ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ(Bharat Jodo Yatra) ಆರಂಭವಾಗಿದ್ದು ಎಲ್ಲಾ ಕೈ ನಾಯಕರು ಭಾರೀ ಉತ್ಸಾಹದಿಂದಲೇ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನ್ಯಾಮನಹಳ್ಳಿ ಬಳಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಸೇರಿಕೊಂಡಿದ್ದಾರೆ. ಸೋನಿಯಾ(Sonia Gandhi), ರಾಹುಲ್(Rahul Gandhi) ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಇದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಇನ್ನು ಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಕೆ.ಹೆಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಚಲುವರಾಯಸ್ವಾಮಿ, ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ‘ಕೈ’ ಪ್ಲಾನ್
ಮಂಡ್ಯದಲ್ಲಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಪ್ಲ್ಯಾನ್ ಮಾಡಿಕೊಂಡಿದೆ. ಬಲವರ್ಧನೆಯಾದ್ರೆ ಅಧಿಕಾರದ ಚುಕ್ಕಾಣಿ ಹಿಡಿಯೋದು ಪಕ್ಕಾ. ಹೀಗಾಗಿ ಮಂಡ್ಯ ಜಿಲ್ಲೆಯನ್ನೇ ಗಮನದಲ್ಲಿಟ್ಟುಕೊಂಡಿರುವ ರಾಜ್ಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ಕಳೆದ ಬಾರಿ ಚುನಾವಣೆಯಲ್ಲಿ 7ಕ್ಕೆ 7 ಸ್ಥಾನ ಗೆದ್ದಿತ್ತು. ಹಾಗಾಗಿ ಈ ಬಾರಿ ಮಂಡ್ಯ ಜಿಲ್ಲೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಅದಕ್ಕಾಗಿಯೇ ಸೋನಿಯಾರನ್ನ ಮಂಡ್ಯಕ್ಕೆ ಕರೆಸಿಕೊಳ್ಳಲಾಗಿದೆ.
ಪಾದಯಾತ್ರೆಯಲ್ಲಿ ನಾಯಕರನ್ನ ವಿಶ್ವಾಸಕ್ಕೆ ಪಡೆಯುವ ಯತ್ನ
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕೆ.ಹೆಚ್.ಮುನಿಯಪ್ಪರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆದಿದೆ. K.H.ಮುನಿಯಪ್ಪ ಹೆಗಲ ಮೇಲೆ ಕೈಹಾಕಿ ರಾಹುಲ್ ಆತ್ಮೀಯವಾಗಿ ಮಾತನಾಡಿದ್ದಾರೆ. ಇನ್ನು ಮತ್ತೊಂದು ಕಡೆ ಸೋನಿಯಾ ಗಾಂಧಿ ನೋಡಲು ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ನ್ಯಾಮನಹಳ್ಳಿ ಬಳಿ ಪಾದಯಾತ್ರೆ ವೇಳೆ ಮಹಿಳಾ ಕಾರ್ಯಕರ್ತೆಯರು ಸೋನಿಯಾ ಅವರ ಜೊತೆ ಮಾತನಾಡಲು ಮುಗಿಬಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ದೂರ ತಳ್ಳಿ ಪರಿಸ್ಥಿತಿ ನಿಯಂತ್ರಿಸಿದರು. ಇನ್ನು ಅರ್ಧ ಕಿಲೋಮೀಟರ್ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ ಕಾರಿನಲ್ಲಿ ಪಾದಯಾತ್ರೆ ಮುಂದುವರೆಸಿದರು. ಇತ್ತ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತ ದಿವ್ಯಾಂಗರನ್ನ ಮಾತನಾಡಿಸಿ ಅವರ ಕಷ್ಟ, ಸುಖಗಳನ್ನು ವಿಚಾರಿಸುವ ಕೆಲಸ ಮಾಡಿದ್ರು. ಇದನ್ನೂ ಓದಿ: Bharath Jodo Yatra: ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭ: ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ
ಅಮ್ಮಾಸ್ ಕೆಫೆಗೆ ತೆರಳಿದ ಸೋನಿಯಾ, ರಾಹುಲ್ ಗಾಂಧಿ
ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಭಾರತ್ ಜೋಡೋ ಪಾದಯಾತ್ರೆಗೆ ಚಿಕ್ಕ ಬ್ರೇಕ್ ಹಾಕಿ ಸೋನಿಯಾ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವೇಣುಗೋಪಾಲ್, ಸುರ್ಜೇವಾಲ ಅಮ್ಮಾಸ್ ಕೆಫೆಗೆ ತೆರಳಿದರು.
ಸೋನಿಯಾ ಗಾಂಧಿ ನನ್ನ ಹಿಡಿದು ನಡೆದಿದ್ದು ಅವಿಸ್ಮರಣೀಯ
ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಕರ್ನಾಟಕದಲ್ಲಿ ನಡೆಯುತ್ತಿರುವ 5ನೇ ದಿನದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ಕೈ ನಾಯಕರು ಸೋನಿಯಾ ನೋಡಲು ಮುಗಿಬಿದ್ದಿದ್ದಾರೆ. ಸದ್ಯ ಸೋನಿಯಾ ಅವರನ್ನು ಮಾತನಾಡಿಸಿದ ಬಗ್ಗೆ ಅಂಜಲಿ ನಿಂಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಸೋನಿಯಾ ಗಾಂಧಿ ನನ್ನ ಹಿಡಿದು ನಡೆದಿದ್ದು ಅವಿಸ್ಮರಣೀಯ. ನಾನು ಇದನ್ನ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ನನ್ನ ರಾಜಕೀಯ ಸ್ಫೂರ್ತಿಯೇ ಸೋನಿಯಾ ಗಾಂಧಿ ಮೇಡಂ. ಬಿಜೆಪಿ ನಾಯಕರು ನೋವಿನಿಂದ ಹೇಳಿಕೆಗಳನ್ನ ಕೊಡ್ತಿದ್ದಾರೆ ಎಂದರು. ಇದನ್ನೂ ಓದಿ: ಆವರಿಸಿದ ಆರ್ಥಿಕ ಹಿಂಜರಿತ ಭೀತಿ: ಕಚ್ಚಾತೈಲ ಉತ್ಪಾದನೆ ಕಡಿತ ಘೋಷಿಸಿದ ಒಪೆಕ್, ಇಂಧನ ಬೆಲೆ ಏರಿಕೆ ಆಘಾತದ ನಿರೀಕ್ಷೆ
ನಾಯಕರನ್ನೆಲ್ಲಾ ಬಿಟ್ಟು ಒಬ್ಬರೇ ಹೆಜ್ಜೆ ಹಾಕುತ್ತಿರುವ ದಿಗ್ವಿಜಯ್ ಸಿಂಗ್
ಭಾರತ್ ಜೋಡೋ ಯಾತ್ರೆಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಭಾಗಿಯಾಗಿದ್ದು ಅವರು ನಾಯಕರನ್ನೆಲ್ಲಾ ಬಿಟ್ಟು ಒಬ್ಬರೇ ಹೆಜ್ಜೆ ಹಾಕುತ್ತಿದ್ದಾರೆ. ಸೋನಿಯಾ, ರಾಹುಲ್ ಅವರೊಂದಿಗೂ ಸೇರದೆ ಎರಡು ಮೂರು ಕಿ.ಮೀಟರ್ ಮುಂದೆ ನಡೆದಿದ್ದಾರೆ.