ಕರ್ನಾಟಕ ಬಂದ್‌ಗೆ ಸಂಘಟನೆಗಳಿಂದಲೇ ವಿರೋಧ!

|

Updated on: Feb 13, 2020 | 6:51 AM

ಬೆಂಗಳೂರು: ಕರ್ನಾಟಕದಲ್ಲೇ ಕನ್ನಡಿಗರು ಉದ್ಯೋಗ ಪಡೆಯಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗ್ತಿರೋ ನಿರುದ್ಯೋಗ ಕನ್ನಡಿಗರ ಮೇಲೂ ಬೀರುತ್ತಿದೆ. ಇದರ ಪೂರ್ಣ ಲಾಭ ಬೇರೆ ರಾಜ್ಯದವರಿಗೆ ಆಗ್ತಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್​ನಿಂದ ಎಲ್ಲಿಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಅನ್ನೋದನ್ನ ಇಲ್ಲಿ ಓದಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಭಾಷೆ, ನಾಡು ನುಡಿ ಜಲಕ್ಕೆ ಏನೇ ಧಕ್ಕೆ ಬಂದ್ರೂ, ಸ್ವಾಭಿಮಾನಿ ಕನ್ನಡಿಗರು ಸಹಿಸಲ್ಲ. 6 ಕೋಟಿ […]

ಕರ್ನಾಟಕ ಬಂದ್‌ಗೆ ಸಂಘಟನೆಗಳಿಂದಲೇ ವಿರೋಧ!
Follow us on

ಬೆಂಗಳೂರು: ಕರ್ನಾಟಕದಲ್ಲೇ ಕನ್ನಡಿಗರು ಉದ್ಯೋಗ ಪಡೆಯಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗ್ತಿರೋ ನಿರುದ್ಯೋಗ ಕನ್ನಡಿಗರ ಮೇಲೂ ಬೀರುತ್ತಿದೆ. ಇದರ ಪೂರ್ಣ ಲಾಭ ಬೇರೆ ರಾಜ್ಯದವರಿಗೆ ಆಗ್ತಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್​ನಿಂದ ಎಲ್ಲಿಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಅನ್ನೋದನ್ನ ಇಲ್ಲಿ ಓದಿ

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಭಾಷೆ, ನಾಡು ನುಡಿ ಜಲಕ್ಕೆ ಏನೇ ಧಕ್ಕೆ ಬಂದ್ರೂ, ಸ್ವಾಭಿಮಾನಿ ಕನ್ನಡಿಗರು ಸಹಿಸಲ್ಲ. 6 ಕೋಟಿ ಕನ್ನಡಿಗರ ನೇತೃತ್ವವನ್ನ ಕನ್ನಡ ಪರ ಸಂಘಟನೆಗಳೇ ತೆಗೆದುಕೊಳ್ತಿದ್ವು. ಪ್ರತಿ ಸಾರಿ ಏನೇ ಹೋರಾಟ ಮಾಡಬೇಕಾದ್ರೂ ಸಂಘಟನೆಗಳೇ ಮುಂದೆ ನಿಂತು ಹೋರಾಟಕ್ಕೆ ಧುಮುಕುತಿದ್ವು. ಪ್ರತಿ ಕನ್ನಡಿಗನ ಮತ್ತು ಕನ್ನಡದ ಅಸ್ಮಿತೆಯನ್ನ ಸರ್ಕಾರಕ್ಕೆ ಮುಟ್ಟುವಂತೆ ಒಗ್ಗಟ್ಟಿನಲ್ಲಿ ಪ್ರತಿಭಟನೆಗಿಳೀತಿದ್ವು.. ಆದ್ರೀಗ, ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ, ಬೆಂಬಲದ ವಿಚಾರದಲ್ಲಿ ಸಂಘಟನೆಗಳು ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದೆ.

ಕರ್ನಾಟಕ ಬಂದ್‌ಗೆ ಸಂಘಟನೆಗಳಲ್ಲೇ ವಿರೋಧ!
ಕರ್ನಾಟಕ ಬಂದ್‌ಗೆ ಬೆಂಬಲ ಕೊಡಿ ಅಂತಾ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಸೇರಿ ಹಲವರನ್ನ ಕನ್ನಡ ಒಕ್ಕೂಟದ ನಾಗೇಶ್ ಮನವಿ ಮಾಡಿದ್ರಂತೆ. ಆದ್ರೆ, ಯಾರೊಬ್ಬರೂ ಬಂದ್‌ಗೆ ಬೆಂಬಲ ಕೊಡಲು ಮುಂದೆ ಬಂದಿಲ್ಲವಂತೆ. ಇದೇ ಕರ್ನಾಟಕ ಬಂದ್ ಬಗ್ಗೆ ಗೊಂದಲ ಸೃಷ್ಟಿಸಿದೆ.

ಬಂದ್‌ಗೆ ಬೆಂಬಲ ನೀಡಲ್ಲ ಎಂದ ವಾಟಾಳ್!
ಇನ್ನು, ಬಂದ್ ಅಂದ್ರೆ ಸಾಕು ತುದಿಗಾಲಲ್ಲಿ ನಿರ್ತಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್​ಗೆ ಬೆಂಬಲ ನೀಡಿಲ್ಲ. ಆದ್ರೆ, ಮಾರ್ಚ್ 5 ರಂದು ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕೋದಾಗಿ ಗುಡುಗಿದ್ರು.

ಹೋರಾಟಕ್ಕೆ ಬೆಂಬಲವಿದೆ… ಬಂದ್​ಗಿಲ್ಲ..!
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಕೂಡ ಬಂದ್​​ನಿಂದ ಹಿಂದೆ ಸರಿದಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡ್ತಿದ್ದೀವಿ. ಬಂದ್ ಮಾಡಿದ್ದೀವಿ ಆದ್ರೂ ಏನೂ ಪ್ರಯೋಜನವಾಗಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಹಿಷಿ ವರದಿಯನ್ನ ಜಾರಿಗೊಳಿಸಲಿಲ್ಲ. ಆದ್ರೆ, ಬಂದ್​ಗೆ ಬೆಂಬಲ ಸೂಚಿಸ್ತಿದ್ದಾರೆ ಅಂತಾ ಸಿದ್ದು ವಿರುದ್ಧ ಕಿಡಿಕಾರಿದ್ರು.

ಎಲ್ಲಿಂದ ಎಲ್ಲಿಗೆ ನಡೆಯತ್ತೆ ಪ್ರತಿಭಟನಾ ಱಲಿ..?
ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ‌ರೈಲು‌ ನಿಲ್ದಾಣಕ್ಕೆ ಕನ್ನಡ ಹೋರಾಟಗಾರರು ಆಗಮಿಸಲಿದ್ದಾರೆ. 11 ಗಂಟೆಗೆ ರೈಲು ನಿಲ್ದಾಣದಿಂದಲೇ ಪ್ರತಿಭಟನಾ ಱಲಿ ಆರಂಭವಾಗಲಿದೆ. ಮಧ್ಯಾಹ್ನ12 ಗಂಟೆಗೆ ಹೋರಾಟಗಾರರ ಮೆರವಣಿಗೆ ಆನಂದ ರಾವ್ ಸರ್ಕಲ್ ತಲುಪಲಿದೆ. 12:30 ಕ್ಕೆ ಆನಂದ ರಾವ್ ಸರ್ಕಲ್‌ನ ಫ್ಲೈ-ಓವರ್ ಮೂಲಕ ಪ್ರತಿಭಟನಾ ಱಲಿ ಫ್ರೀಡಂ ಪಾರ್ಕ್ ತಲುಪಲಿದೆ. ಸುಮಾರು 2 ಗಂಟೆವರೆಗೂ ಫ್ರೀಡಂ ಪಾರ್ಕ್‌ನಲ್ಲಿ ಕನ್ನಡ ಹೋರಾಟಗಾರರು ಧರಣಿ ನಡೆಸಲಿದ್ದಾರೆ.

ಇಂದಿನ ಬಂದ್‌ಗೆ ಸುಮಾರು 500 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ಹೋರಾಟಗಾರರು ಭಾಗಿಯಾಗುತ್ತಿದ್ದಾರೆ. ಹೀಗಾಗಿ ಇಂದು ಹಲವು ಕಡೆ ಟ್ರಾಫಿಕ್ ಜಾಮ್ ಕೂಡ ಎದುರಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಟ್ರಾಫಿಕ್ ಜಾಮ್..?
ಕನ್ನಡಿಗರ ಕಹಳೆಗೆ ಮೆಜೆಸ್ಟಿಕ್ ಸುತ್ತುಮುತ್ತಲಿನ ‌ರಸ್ತೆಗಳು ಬಂದ್ ಆಗಲಿದೆ. ರೈಲ್ವೆ ನಿಲ್ದಾಣದ ರಸ್ತೆ, ಆನಂದ್ ರಾವ್ ಸರ್ಕಲ್ ಫುಲ್ ಜಾಮ್ ಆಗೋ ಸಾಧ್ಯತೆಯಿದೆ. ಹಾಗೆಯೇ ರೇಸ್ ಕೋರ್ಸ್ ರೋಡ್, ಕೆ.ಆರ್. ಸರ್ಕಲ್, ಕಾರ್ಪೊರೇಷನ್ ‌ಸರ್ಕಲ್, ಫ್ರೀಡಂ ಪಾರ್ಕ್‌ ಸಂಪರ್ಕಿಸುವ ರಸ್ತೆಗಳು ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಕಂಪ್ಲೀಟ್ ಜಾಮ್ ಆಗಲಿದೆ.

ಒಟ್ನಲ್ಲಿ ಕನ್ನಡ ಪರ ಸಂಘಟನೆಗಳ ಪರ ವಿರೋಧದ ನಡುವೆಯೇ, ನಡೆಯುತ್ತಿರುವ ಕರ್ನಾಟಕ ಬಂದ್​ಗೆ ವೇದಿಕೆಯೇನೋ ಸಿದ್ಧವಾಗಿದೆ. ಆದ್ರೆ, ಈ ಹೋರಾಟದಿಂದಾಗಿ ಸರೋಜಿನಿ ಮಹಿಷಿ ವರಿದಿ ಜಾರಿಗೊಂಡು, ಕನ್ನಡಿಗರಿಗೆ ಉದ್ಯೋಗ ಸಿಗುತ್ತಾ ಅನ್ನೋದೆ ಪ್ರಶ್ನೆಯಾಗಿದೆ.

Published On - 6:50 am, Thu, 13 February 20