ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ
ಯೋಗಿ ಆದಿತ್ಯನಾಥ್ ಶೇರ್ ಮಾಡಿರುವ ಫೋಟೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅಪರೂಪದ ಫೋಟೋ ಎಂದಿದ್ದಾರೆ. ಆದರೆ ಸಮಾಜವಾದಿ ಪಕ್ಷ ವ್ಯಂಗ್ಯ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಸದ್ಯ ಲಖನೌದಲ್ಲಿದ್ದಾರೆ. 56ನೇ ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ನವೆಂಬರ್ 19ರಂದು ತೆರಳಿರುವ ಪ್ರಧಾನಿ ಮೋದಿ ಇಂದು ದೆಹಲಿಗೆ ವಾಪಸ್ ಬರಲಿದ್ದಾರೆ. ಈ ಮಧ್ಯೆ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾವು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಎರಡೂ ಕ್ಯಾಂಡಿಡ್ ಫೋಟೋಗಳಾಗಿದ್ದು, ಯೋಗಿ ಜೀ ಶೇರ್ ಮಾಡಿದ ಕೆಲವೇ ಕ್ಷಣದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗಿ ಆದಿತ್ಯನಾಥ್ ಅವರ ಹೆಗಲ ಮೇಲೆ ಕೈಹಾಕಿ ಏನನ್ನೋ ಹೇಳುತ್ತಿರುವ ಫೋಟೋಗಳು ಇವು. ಒಂದು ಫೋಟೋವನ್ನು ಎದುರಿನಿಂದ ಕ್ಲಿಕ್ಕಸಿದ್ದರೆ, ಇನ್ನೊಂದನ್ನು ಹಿಂಬದಿಯಿಂದ ತೆಗೆಯಲಾಗಿದೆ. ಒಟ್ಟಿನಲ್ಲಿ ಅಪರೂಪ ಎನ್ನಿಸುವ ಫೋಟೋಗಳು ಇವಾಗಿವೆ.
ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ ಯೋಗಿ ಆದಿತ್ಯನಾಥ್, ನವಭಾರತ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಣ್ಣ ಕವಿತೆಯನ್ನೇ ಬರೆದುಬಿಟ್ಟಿದ್ದಾರೆ. ‘ನಾವು ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದ್ದೇವೆ..ನಮ್ಮ ತನು-ಮನವನ್ನು ಅರ್ಪಿಸಲು ನಿರ್ಧಾರ ಮಾಡಿದ್ದೇವೆ, ಆಕಾಶದೆತ್ತರಕ್ಕೆ ಹೋಗಲು ಮತ್ತು ನವಭಾರತ ನಿರ್ಮಾಣ ಮಾಡಲು’ ಎಂದು ನಾಲ್ಕು ಸಾಲು ಸುಂದರವಾಗಿ ಬರೆದುಕೊಂಡಿದ್ದಾರೆ.
हम निकल पड़े हैं प्रण करके अपना तन-मन अर्पण करके जिद है एक सूर्य उगाना है अम्बर से ऊँचा जाना है एक भारत नया बनाना है pic.twitter.com/0uH4JDdPJE
— Yogi Adityanath (@myogiadityanath) November 21, 2021
ಸಮಾಜವಾದಿ ಪಕ್ಷದಿಂದ ವ್ಯಂಗ್ಯ ಯೋಗಿ ಆದಿತ್ಯನಾಥ್ ಶೇರ್ ಮಾಡಿರುವ ಫೋಟೋವನ್ನು ಸಮಾಜವಾದಿ ಪಕ್ಷ ವ್ಯಂಗ್ಯಮಾಡಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವೇ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಅಖಿಲೇಶ್ ಅವರೇ ಗೆಲ್ಲಬಹುದು ಎಂದು ಪ್ರಧಾನಿ ಮೋದಿ, ಯೋಗಿ ಜೀ ಅವರಿಗೆ ಹೇಳುತ್ತಿರಬಹುದು ಎಂದು ಎಸ್ಪಿ ವಕ್ತಾರ ಅನುರಾಗ್ ಭಡೌರಿಯಾ ಟ್ವೀಟ್ ಮಾಡಿದ್ದಾರೆ. ಹಾಗೇ, ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ಅದರಾಚೆ ಹಲವರು ಈ ಫೋಟೋವನ್ನು ಶೇರ್ ಮಾಡಿಕೊಂಡು ಅಪರೂಪದ ಫೋಟೋ ಎಂದಿದ್ದಾರೆ.
ಇದನ್ನೂ ಓದಿ: Smart TV: ಹೊಸ ಟಿವಿ ಖರೀದಿಸುವ ಪ್ಲಾನ್ನಲ್ಲಿದ್ದೀರಾ?: ಹಾಗಿದ್ರೆ ಇಲ್ಲೊಮ್ಮೆ ಕಣ್ಣಾಡಿಸಿ