ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಐದು ವರ್ಷದ ಪೋರ, ಪೋಷಕರ ಪರದಾಟ

| Updated By: ಸಾಧು ಶ್ರೀನಾಥ್​

Updated on: Jan 13, 2023 | 4:29 PM

Thalassemia Bone Marrow: ಕಣ್ಮುಂದೆ ಓಡಾಡಿಕೊಂಡು ನಗ್ತಾ ಇದ್ದ ಮಗನಿಗೆ ಈ ರೀತಿ ಭಯಾನಕ ಖಾಯಿಲೆ ಇರೋದು ಕಂಡ ಪೋಷಕರು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗನ ಚಿಕಿತ್ಸೆಗೆ ಸ್ಪಂದಿಸುವ ದಾನಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಐದು ವರ್ಷದ ಪೋರ, ಪೋಷಕರ ಪರದಾಟ
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಐದು ವರ್ಷದ ಪೋರ, ಪೋಷಕರ ಪರದಾಟ
Follow us on

ಆ ಪೋರನಿಗೆ ಇನ್ನೂ ಬರಿ ಐದೇ ಐದು ವರ್ಷ.. ಎಲ್ಲರ ಜೊತೆ ಆಟವಾಡ್ಕೊಂಡು ನಗು ನಗ್ತಾ ಕಾಲ ಕಳೆಯುವ ವಯಸ್ಸು.. ಆದ್ರೆ ಆ ಕಂದ ಈಗ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾನೆ.. ಪ್ರಾಣ ಉಳಿಸಿಕೊಳ್ಳಲು ಕಂಡವರ ಮುಂದೆ ಅಂಗಲಾಚುತ್ತಿದ್ದಾನೆ. ಕೈಯಲ್ಲಿ ಫೈಲ್ ಹಿಡಿದು ಅದೇನನ್ನೊ ತಡಕಾಡುತ್ತಿರೊ ತಂದೆ.. ಭಾರದ ಮನಸ್ಸಿನಿಂದ ಮಗುವನ್ನ ಆರೈಕೆ ಮಾಡುತ್ತಿರೊ ತಾಯಿ.. ಅತ್ತಿಂದಿತ್ತ ಆಟವಾಡುತ್ತಿರೊ ಐದು ವರ್ಷದ ಪೋರ.. ಹೀಗೆ ಖುಷ್ ಖಷಿಯಾಗಿ ಕೇಕ್ ಕತ್ತರಿಸಿ ಚಪ್ಪಾಳೆ ತಟ್ಟುತ್ತ ಎಂಜಾಯ್ ಮಾಡ್ತಾಯಿರೊ ಈ ಪೋರನ ಹೆಸರು ಅಚ್ಚುತ್ ಕುಮಾರ್. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬಿದರಕೋಟೆ ಗ್ರಾಮದವ (Bidarakote in Maddur taluk in Mandya).. ಮಾರಕ ತಲಾಸಿಮಿಯಾ ಬೋನ್ ಮ್ಯಾರೊ (Thalassemia Bone Marrow) ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗೆ 35 ಲಕ್ಷ ಹಣ ಬೇಕಾಗಿದ್ದು ಪೋಷಕರು ಹಣವಿಲ್ಲದೆ ಅವರಿವರ ಮನೆ ಬಾಗಿಲು ತಟ್ಟುತ್ತಿದ್ದಾರೆ.

ತಂದೆ ಪ್ರಸನ್ನಕುಮಾರ್ ಮೂಲತಃ ರೈತಾಪಿ ಕುಟುಂಬಕ್ಕೆ ಸೇರಿದವರು.. ಕೃಷಿಯನ್ನೆ ನಂಬಿ ಜೀವನ ನಡೆಸುವ ಕುಟುಂಬ. ಅಚ್ಚುತ್ ಕುಮಾರ್ ಜನನದ ಬಳಿಕ ಒಂದು ವರ್ಷದವರೆಗೂ ಎಲ್ಲವು ಚೆನ್ನಾಗಿಯೇ ಇತ್ತು.. ಒಮ್ಮೆ ತೀವ್ರ ಜ್ವರ ಬಂದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ.. ಎಷ್ಟೇ ಟ್ರೀಟ್ಮೆಂಟ್ ಕೊಟ್ಟರೂ ಆರೋಗ್ಯ ಚೇತರಿಕೆಯಾಗಿಲ್ಲ. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ವೈದ್ಯರು ರೆಫರ್ ಮಾಡಿದ್ದಾರೆ. ಬ್ಲಡ್ ಚೆಕಪ್ ಮಾಡಿಸಿದ್ದಾರೆ. ವರದಿ ಬಂದ ಬಳಿಕ ಸತ್ಯಾಂಶ ತಿಳಿದು ಬಂದಿದೆ.. ತಲಾಸಿಮಿಯಾ ಬೋನ್ ಮ್ಯಾರೊ ಎಂಬ ಖಾಯಿಲೆ ಇರೋದು ಪತ್ತೆಯಾಗಿದೆ. ದೇಹದಲ್ಲಿ ಹಿಮೋಗ್ಲೂಬಿನ್ ಉತ್ಪಾದನೆ ಆಗ್ತಾಯಿಲ್ಲ ಎಂಬುದು ತಿಳಿದು ಬಂದಿದೆ. ಬೋನ್ ಮ್ಯಾರೋ ಟ್ರಾನ್ಸ್​​ಪ್ಲಾಂಟ್ (bone marrow transplant) ಮಾಡ್ಲೆ ಬೇಕಾಗಿದೆ. ಅದಕ್ಕಾಗಿ 35 ಲಕ್ಷ ಹಣ ಬೇಕಾಗಿದೆ. ಹಣವಿಲ್ಲದೆ ಪೋಷಕರು ಜನಪ್ರತಿನಿಧಿಗಳ ಮನೆ ಬಾಗಿಲು ತಟ್ಟಿದ್ದಾರೆ.

ಅದೇನೆ ಹೇಳಿ ಕಣ್ಮುಂದೆ ಓಡಾಡಿಕೊಂಡು ನಗ್ತಾ ಇದ್ದ ಮಗನಿಗೆ ಈ ರೀತಿ ಭಯಾನಕ ಖಾಯಿಲೆ ಇರೋದು ಕಂಡ ಪೋಷಕರು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗನ ಚಿಕಿತ್ಸೆಗೆ ಸ್ಪಂದಿಸುವ ದಾನಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.. ಇವರಿಗೆ ಯಾರಾದರೂ ದಾನಿಗಳು ಸಹಾಯ ಹಸ್ತಾ ಚಾಚುತ್ತಾರಾ ಕಾದು ನೋಡಬೇಕಿದೆ.

ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ