ಶ್ರೀರಂಗಪಟ್ಟಣ ದಸರಾಗೆ ಚಾಲನೆ ನೀಡಿದ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾಗೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಚಾಲನೆ ನೀಡಿದರು. ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು. ಮೂರು ದಿನಗಳ ಕಾಲ ನಡೆಯಲಿರುವ ಶ್ರೀರಂಗಪಟ್ಟಣ ದಸರಾದಲ್ಲಿ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿವೆ.
ಮಂಡ್ಯ, ಅ.16: ಶ್ರೀರಂಗಪಟ್ಟಣ ದಸರಾಗೆ (Srirangapatna Dasara) ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಶ್ರೀರಂಗಪಟ್ಟಣ ದಸರಾದಲ್ಲಿ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿವೆ.
ಪ್ರಮೋದಾದೇವಿ ಒಡೆಯರ್ ಅವರು ನಾಡದೇವತೆ ಚಾಂಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿದರು. ನಂತರ ದೇವತೆ ಚಾಮುಂಡಿ ವಿಗ್ರಹ ಹೊತ್ತ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದ್ದರು.
ಇದನ್ನೂ ಓದಿ: ಮೈಸೂರು ದಸರಾ: ಹೊರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯತಿ ನೀಡಿದ ಕರ್ನಾಟಕ ಸರ್ಕಾರ
ಕಿರಂಗೂರು ಬನ್ನಿಮಂಟಪದಿಂದ ಹೊರಟ ಜಂಬೂ ಸವಾರಿ ಮೆರವಣಿಗೆ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಶ್ರೀರಂಗನಾಥ ಸನ್ನಿಧಿವರೆಗೆ ಸಾಗಿತು. ಅಂಬಾರಿಯನ್ನು ಹೊತ್ತು ಸಾಗಿದ ಮಹೇಂದ್ರ ಆನೆಗೆ ಕುಮ್ಕಿ ಆನೆಗಳಾದ ವಿಜಯ, ವರಲಕ್ಷ್ಮೀ ಸಾಥ್ ನೀಡಿದವು. ಜಂಬೂಸವಾರಿ ಹಿಂದೆ ಸ್ತಬ್ಧ ಚಿತ್ರಗಳು, ಜಾನಪದ ಕಲಾ ತಂಡಗಳು ಸಾಗಿದವು. ಶ್ರೀರಂಗಪಟ್ಟಣ ಜನತೆಯು ವರ್ಷಕ್ಕೊಮ್ಮೆ ನಡೆಯುವ ದಸರಾ ಜಂಬೂ ಸವಾರಿ ಮೆರವಣಿಯನ್ನು ಕಣ್ತುಂಬಿಕೊಂಡರು.
ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಲರವ
ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಲರವವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದೆಂಬಂಗಿದೆ. ಎರಡನೇ ದಿನವಾದ ಇಂದು ಕೂಡ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನ ನಡೆಯಿತು. ಅರಮನೆ ಮುಂಭಾಗದ ವೇದಿಕೆಯಲ್ಲಿ ಪೂಜಾ ಕುಣಿತ ಸೇರಿ ವಿವಿಧ ಕಲಾ ಪ್ರಾಕಾರಗಳು ಪ್ರದರ್ಶನಗೊಂಡವು.
ದಸರಾದಲ್ಲಿ ಡಿಜೆ, ಲೇಜರ್ ಲೈಟ್ ಬಳಕೆಗೆ ಆಕ್ಷೇಪ
ಮಡಿಕೇರಿ ದಸರಾದಲ್ಲಿ ಡಿಜೆ, ಲೇಜರ್ ಲೈಟ್ ಬಳಕೆಗೆ ಹೈಕೋರ್ಟ್ ವಕೀಲ ಅಮೃತೇಶ್ ಎನ್.ಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಸುಪ್ರಿಂಕೋರ್ಟ್ ಆದೇಶ ಇರುವ ಹಿನ್ನೆಲೆ ಮಡಿಕೇರಿ ದಸರಾದಲ್ಲಿ ಡಿಜೆ, ಲೇಸರ್ ಲೈಟ್ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಿಜೆ ಬಳಸಿದರೆ ಹೈಕೋರ್ಟ್ ಮೊರೆಹೊಗುವ ಎಚ್ಚರಿಕೆ ನೀಡಿದ ಅಮೃತೇಶ್, ಅಧಿಕಾರಿಗಳು, ದಸರಾ ಸಮಿತಿಗೆ ನೋಟಿಸ್ ಜಾರಿ ಮಾಡಿ ರಾತ್ರಿ 10 ಗಂಟೆಗೆ ಮ್ಯೂಸಿಕ್ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ