ಮೇಖ್ರಿ ಸರ್ಕಲ್ ಅಪಘಾತ: ನಲಪಾಡ್ ಗನ್‌ಮ್ಯಾನ್​ ಕೋರ್ಟ್​ಗೆ ಹಾಜರ್, ಜಡ್ಜ್​ ಏನಂದ್ರು?

ಬೆಂಗಳೂರು: ಫೆಬ್ರವರಿ 9ರಂದು ನಗರದ ಮೇಖ್ರಿ ಸರ್ಕಲ್‌ ಬಳಿ ಸರಣಿ ಅಪಘಾತ ಸಂಬಂಧ ಮಹಮ್ಮದ್ ನಲಪಾಡ್ ಬಾಡಿಗಾರ್ಡ್ ಬಾಲಕೃಷ್ಣಗೆ ಜಾಮೀನು ದೊರೆತಿದೆ. ಬಾಲಕೃಷ್ಣಗೆ 3 ಸಾವಿರ ಕ್ಯಾಷ್ ಶ್ಯೂರಿಟಿ ಮೇರೆಗೆ ಜಾಮೀನು ನೀಡಿ 7ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಸರಣಿ ಕಾರು ಅಪಘಾತ ಸಂಬಂಧ ನಲಪಾಡ್ ಪರವಾಗಿ ನಾನೇ ಆಕ್ಸಿಡೆಂಟ್ ಮಾಡಿದ್ದು ಎಂದು ಬಾಲಕೃಷ್ಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಘಟನೆ ಸಂಬಂಧ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇರೆಗೆ ಸದಾಶಿವನಗರ ಪೊಲೀಸರು ದೂರು ದಾಖಲಿಸಿಕೊಂಡು, ಗನ್​ಮ್ಯಾನ್ ಬಾಲಕೃಷ್ಣನನ್ನು […]

ಮೇಖ್ರಿ ಸರ್ಕಲ್ ಅಪಘಾತ: ನಲಪಾಡ್ ಗನ್‌ಮ್ಯಾನ್​ ಕೋರ್ಟ್​ಗೆ ಹಾಜರ್, ಜಡ್ಜ್​ ಏನಂದ್ರು?
Follow us
ಸಾಧು ಶ್ರೀನಾಥ್​
|

Updated on:Feb 13, 2020 | 11:20 AM

ಬೆಂಗಳೂರು: ಫೆಬ್ರವರಿ 9ರಂದು ನಗರದ ಮೇಖ್ರಿ ಸರ್ಕಲ್‌ ಬಳಿ ಸರಣಿ ಅಪಘಾತ ಸಂಬಂಧ ಮಹಮ್ಮದ್ ನಲಪಾಡ್ ಬಾಡಿಗಾರ್ಡ್ ಬಾಲಕೃಷ್ಣಗೆ ಜಾಮೀನು ದೊರೆತಿದೆ. ಬಾಲಕೃಷ್ಣಗೆ 3 ಸಾವಿರ ಕ್ಯಾಷ್ ಶ್ಯೂರಿಟಿ ಮೇರೆಗೆ ಜಾಮೀನು ನೀಡಿ 7ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಸರಣಿ ಕಾರು ಅಪಘಾತ ಸಂಬಂಧ ನಲಪಾಡ್ ಪರವಾಗಿ ನಾನೇ ಆಕ್ಸಿಡೆಂಟ್ ಮಾಡಿದ್ದು ಎಂದು ಬಾಲಕೃಷ್ಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಘಟನೆ ಸಂಬಂಧ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇರೆಗೆ ಸದಾಶಿವನಗರ ಪೊಲೀಸರು ದೂರು ದಾಖಲಿಸಿಕೊಂಡು, ಗನ್​ಮ್ಯಾನ್ ಬಾಲಕೃಷ್ಣನನ್ನು ಬಂಧಿಸಿದ್ದರು. ಪೊಲೀಸರು ವಿಚಾರಣೆ ನಡೆಸಿ ಇಂದು 7ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಿದ್ದರು.

ಸರಣಿ ಅಪಘಾತ ಹಿನ್ನೆಲೆ: ಸರಣಿ ಅಪಘಾತದಿಂದ ಬೈಕ್ ಸವಾರ ಪ್ರಫುಲ್ ಎಂಬಾತನ ಕಾಲು ಮೂಳೆ ಮುರಿದಿತ್ತು. ಅಪಘಾತದ ಬಳಿಕ ದುಬಾರಿ ಕಾರನ್ನ ಬಿಟ್ಟು ಚಾಲಕ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸದಾಶಿವನಗರ ಪೊಲೀಸರು ಕಾರನ್ನು ಜಪ್ತಿ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಪ್ರಕರಣ ಬೆನ್ನು ಹತ್ತಿದ ಪೊಲೀಸರು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಟೆಕ್ನಿಕಲ್ ಸಾಕ್ಷ್ಯಗಳನ್ನ ಆಧರಿಸಿ ತನಿಖೆ ನಡೆಸಿದ್ದರು.

ಈ ನಡುವೆ ಅಪಘಾತ ಮಾಡಿದ್ದು ತಾನೇ ಎಂದು ಗನ್​ಮ್ಯಾನ್ ಬಾಲಕೃಷ್ಣ ಮುಂದೆ ಬಂದಿದ್ದ. ಆದ್ರೆ ಸಾಕ್ಷ್ಯಾಧಾರಗಳಿಂದ ಕಾರು ಚಲಾಯಿಸುತ್ತಿದ್ದದ್ದು ಮಹಮ್ಮದ್ ನಲಪಾಡ್ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಸಂಚಾರಿ ಠಾಣೆ ಪೊಲೀಸರಿಂದ ನಲಪಾಡ್​ಗೆ ನೋಟಿಸ್ ಸಹ ಜಾರಿಗೊಳಿಸಿದ್ದಾರೆ.

Published On - 2:41 pm, Wed, 12 February 20

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು