ವಿದ್ಯುತ್​ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರ ಸಾವು

| Updated By: ವಿವೇಕ ಬಿರಾದಾರ

Updated on: Oct 22, 2022 | 3:27 PM

ವಿದ್ಯುತ್​ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಲಕ್ಷ್ಮೀ ಫೋಟೋ ಸ್ಟುಡಿಯೋದಲ್ಲಿ ನಡೆದಿದೆ.

ವಿದ್ಯುತ್​ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರ ಸಾವು
ಮೃತ ದುರ್ದೈವಿಗಳು
Follow us on

ಮಂಡ್ಯ: ವಿದ್ಯುತ್​ (Electric) ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು (Photographers) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು (Madduru) ತಾಲೂಕಿನ ಬೆಸಗರಹಳ್ಳಿಯ ಲಕ್ಷ್ಮೀ ಫೋಟೋ ಸ್ಟುಡಿಯೋದಲ್ಲಿ ನಡೆದಿದೆ. ಛಾಯಾಗ್ರಾಹಕರಾದ ಮಧುಸೂದನ ಮತ್ತು ವಿವೇಕ ಮೃತ ದುರ್ದೈವಿಗಳು. ದೀಪಾವಳಿ ಹಬ್ಬದ ನಿಮಿತ್ತ, ಮಧುಸೂದನ ಮತ್ತು ವಿವೇಕ ಸ್ಟುಡಿಯೋ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕಬ್ಬಿಣದ ಬೋರ್ಡ್ ತೆರವುಗೊಳಿಸಿ ಸ್ವಚ್ಛಗೊಳಿಸುತ್ತಿದ್ದಾಗ 11 ಕೆ.ವಿ ವಿದ್ಯುತ್ ತಗುಲಿ ಇಬ್ಬರು ಛಾಯಾಗ್ರಾಹರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂಜಾಗ್ರತ ಕ್ರಮ ಕೈಗೊಳ್ಳದೆ ಇರೋದೆ ಅವಘಡಕ್ಕೆ ಕಾರಣವೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಎರಡು ಮೃತ ದೇಹಗಳನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Sat, 22 October 22