಬಿಜೆಪಿ ನಾಯಕರು ನಮ್ಮ ಪಕ್ಷದ ಬಗ್ಗೆ ಏಕೆ ಮಾತಾಡುತ್ತಾರೆ. ಅವರ ಪಕ್ಷದಲ್ಲಿಯೇ ಹೆಗ್ಗಣ ಇದೆ ಅದನ್ನು ನೋಡಿಕೊಳ್ಳಲಿ. ವ್ಯಕ್ತಿ ಪೂಜೆ ಮಾಡದಂತೆ ನಾನು ಮೊದಲಿನಿಂದ ಹೇಳುತ್ತಿದ್ದೆ. ನಿನ್ನೆ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ್ದಕ್ಕೆ ಬೈದಿದ್ದೇನೆ. ನಮ್ಮ ಹುಡುಗರಿಗೆ ಬೈದರೂ ಬೈಯಿಸಿಕೊಳ್ಳುತ್ತಾರೆ. ಪಾಪ ಜಮೀರ್ ದೆಹಲಿಯಲ್ಲಿ ಇದ್ದಾರೆ, ಅಂಥದ್ದೆಲ್ಲಾ ಏನಿಲ್ಲ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಯಾರೋ ಮೆಂಟಲ್ ಗಿರಾಕಿಗಳಿಗೆ ನಾನು ಉತ್ತರಿಸಲ್ಲ. ನಮ್ಮ ಪಕ್ಷದ ವಿಚಾರಕ್ಕೆ ಅವರೇನು ಟ್ವೀಟ್ ಮಾಡೋದು ಎಂದು ಬಿಜೆಪಿ ಟ್ವೀಟ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ನಮ್ಮ ಪಾರ್ಟಿ ನಾವು ಹೇಗೆ ನಡೆಸಬೇಕೆಂದು ನಮಗೆ ಗೊತ್ತು. ನಿನ್ನೆ ‘ಪುನೀತ ನಮನ’ ಕಾರ್ಯಕ್ರಮ ಇದ್ದ ಹಿನ್ನೆಲೆ. ಅದಕ್ಕಾಗಿ ಸಿದ್ದರಾಮಯ್ಯ ಚಿಕ್ಕ ಭಾಷಣ ಮಾಡಿ ಹೋದರು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮತ್ತೆ ಕಂಡ ಬಣ ರಾಜಕೀಯ; ಭಾಷಣ ಅರ್ಧಕ್ಕೆ‌ ಮುಗಿಸಿ ಸರಸರನೆ ಹೊರನಡೆದ‌ ಸಿದ್ದರಾಮಯ್ಯ

ಇದನ್ನೂ ಓದಿ: ಬಿಜೆಪಿ ಕೋಮುವಾದಿಗಳು ದೇಶ ಒಡೆಯುತ್ತಿದ್ದಾರೆ; ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಸಿದ್ದರಾಮಯ್ಯ