ಹಲಗೂರಲ್ಲಿ ಬೀದಿ ನಾಯಿ ಕಾಟ: ಮೂರೇ ದಿನಗಳಲ್ಲಿ 18 ಮಂದಿ ಮೇಲೆ ಅಟ್ಯಾಕ್​!

Edited By:

Updated on: Sep 29, 2025 | 12:19 PM

ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಕಂಡ ಕಂಡವರ ಮೇಲೆ ದಾಳಿ ನಡೆಸ್ತಿವೆ. ಕೇವಲ ಮೂರು ದಿನಗಳಲ್ಲಿ 18 ಮಂದಿ ಮೇಲೆ ನಾಯಿಗಳು ಅಟ್ಯಾಕ್​ ಮಾಡಿದ್ದು, ಗ್ರಾಮಸ್ಥರು ಮನೆ ಬಿಟ್ಟು ಹೊರ ಬರಲೂ ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಗ್ರಾಮಸ್ಥರದ್ದು.

ಮಂಡ್ಯ, ಸೆಪ್ಟೆಂಬರ್​ 29: ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಬೀದಿನಾಯಿಗಳ (Street dogs) ಹಾವಳಿ ಹೆಚ್ಚಾಗಿದ್ದು, ಮೂರೇ ದಿನಗಳಲ್ಲಿ 18 ಮಂದಿ ಮೇಲೆ ದಾಳಿ ನಡೆಸಿವೆ. ಗ್ರಾಮಸ್ಥರು ಬೀದಿ ನಾಯಿಗಳ ಹಾವಳಿಗೆ ಕಂಗಾಲಾಗಿದ್ದು, ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರಿಗಂತೂ ಇವುಗಳಿಂದ ಪ್ರತಿನಿತ್ಯ ಸಮಸ್ಯೆಯಾಗ್ತಿದೆ. ಬೀದಿ ನಾಯಿಗಳ ಹಾವಳಿಯಿಂದ ಹೆದರಿಯೇ ಪ್ರತಿನಿತ್ಯ ಜೀವನ ನಡೆಸುವ ಸ್ಥಿತಿ ಗ್ರಾಮದ ಜನರಿಗಿದ್ದು, ತಾಲೂಕು ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.