ಮಂಡ್ಯದಲ್ಲಿ ಪ್ರಾಮಾಣಿಕ ಕಳ್ಳರು: ಕದ್ದ ಚಿನ್ನಾಭಾರಣ ವಾಪಸ್ ಅದೇ ಜಾಗದಲ್ಲೇ ಇಟ್ಟು ಹೋದರು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 25, 2024 | 3:46 PM

ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ನಡೆದ ಕಳ್ಳತನದಲ್ಲಿ ಕದ್ದ ಚಿನ್ನಾಭರಣವನ್ನು ಪೊಲೀಸ್ ದೂರಿನ ನಂತರ ಕಳ್ಳರು ವಾಪಸ್​ ಇಟ್ಟು ಹೋಗಿದ್ದಾರೆ. ಸಿದ್ದೇಗೌಡ ಎಂಬುವವರ ಮನೆಯಿಂದ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂ ಓಲೆಗಳು ಕಳವು ಆಗಿದ್ದವು. ಭಯದಿಂದ ಕಳ್ಳರು ಚಿನ್ನವನ್ನು ಮನೆಯ ಮುಂದೆ ಇಟ್ಟು ಪರಾರಿಯಾಗಿದ್ದಾರೆ.

ಮಂಡ್ಯದಲ್ಲಿ ಪ್ರಾಮಾಣಿಕ ಕಳ್ಳರು: ಕದ್ದ ಚಿನ್ನಾಭಾರಣ ವಾಪಸ್ ಅದೇ ಜಾಗದಲ್ಲೇ ಇಟ್ಟು ಹೋದರು
ಮಂಡ್ಯದಲ್ಲಿ ಪ್ರಾಮಾಣಿಕ ಕಳ್ಳರು: ಕದ್ದ ಚಿನ್ನಾಭಾರಣ ವಾಪಸ್ ಅದೇ ಜಾಗದಲ್ಲೇ ಇಟ್ಟು ಹೋದರು
Follow us on

ಮಂಡ್ಯ, ನವೆಂಬರ್​ 25: ಪೊಲೀಸರಿಗೆ ಹೆದರಿ ಕದ್ದ ಚಿನ್ನಾಭರಣಗಳನ್ನು ಕಳ್ಳರು (Thieves) ವಾಪಾಸ್ ಇಟ್ಟುಹೋಗಿರುವಂತಹ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಕದ್ದ ಚಿನ್ನಾಭರಣವನ್ನು ಮನೆಯ ಮುಂಭಾಗದ ಜಗಲಿ ಮೇಲೆ ಇಟ್ಟುಹೋಗಿದ್ದಾರೆ. ಇತ್ತ ಚಿನ್ನಾಭರಣ ವಾಪಾಸ್ ಸಿಗುತ್ತಿದ್ದಂತೆ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಗಿಮುದ್ದನಹಳ್ಳಿ ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ‌ಕಳ್ಳತನವಾಗಿತ್ತು. ಮನೆ ದೇವರ ಪೂಜೆಗೆ ಹೋಗಿದ್ದ ವೇಳೆ ಕಳ್ಳತನ ನಡೆದಿತ್ತು. ಮನೆಯ ಹೆಂಚುಗಳನ್ನ ತೆಗೆದು ಒಳನುಗ್ಗಿದ್ದ ಕಳ್ಳರು, ಬೀರುವನ್ನ ಹೊಡೆದು‌ ಕಳ್ಳತನ ಮಾಡಿದ್ದರು. 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂ ಮೂರು ಜೊತೆ ಓಲೆಗಳನ್ನು ಕದಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಗೆ ಸಿದ್ದೇಗೌಡ ದೂರು ನೀಡಿದ್ದರು.

ರಾತ್ರೋ ರಾತ್ರಿ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ

ಇನ್ನು ಜಿಲ್ಲೆಯಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್​ ಆಕ್ವೀವ್ ಆಗಿದ್ದು, ರಾತ್ರೋ ರಾತ್ರಿ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಟೌನ್ ಸುಭಾಷ್ ನಗರದಲ್ಲಿ ನಡೆದಿತ್ತು. ರಂಗನಾಥ್ ಎಂಬುವವರ ಮನೆಯಲ್ಲಿ ಕಳ್ಳರು ಕನ್ನ ಹಾಕಿದ್ದರು.

ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆ ಬಾಗಿಲು ಹೊಡೆದು ಮನೆ ಜಾಲಾಡಿದ್ದರು. ಮನೆಯಲ್ಲಿ ಏನು ಸಿಗದ ಹಿನ್ನಲೆಯಲ್ಲಿ ಬರಿಗೈಯಲ್ಲಿ ಕಳ್ಳರು ವಾಪಾಸ್ ಆಗಿದ್ದರು. ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೆಆರ್.ಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ನಡೆದಿತ್ತು.

ಕಾಡು ಹಂದಿ ಚಿಪ್ಪುಗಳ ಮಾರಾಟ: ಆರೋಪಿ ಬಂಧನ

ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಾಡು ಹಂದಿ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವಂತಹ ಘಡನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ‌ನಂಜನಾಯಪುರ ಗ್ರಾಮದ ಬಳಿ ನಡೆದಿದೆ.

ಮೈಸೂರು ಜಿಲ್ಲೆಯ ಕಾಳಬಸವನಹುಂಡಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಗೌಡ(50) ಬಂಧಿತ ಆರೋಪಿ. ಕಾರ್ಯಾಚರಣೆ ವೇಳೆ ಅಲಿಮುತ್ತು ಎಂಬ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 1 ಕೆಜಿ ಚಿಪ್ಪುಹಂದಿಯ ಚಿಪ್ಪುಗಳು, ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಡಿಸಿಎಫ್ ಚಂದ್ರಶೇಖರಗೌಡ ಸಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.