ಮಂಡ್ಯಕ್ಕೆ ತಲೆ ನೋವಾದ ಓಂ ಶಕ್ತಿ ಯಾತ್ರಿಗಳು: ಯಾತ್ರಿಗಳ ಮಕ್ಕಳಿಗೂ ಪಾಸಿಟಿವ್, ಯಾತ್ರೆ ಮುಗಿಸಿ ಬಂದವರು ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್

| Updated By: ಆಯೇಷಾ ಬಾನು

Updated on: Jan 07, 2022 | 12:52 PM

ಓಂ ಶಕ್ತಿ ಯಾತ್ರೆ ಮುಗಿಸಿ ಬಂದವರಿಗೆ ಕೊರೊನಾ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಯಾತ್ರೆ ಮುಗಿಸಿ ಬಂದವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.

ಮಂಡ್ಯಕ್ಕೆ ತಲೆ ನೋವಾದ ಓಂ ಶಕ್ತಿ ಯಾತ್ರಿಗಳು: ಯಾತ್ರಿಗಳ ಮಕ್ಕಳಿಗೂ ಪಾಸಿಟಿವ್, ಯಾತ್ರೆ ಮುಗಿಸಿ ಬಂದವರು ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್
ಸಾಂಕೇತಿಕ ಚಿತ್ರ
Follow us on

ಮಂಡ್ಯ: ಓಂ ಶಕ್ತಿ ಯಾತ್ರಿಗಳಲ್ಲಿ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಓಂ ಶಕ್ತಿಯಿಂದ ವಾಪಸ್ಸಾದ 119 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾತ್ರಿಗಳಿಂದ ಈಗ ಮಕ್ಕಳಿಗೂ ಕೊರೊನಾ ಹರಡಿದೆ. ಓಂ ಶಕ್ತಿ ಯಾತ್ರೆಗೆ ಹೋಗಿದ್ದ ಯಾತ್ರಿಗಳ ಮೂವರು ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ.

ಓಂ ಶಕ್ತಿ ಯಾತ್ರೆಯಿಂದ ಮಂಡ್ಯ ಜಿಲ್ಲೆಗೆ ವಾಪಸ್ಸಾದ 119 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆ 89 ಜನರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಇಂದು ಮತ್ತೆ 30 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ ಯಾತ್ರೆ ಮುಗಿಸಿಕೊಂಡು ಬಂದ ಮೇಲೆ ಪೋಷಕರು ಮಕ್ಕಳ ಸಂಪರ್ಕದಲ್ಲಿದ್ದರು. ಈ ವೇಳೆ ಮೂವರು ಮಂದಿ ಮಕ್ಕಳಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಬೇಲೂರು, ಎರಹಳ್ಳಿ, ಗೌಡಗೆರ ಗ್ರಾಮದ ಶಾಲೆಗಳು ಸೀಲ್‌ಡೌನ್ ಮಾಡಲಾಗಿದೆ. ಅಧಿಕಾರಿಗಳು ಸಂಪರ್ಕಿತರನ್ನು ಹೋಂ ಕ್ವಾರಂಟೈನ್ ಮಾಡಿದ್ದಾರೆ.

ಸದ್ಯ ಓಂ ಶಕ್ತಿ ಯಾತ್ರೆ ಮುಗಿಸಿ ಬಂದವರಿಗೆ ಕೊರೊನಾ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಯಾತ್ರೆ ಮುಗಿಸಿ ಬಂದವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ತಮಿಳುನಾಡಿನ ಓಂ ಶಕ್ತಿ ದೇವಾಲಯದಿಂದ ವಾಪಸ್ಸಾಗಿ ಮಳವಳ್ಳಿಯ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಇದ್ದ ಓಂ ಶಕ್ತಿ ಯಾತ್ರಿಗಳನ್ನು ಮಳವಳ್ಳಿ KSRTC ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರನ್ನು ಟೆಸ್ಟ್ಗೆ ಒಳಪಡಿಸಿ ಬಳಿಕ ಕ್ವಾರಂಟೈನ್ ಮಾಡಲಾಗಿದ್ದು ನೆಗೆಟಿವ್ ಬಂದವರಿಗೆ ಮತ್ತೆ 7 ದಿನಗಳ ಬಳಿಕ ಕೊವಿಡ್ ಟೆಸ್ಟ್ ಮಾಡಲಾಗುತ್ತೆ. ಇಂದು ಕೂಡ ಮೂರು ಬಸ್ಗಳಲ್ಲಿ ಓಂ ಶಕ್ತಿ ಭಕ್ತರು‌ ವಾಪಾಸ್ ಆಗುತ್ತಿದ್ದಾರೆ.

ಓಂ ಶಕ್ತಿ ದೇಗುಲಕ್ಕೆ ಹೋಗಿ ಬಂದಿದ್ದ 6 ಜನರಿಗೆ ಕೊರೊನಾ
ಇನ್ನು ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ. ಓಂ ಶಕ್ತಿ ದೇಗುಲಕ್ಕೆ ಹೋಗಿ ಬಂದಿದ್ದ ಶಿವಮೊಗ್ಗದ 6 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. ಇತ್ತೀಚೆಗೆ ಓಂ ಶಕ್ತಿಗೆ 4,143 ಜನರು ಹೋಗಿಬಂದಿದ್ದಾರೆ. ಓಂ ಶಕ್ತಿ ದೇಗುಲಕ್ಕೆ ಹೋಗಿಬಂದವರಲ್ಲಿ ಕೊರೊನಾ ಪತ್ತೆ ಹಿನ್ನೆಲೆ ಜಿಲ್ಲೆಯಲ್ಲಿ ಮತ್ತಷ್ಟು ಕೊವಿಡ್ ಕೇಸ್ ಪತ್ತೆಯಾಗುವ ಸಾಧ್ಯತೆ ಕಂಡು ಬಂದಿದೆ.

ಇದನ್ನೂ ಓದಿ: ಇರ್ಫಾನ್​ ಖಾನ್​ ಜನ್ಮದಿನ: ಅಪ್ರತಿಮ ಕಲಾವಿದನ 5 ಅತಿ ಮುಖ್ಯ ಸಿನಿಮಾಗಳು

Published On - 12:39 pm, Fri, 7 January 22