ನಕಲಿ ಪತ್ರಕರ್ತರೆಂದು ಅಸಲಿ ಪತ್ರಕರ್ತರ ಬಂಧನ, ಬಿಡುಗಡೆ
ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಹಿನ್ನೆಲೆ ಕೇರಳದಿಂದ ಮಂಗಳೂರಿಗೆ ಬಂದಿದ್ದ ಪತ್ರಕರ್ತರನ್ನು ಬಂಧಿಸಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಆಗಮಿಸಿದ್ದ 50 ಜನರ ತಂಡ ವೆನ್ಲಾಕ್ ಆಸ್ಪತ್ರೆಗೆ ತೆರಳಿದ್ದರು. ಕ್ಯಾಮರಾ ಜೊತೆ ಮಾರಕಾಸ್ತ್ರಗಳನ್ನು ಹೊಂದಿದ್ದ ಇವರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅನುಮಾನ ಬಂದು ಪೊಲೀಸರು 50 ಜನರ ತಂಡವನ್ನು ಬಂಧಿಸಿದ್ದಾರೆ ಎಂದು ಟಿವಿ9ಗೆ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ. ಪೊಲೀಸರ ವಶದಲ್ಲಿದ್ದ ಪತ್ರಕರ್ತರ ಬಿಡುಗಡ: ನಕಲಿ ಪತ್ರಕರ್ತರೆಂದು ಬಂಧಿಸಿದ್ದವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. […]
ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಹಿನ್ನೆಲೆ ಕೇರಳದಿಂದ ಮಂಗಳೂರಿಗೆ ಬಂದಿದ್ದ ಪತ್ರಕರ್ತರನ್ನು ಬಂಧಿಸಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಆಗಮಿಸಿದ್ದ 50 ಜನರ ತಂಡ ವೆನ್ಲಾಕ್ ಆಸ್ಪತ್ರೆಗೆ ತೆರಳಿದ್ದರು. ಕ್ಯಾಮರಾ ಜೊತೆ ಮಾರಕಾಸ್ತ್ರಗಳನ್ನು ಹೊಂದಿದ್ದ ಇವರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅನುಮಾನ ಬಂದು ಪೊಲೀಸರು 50 ಜನರ ತಂಡವನ್ನು ಬಂಧಿಸಿದ್ದಾರೆ ಎಂದು ಟಿವಿ9ಗೆ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಪೊಲೀಸರ ವಶದಲ್ಲಿದ್ದ ಪತ್ರಕರ್ತರ ಬಿಡುಗಡ: ನಕಲಿ ಪತ್ರಕರ್ತರೆಂದು ಬಂಧಿಸಿದ್ದವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. 50 ಪತ್ರಕರ್ತರ ತಂಡ ಕೇರಳದಿಂದ ಮಂಗಳೂರಿಗೆ ಬಂದಿತ್ತು. ನಿನ್ನೆ ನಡೆದ ಪ್ರತಿಭಟನೆಯ ವರದಿಗಾಗಿ ಆಗಮಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಬಳಿ ನಿಂತಿದ್ದಾಗ ಸರಿಯಾದ ದಾಖಲೆ ತೋರಿಸದ ಕಾರಣ ಇವರನ್ನು ಬಂಧಿಸಿಲಾಗಿತ್ತು. ಈಗ ಬಂಧಿತರು ಅಸಲಿ ಪತ್ರಕರ್ತರು ಎಂದು ತಿಳಿದ ಮೇಲೆ ಪತ್ರಕರ್ತರನ್ನು ವರದಿ ಮಾಡಲು ಅವಕಾಶ ನೀಡದೆ ಬಿಡುಗಡೆ ಮಾಡಿ ಮತ್ತೆ ಕೇರಳಕ್ಕೆ ಕಳುಹಿಸಿದ್ದಾರೆ.