ನೈಟ್ ಕರ್ಫ್ಯೂಗೂ ಡೋಂಟ್ ಕೇರ್, KRS​ ಬಳಿ ಕಾವೇರಿ ತೀರದಲ್ಲಿ ರೇವ್ ಪಾರ್ಟಿ!?

ಮಂಡ್ಯ: ಮಿರ ಮಿರ ಮಿಂಚೋ ಲೈಟಿಂಗ್.. ಮತ್ತೇಟಿನ ನಡುವೆ ಕಿವಿಗೆ ಗುನುಗ್ತಿರೋ​ ಸಾಂಗ್​​.. ಟೇಬಲ್ ಮೇಲೆ ಗುಂಡು-ತುಂಡು ಇಟ್ಕೊಂಡು ಫುಲ್ ಡಿಸ್ಕಷನ್. ಇಲ್ಲಿ ಸಾಮಾಜಿಕ ಅಂತರಕ್ಕೂ ಡೋಂಟ್​ ಕೇರ್. ರೂಲ್ಸ್​​​ಗಳನ್ನ ಬ್ರೇಕ್​ ಮಾಡಿ ಮೋಜು-ಮಸ್ತಿ. ಕರ್ಫ್ಯೂ ಉಲ್ಲಂಘಿಸಿ ಕತ್ತಲೆಯಲ್ಲಿ ಪಾರ್ಟಿ ದರ್ಬಾರ್. ಕೊರೊನಾ ಸಂಕಷ್ಟದ ನಡುವೆ ಇದು ಬೇಕಿತ್ತಾ ಸ್ವಾಮಿ.. ಇದು ಬೇಕಿತ್ತಾ..? ಕರ್ಫ್ಯೂ ನಿಯಮ ಉಲ್ಲಂಘಿಸಿ ಶ್ರೀಮಂತರ ಮೋಜು-ಮಸ್ತಿ! ಯೆಸ್​​.. ಕೊರೊನಾ ಕೂಪಕ್ಕೆ ಬಿದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ. ಕರುನಾಡು ಕೊರೊನಾ ಕೂಪಕ್ಕೆ ಬಿದ್ದು […]

ನೈಟ್ ಕರ್ಫ್ಯೂಗೂ ಡೋಂಟ್ ಕೇರ್, KRS​ ಬಳಿ ಕಾವೇರಿ ತೀರದಲ್ಲಿ ರೇವ್ ಪಾರ್ಟಿ!?
Follow us
ಆಯೇಷಾ ಬಾನು
|

Updated on:Jun 11, 2020 | 4:00 PM

ಮಂಡ್ಯ: ಮಿರ ಮಿರ ಮಿಂಚೋ ಲೈಟಿಂಗ್.. ಮತ್ತೇಟಿನ ನಡುವೆ ಕಿವಿಗೆ ಗುನುಗ್ತಿರೋ​ ಸಾಂಗ್​​.. ಟೇಬಲ್ ಮೇಲೆ ಗುಂಡು-ತುಂಡು ಇಟ್ಕೊಂಡು ಫುಲ್ ಡಿಸ್ಕಷನ್. ಇಲ್ಲಿ ಸಾಮಾಜಿಕ ಅಂತರಕ್ಕೂ ಡೋಂಟ್​ ಕೇರ್. ರೂಲ್ಸ್​​​ಗಳನ್ನ ಬ್ರೇಕ್​ ಮಾಡಿ ಮೋಜು-ಮಸ್ತಿ. ಕರ್ಫ್ಯೂ ಉಲ್ಲಂಘಿಸಿ ಕತ್ತಲೆಯಲ್ಲಿ ಪಾರ್ಟಿ ದರ್ಬಾರ್. ಕೊರೊನಾ ಸಂಕಷ್ಟದ ನಡುವೆ ಇದು ಬೇಕಿತ್ತಾ ಸ್ವಾಮಿ.. ಇದು ಬೇಕಿತ್ತಾ..?

ಕರ್ಫ್ಯೂ ನಿಯಮ ಉಲ್ಲಂಘಿಸಿ ಶ್ರೀಮಂತರ ಮೋಜು-ಮಸ್ತಿ! ಯೆಸ್​​.. ಕೊರೊನಾ ಕೂಪಕ್ಕೆ ಬಿದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ. ಕರುನಾಡು ಕೊರೊನಾ ಕೂಪಕ್ಕೆ ಬಿದ್ದು ಕಂಪಿಸ್ತಿದ್ರೆ ಸಕ್ಕರೆ ನಾಡು ಮಂಡ್ಯ ನಂಜಿನ ನಂಟಿಗೆ ನಲುಗಿ ಹೋಗಿದೆ. ದೇಶದಲ್ಲಿ ಲಾಕ್​ಡೌನ್ ರಿಲೀಫ್ ಕೊಟ್ಟು ಹಲವು ಖಡಕ್ ರೂಲ್ಸ್ ಜಾರಿಗೆ ತಂದಿದ್ದಾರೆ. ಆದ್ರೆ, ಮಂಡ್ಯದಲ್ಲಿ ಇದನ್ನೇ ಬಂಡವಾಳ ಮಾಡ್ಕೊಂಡಿರೋ ಕೆಲ ಪ್ರತಿಷ್ಠಿತರು. ಶ್ರೀಮಂತರು. ಹಣವಂತರು ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಕೆಆರ್​ಎಸ್​ ಬಳಿ ಕಾವೇರಿ ನದಿ ತಟದಲ್ಲಿ ರೇವ್ ಪಾರ್ಟಿ ಆಯೋಜಿಸಿ ಮೋಜಿನಾಟ ಆಡಿದ್ದಾರೆ. ದೊಡ್ಡದಾಗಿ ಪೆಂಡಾಲ್​ ಹಾಕಿ ಆರ್ಕೆಸ್ಟ್ರಾದ ಧ್ವನಿವರ್ಧಕ ಬಳಸಿ ಪಾರ್ಟಿ ಮಾಡಿರೋದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಇನ್ನು, ಕರ್ಫ್ಯೂ ನಡುವೆ ಇಷ್ಟೊಂದು ಮೋಜು-ಮಸ್ತಿ ಮಾಡಿದ್ದು ಮೈಸೂರು ಮೂಲದ ಸಂಜಯ್​ ಎಂಬುವರಿಗೆ ಸೇರಿದ ತೋಟದಲ್ಲಿ. ರೇವ್​ ಪಾರ್ಟಿಗೆ ಕಾರುಗಳಲ್ಲಿ ದಂಡು ದಂಡಾಗಿ ಶ್ರೀಮಂತರು ಆಗಮಿಸಿದ್ರು. ಇನ್ನೊಂದು ಇವರ ದೊಡ್ಡಸ್ತಿಕೆ ಏನಂದ್ರೆ ಕೆಆರ್​ಎಸ್ ಪೊಲೀಸ್​ ಠಾಣೆ ಬಳಿ ಪಾರ್ಟಿ ನಡೆಯುತ್ತಿದ್ರೂ ಪೊಲೀಸ್ರು ಗಪ್​ಚುಪ್​ ಆಗಿದಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಯಾಕ್​ ಸ್ವಾಮಿ ಕಿರಿಕಿರಿ ಮಾಡ್ತಿದ್ದೀರಾ ಅಂತಾ ಕೇಳಲು ಹೋಗಿದ್ದ ಸ್ಥಳೀಯರಿಗೆ ಆವಾಜ್ ಹಾಕಿದ್ದಾರಂತೆ.

ಕೆಆರ್​ಎಸ್​ ಠಾಣೆ ಬಳಿ ಪಾರ್ಟಿ ನಡೆಯುತ್ತಿದ್ದರೂ ಗಪ್​ಚುಪ್! ಅದ್ಯಾವಾಗ ಕೆಆರ್​ಎಸ್​ ಬಳಿಯ ಕಾವೇರಿ ನದಿ ತೀರದಲ್ಲಿ ಪಾರ್ಟಿ ಮಾಡಿದ್ದು ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡ್ತೋ ಖಾಕಿ ಪಡೆ ಅಲರ್ಟ್ ಆಗಿದೆ. ಅಲ್ಲಿ ಆಯೋಜಿಸಿದ್ದು ರೇವ್ ಪಾರ್ಟಿ ಅಲ್ಲ ಬರ್ತ್​ಡೇ ಪಾರ್ಟಿ ಅಂತ ಮಂಡ್ಯ ಎಸ್​ಪಿ ಪರಶುರಾಮ್​ ಪ್ರತಿಕ್ರಿಯಿಸಿದ್ರು. ಕೊರೊನಾ ನಡುವೆ ಪಾರ್ಟಿ ಆಯೋಜಿಸಿರೋರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದ್ದೇನೆ ಅಂತ ಹೇಳಿದ್ರು.

ಒಟ್ನಲ್ಲಿ, ಇಡೀ ದೇಶವೇ ಕೊರೊನಾ ಕುಲುಮೆಗೆ ಬಿದ್ದಿ ಒದ್ದಾಡ್ತಿದೆ. ಆದ್ರೆ, ಲಾಕ್​ಡೌನ್​ ರಿಲೀಫ್​ ನಡುವೆ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ ಮಾಡಿದ್ದು ಎಷ್ಟು ಸರಿ. ಪೊಲೀಸರ ಅನುಮತಿ ಇಲ್ಲದೇ ಈ ಪಾರ್ಟಿ ನಡೀತಾ? ಶ್ರೀಮಂತರು ಏನ್​ ಮಾಡಿದ್ರೂ ಸರೀನಾ? ಲಾಕ್​ಡೌನ್​ ರೂಲ್ಸ್​ಗೂ ಬೆಲೆನೇ ಇಲ್ವಾ? ಸಾಮಾನ್ಯರಿಗೊಂದು ನ್ಯಾಯ.. ಹಣವಂತರಿಗೊಂದು ನ್ಯಾಯಾನಾ? ಅಂತ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.

Published On - 7:14 am, Thu, 11 June 20

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM