ಮಂಡ್ಯ: ಕಾವೇರಿ ನದಿಗೆ ಹಾರಿದ ಮಹಿಳೆ, 2ನೇ ದಿನವೂ ಮುಂದುವರೆದ ಶೋಧ ಕಾರ್ಯ

ಶ್ರೀರಂಗಪಟ್ಟಣದ ಸಮೀಪ ಕಾವೇರಿ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ, ಇದುವರೆಗೂ ಮೃತದೇಹ ಪತ್ತೆಯಾಗಲಿಲ್ಲ. ಎರಡನೇ ದಿನವೂ ಸಹ ಮೀನುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಮಂಡ್ಯ: ಕಾವೇರಿ ನದಿಗೆ ಹಾರಿದ ಮಹಿಳೆ, 2ನೇ ದಿನವೂ ಮುಂದುವರೆದ ಶೋಧ ಕಾರ್ಯ
ಸಾಂದರ್ಭಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Aug 17, 2023 | 3:09 PM

ಮಂಡ್ಯ, (ಆಗಸ್ಟ್ 17): ದಿನೇದಿನೇ ಆತ್ಮಹತ್ಯೆ (Suicide) ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಆಘಾತಕಾರಿಯಾಗಿದೆ. 28 ವರ್ಷದ ರಮ್ಯಾ ಎನ್ನುವ  ಮಹಿಳೆ ಶ್ರೀರಂಗಪಟ್ಟಣದ (Srirangapatna) ಹಳೆ ಬ್ರಿಡ್ಜ್ ನಿಂದ ಕಾವೇರಿ ನದಿಗೆ ( Cauvery river) ಹಾರಿದ್ದಾರೆ. ಕನಕಪುರ ಮೂಲದ ಕೆಸರೆ ನಿವಾಸಿ ರಮ್ಯಾ ನಿನ್ನೆ(ಆಗಸ್ಟ್ 16) ಮಂಡ್ಯದ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಗೆ ಕಟ್ಟಲಾದ ಹಳೆ ಸೇತುವೆ ಬಳಿ ನದಿಗೆ ಹಾರಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಕೆಲವರು ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದ್ರೆ, ಇದುವರಗೂ ಮಹಿಳೆ ಪತ್ತೆಯಾಗಿಲ್ಲ.

ಇಂದೂ ಸಹ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಮೀನುಗಾರರು ಸಹ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎನ್ನುವುದನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ಮಂಡ್ಯ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ