AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smart TV: ಹೊಸ ಟಿವಿ ಖರೀದಿಸುವ ಪ್ಲಾನ್​ನಲ್ಲಿದ್ದೀರಾ?: ಹಾಗಿದ್ರೆ ಇಲ್ಲೊಮ್ಮೆ ಕಣ್ಣಾಡಿಸಿ

Best smart TV: ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಮಾರ್ಟ್‌ಟಿವಿ ಬ್ರಾಂಡ್‌ಗಳಾದ ಒನ್‌ಪ್ಲಸ್‌, ರೆಡ್ಮಿ, ಎಂಐ 55 ಇಂಚಿನ ಅನೇಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಹಾಗಾದ್ರೆ ಈ ನವೆಂಬರ್ ತಿಂಗಳಿನಲ್ಲಿ ನೀವು ಖರೀದಿಸಬಹುದಾದ ಟಾಪ್ 55 ಇಂಚಿನ ಸ್ಮಾರ್ಟ್ ಟಿವಿಗಳನ್ನು ನೋಡೋಣ.

Smart TV: ಹೊಸ ಟಿವಿ ಖರೀದಿಸುವ ಪ್ಲಾನ್​ನಲ್ಲಿದ್ದೀರಾ?: ಹಾಗಿದ್ರೆ ಇಲ್ಲೊಮ್ಮೆ ಕಣ್ಣಾಡಿಸಿ
Smart TV
TV9 Web
| Updated By: Vinay Bhat|

Updated on: Nov 21, 2021 | 1:34 PM

Share

ಇಂದಿನ ಕಾಲದಲ್ಲಿ ಯಾರು ತಾನೆ ಟಿವಿ (TV) ನೋಡುವುದಿಲ್ಲ ಹೇಳಿ. ಈಗಂತು ವಿಶ್ವವೇ ಸ್ಮಾರ್ಟ್ ಆಗಿರುವಾಗ ನಿಮ್ಮ ಮನೆಯಲ್ಲಿನ ಟಿವಿಯೂ ಸ್ಮಾರ್ಟ್ ಆಗಿರಬೇಕು. ಕಳೆದ ಕೆಲವು ವರ್ಷಗಳಲ್ಲಿ ಟಿವಿ ಮಾರುಕಟ್ಟೆ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಹೊಸ ಟೆಕ್ನಾಲಜಿ ಆಧಾರಿತ ಸ್ಮಾರ್ಟ್‌ಟಿವಿಗಳು (Smart TV) ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿವೆ. ಈಗ ನೀವು ಈ ಸ್ಮಾರ್ಟ್ ಟಿವಿಗಳಲ್ಲಿ ನಿಮ್ಮ ಮೆಚ್ಚಿನ ಚಲನಚಿತ್ರಗಳು, ಹಾಡುಗಳು, OTT ಪ್ಲಾಟ್‌ಫಾರ್ಮ್‌ನಲ್ಲಿ ವೆಬ್ ಸರಣಿಗಳನ್ನು (Web Series) ಆನಂದಿಸಬಹುದು. ಇವುಗಳಲ್ಲಿ ಸ್ಕ್ರೀನ್ ಶೇರಿಂಗ್, Chromecast, ಯೂಟ್ಯೂಬ್ (Youtube), ನೆಟ್‌ಫ್ಲಿಕ್ಸ್‌ನಂತಹ (Netflix) ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಹೆಚ್ಚಿನ ಗಾತ್ರದ ಜೊತೆಗೆ ಅನೇಕ ಅಪ್ಲಿಕೇಶನ್‌ಗಳಿಗೆ ಪೂರಕವಾಗಿರುವುದರಿಂದ ಭಾರಿ ಬೇಡಿಕೆ ಪಡೆದುಕೊಂಡಿವೆ.

ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಮಾರ್ಟ್‌ಟಿವಿ ಬ್ರಾಂಡ್‌ಗಳಾದ ಒನ್‌ಪ್ಲಸ್‌, ರೆಡ್ಮಿ, ಎಂಐ 55 ಇಂಚಿನ ಅನೇಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಹಾಗಾದ್ರೆ ಈ ನವೆಂಬರ್ ತಿಂಗಳಿನಲ್ಲಿ ನೀವು ಖರೀದಿಸಬಹುದಾದ ಟಾಪ್ 55 ಇಂಚಿನ ಸ್ಮಾರ್ಟ್ ಟಿವಿಗಳನ್ನು ನೋಡೋಣ.

ಎಂಐ 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್‌ ಸ್ಮಾರ್ಟ್‌ LED TV ಅಮೆಜಾನ್‌ನಲ್ಲಿ ಕೇವಲ 44,999 ರೂ. ಬೆಲೆಗೆ ಲಭ್ಯವಾಗಲಿದೆ. ಜೊತೆಗೆ ICICI ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ 3,000 ರೂ.ಗಳ ಡಿಸ್ಕೌಂಟ್‌ ಕೂಡ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840×2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 4K ಅಲ್ಟ್ರಾ HD ಸ್ಕ್ರೀನ್‌ ಹೊಂದಿದೆ. ಹಾಗೆಯೇ Mi ಸ್ಮಾರ್ಟ್ ಟಿವಿ 20 ವ್ಯಾಟ್‌ಗಳ ಔಟ್‌ಪುಟ್ ಡಾಲ್ಬಿ ಆಡಿಯೊ + DTS HD ಯೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ವೈಫೈ, ಆಂಡ್ರಾಯ್ಡ್‌ TV 9.0, ಗೂಗಲ್‌ ಅಸಿಸ್ಟೆಂಟ್‌, ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಇನ್ನು ಒನ್‌ಪ್ಲಸ್‌ 55ಇಂಚು U ಸರಣಿಯ 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ನಿಮಗೆ 48,999 ರೂ.ಬೆಲೆಗೆ ಸಿಗುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, Zee5, ಆಕ್ಸಿಜನ್‌ ಪ್ಲೇ, ಇರೋಸ್‌ ನೌ, ಜಿಯೋ ಸಿನಿಮಾ, SonyLiv, ಯೂಟ್ಯೂಬ್‌, ಹಂಗಾಮಾ ಮತ್ತು ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಗೆ ಪ್ರವೇಶ ಸಿಗಲಿದೆ. ಇದು ಗೂಗಲ್ ಅಸಿಸ್ಟೆಂಟ್, ಕಿಡ್ಸ್ ಮೋಡ್, ಗೇಮ್ ಮೋಡ್, ಆಂಡ್ರಾಯ್ಡ್ ಟಿವಿ 10 ಮತ್ತು ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ.

Vu 55 ಇಂಚು ಸಿನಿಮಾ TV ಆಕ್ಷನ್ ಸೀರೀಸ್ 4K Ultra HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 46,999ರೂ.ಬೆಲೆ ಹೊಂದಿದೆ. ಇನ್ನು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿ ಕೂಡ Netflix, ಜೀ5, ಸೋನಿಲೈವ್‌, ಪ್ರೈಮ್‌ ವೀಡಿಯೊ,Ms, ಗೂಗಲ್‌ ಮೂವೀಸ್‌ ಮತ್ತು ಟಿವಿ, ಹಾಟ್‌ಸ್ಟಾರ್‌, ಗೂಗಲ್‌ ಮ್ಯೂಸಿಕ್‌, ಯೂಟ್ಯೂಬ್‌ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ರೆಡ್ಮಿ 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ 45,999 ರೂಗಳಲ್ಲಿ ಲಭ್ಯವಾಗಲಿದೆ. ಇದು ಬ್ಲೂಟೂತ್ 5.0, 30 ವ್ಯಾಟ್ಸ್ ಔಟ್‌ಪುಟ್ ಡಾಲ್ಬಿ ಆಡಿಯೋ, ಆಂಡ್ರಾಯ್ಡ್ ಟಿವಿ 10 ಅನ್ನು ಬೆಂಬಲಿಸಲಿದೆ. ಅಲ್ಲದೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ICICI ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ 3000ರೂ. ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Laptops under 30000: ನಿಮ್ಮ ದೈನಂದಿನ ಕೆಲಸಕ್ಕೆ ಇಲ್ಲಿದೆ ಬೆಸ್ಟ್ ಲ್ಯಾಪ್​ಟಾಪ್: ಇವುಗಳ ಬೆಲೆ 30 ಸಾವಿರಕ್ಕಿಂತ ಕಡಿಮೆ

(Here is a list of top 55-inch smart TV from different brands to buy this November)