ಮಂಡ್ಯ: ಮಿರ ಮಿರ ಮಿಂಚೋ ಲೈಟಿಂಗ್.. ಮತ್ತೇಟಿನ ನಡುವೆ ಕಿವಿಗೆ ಗುನುಗ್ತಿರೋ ಸಾಂಗ್.. ಟೇಬಲ್ ಮೇಲೆ ಗುಂಡು-ತುಂಡು ಇಟ್ಕೊಂಡು ಫುಲ್ ಡಿಸ್ಕಷನ್. ಇಲ್ಲಿ ಸಾಮಾಜಿಕ ಅಂತರಕ್ಕೂ ಡೋಂಟ್ ಕೇರ್. ರೂಲ್ಸ್ಗಳನ್ನ ಬ್ರೇಕ್ ಮಾಡಿ ಮೋಜು-ಮಸ್ತಿ. ಕರ್ಫ್ಯೂ ಉಲ್ಲಂಘಿಸಿ ಕತ್ತಲೆಯಲ್ಲಿ ಪಾರ್ಟಿ ದರ್ಬಾರ್. ಕೊರೊನಾ ಸಂಕಷ್ಟದ ನಡುವೆ ಇದು ಬೇಕಿತ್ತಾ ಸ್ವಾಮಿ.. ಇದು ಬೇಕಿತ್ತಾ..?
ಕರ್ಫ್ಯೂ ನಿಯಮ ಉಲ್ಲಂಘಿಸಿ ಶ್ರೀಮಂತರ ಮೋಜು-ಮಸ್ತಿ!
ಯೆಸ್.. ಕೊರೊನಾ ಕೂಪಕ್ಕೆ ಬಿದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ. ಕರುನಾಡು ಕೊರೊನಾ ಕೂಪಕ್ಕೆ ಬಿದ್ದು ಕಂಪಿಸ್ತಿದ್ರೆ ಸಕ್ಕರೆ ನಾಡು ಮಂಡ್ಯ ನಂಜಿನ ನಂಟಿಗೆ ನಲುಗಿ ಹೋಗಿದೆ. ದೇಶದಲ್ಲಿ ಲಾಕ್ಡೌನ್ ರಿಲೀಫ್ ಕೊಟ್ಟು ಹಲವು ಖಡಕ್ ರೂಲ್ಸ್ ಜಾರಿಗೆ ತಂದಿದ್ದಾರೆ. ಆದ್ರೆ, ಮಂಡ್ಯದಲ್ಲಿ ಇದನ್ನೇ ಬಂಡವಾಳ ಮಾಡ್ಕೊಂಡಿರೋ ಕೆಲ ಪ್ರತಿಷ್ಠಿತರು. ಶ್ರೀಮಂತರು. ಹಣವಂತರು ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಕೆಆರ್ಎಸ್ ಬಳಿ ಕಾವೇರಿ ನದಿ ತಟದಲ್ಲಿ ರೇವ್ ಪಾರ್ಟಿ ಆಯೋಜಿಸಿ ಮೋಜಿನಾಟ ಆಡಿದ್ದಾರೆ. ದೊಡ್ಡದಾಗಿ ಪೆಂಡಾಲ್ ಹಾಕಿ ಆರ್ಕೆಸ್ಟ್ರಾದ ಧ್ವನಿವರ್ಧಕ ಬಳಸಿ ಪಾರ್ಟಿ ಮಾಡಿರೋದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕೆಆರ್ಎಸ್ ಠಾಣೆ ಬಳಿ ಪಾರ್ಟಿ ನಡೆಯುತ್ತಿದ್ದರೂ ಗಪ್ಚುಪ್!
ಅದ್ಯಾವಾಗ ಕೆಆರ್ಎಸ್ ಬಳಿಯ ಕಾವೇರಿ ನದಿ ತೀರದಲ್ಲಿ ಪಾರ್ಟಿ ಮಾಡಿದ್ದು ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡ್ತೋ ಖಾಕಿ ಪಡೆ ಅಲರ್ಟ್ ಆಗಿದೆ. ಅಲ್ಲಿ ಆಯೋಜಿಸಿದ್ದು ರೇವ್ ಪಾರ್ಟಿ ಅಲ್ಲ ಬರ್ತ್ಡೇ ಪಾರ್ಟಿ ಅಂತ ಮಂಡ್ಯ ಎಸ್ಪಿ ಪರಶುರಾಮ್ ಪ್ರತಿಕ್ರಿಯಿಸಿದ್ರು. ಕೊರೊನಾ ನಡುವೆ ಪಾರ್ಟಿ ಆಯೋಜಿಸಿರೋರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದ್ದೇನೆ ಅಂತ ಹೇಳಿದ್ರು.
ಒಟ್ನಲ್ಲಿ, ಇಡೀ ದೇಶವೇ ಕೊರೊನಾ ಕುಲುಮೆಗೆ ಬಿದ್ದಿ ಒದ್ದಾಡ್ತಿದೆ. ಆದ್ರೆ, ಲಾಕ್ಡೌನ್ ರಿಲೀಫ್ ನಡುವೆ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ ಮಾಡಿದ್ದು ಎಷ್ಟು ಸರಿ. ಪೊಲೀಸರ ಅನುಮತಿ ಇಲ್ಲದೇ ಈ ಪಾರ್ಟಿ ನಡೀತಾ? ಶ್ರೀಮಂತರು ಏನ್ ಮಾಡಿದ್ರೂ ಸರೀನಾ? ಲಾಕ್ಡೌನ್ ರೂಲ್ಸ್ಗೂ ಬೆಲೆನೇ ಇಲ್ವಾ? ಸಾಮಾನ್ಯರಿಗೊಂದು ನ್ಯಾಯ.. ಹಣವಂತರಿಗೊಂದು ನ್ಯಾಯಾನಾ? ಅಂತ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.
Published On - 7:14 am, Thu, 11 June 20