Rain Updates: ಮಂಗಳೂರು, ಉಡುಪಿ ಸೇರಿದಂತೆ ಕರ್ನಾಟಕದ ಕೆಲವೆಡೆ ಭಾರೀ ಮಳೆ

Karnataka Rains: ಭಾರೀ ಮಳೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪಾರ್ಕಿಂಗ್ ಏರಿಯಾ, ವೆಹಿಕಲ್ ಪಾತ್​ನಲ್ಲಿ ನೀರು ತುಂಬಿ ಟ್ರಾಫಿಕ್ ಜಾಮ್ ಆಗಿದೆ.

Rain Updates: ಮಂಗಳೂರು, ಉಡುಪಿ ಸೇರಿದಂತೆ ಕರ್ನಾಟಕದ ಕೆಲವೆಡೆ ಭಾರೀ ಮಳೆ
ಮಳೆ (ಸಾಂದರ್ಭಿಕ ಚಿತ್ರ)
Edited By:

Updated on: Oct 16, 2021 | 11:14 PM

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಇಂದು (ಅಕ್ಟೋಬರ್ 16) ಸಂಜೆಯ ವೇಳೆಗೆ ಧಾರಾಕಾರ ಮಳೆ‌ಯಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ‌ ಸುರಿದಿದೆ. ಗುಡುಗು- ಮಿಂಚು ಸಹಿತ ಮಳೆ‌ ಅಬ್ಬರಿಸಿದೆ. ಭಾರೀ ಮಳೆಯಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪಾರ್ಕಿಂಗ್ ಏರಿಯಾ, ವೆಹಿಕಲ್ ಪಾತ್​ನಲ್ಲಿ ನೀರು ತುಂಬಿ ಟ್ರಾಫಿಕ್ ಜಾಮ್ ಆಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದೂ ಹೇಳಲಾಗಿದೆ. ಸಂಜೆಯ ವೇಳೆ ಅಚಾನಕ್ ಆಗಿ ಸುರಿದ ಮಳೆಗೆ ವಾಹನ ಸವಾರರು ಪರದಾಟ ಪಟ್ಟಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಡ್ಯ: ನಗರದಲ್ಲಿ ಭಾರಿ ಮಳೆ
ಮಂಡ್ಯ ನಗರದಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಮಂಡ್ಯ ವಿವಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಬೈಕ್ ಹಾಗೂ ಕಾರುಗಳು ನೀರಿನಲ್ಲಿ ಮುಳುಗಿದೆ. ಸುಭಾಷ್ ನಗರದ ಪಿಡಬ್ಲ್ಯುಡಿ ಕ್ವಾರ್ಟರ್ಸ್​​ನಲ್ಲಿ ಅವಾಂತರ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಮನೆಗಳಿಂದ ನೀರು ಹೊರಹಾಕಲು ಜನಸಾಮಾನ್ಯರು ಹರಸಾಹಸ ಪಟ್ಟಿದ್ದಾರೆ.

ಚಾಮರಾಜನಗರ: ತುಂಬಿ ಹರಿದ ಹೊಂಡರಬಾಳು ಹಳ್ಳ
ಚಾಮರಾಜನಗರ ತಾಲೂಕಿನ ಹೊಂಡರಬಾಳು ಹಳ್ಳ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಹೊಂಡರಬಾಳು ಹಳ್ಳ ದಾಟಲು ಪ್ರವಾಸಿಗರು ಪರದಾಡುವಂತಾಗಿದೆ. ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಳ್ಳ ತುಂಬಿ ಹರಿದಿದೆ. 100ಕ್ಕೂ ಹೆಚ್ಚು ಜನ ಹಳ್ಳ ದಾಟಲು ಪರದಾಟ ಪಡುವಂತಾಗಿದೆ.

ಇದನ್ನೂ ಓದಿ: Kerala Rain: ಕೇರಳದಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆಗೆ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತ!

Published On - 11:13 pm, Sat, 16 October 21