ಕರ್ನಾಟಕ ಬಂದ್​ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ

|

Updated on: Dec 05, 2020 | 2:11 PM

ರಾಜ್ಯಾದ್ಯಂತ ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಕನ್ನಡಿಗರು ಹೋರಾಟ ನಡೆಸುತ್ತಿದ್ದರೆ ಇತ್ತ ನಗರದಲ್ಲಿ ಮರಾಠ ಸಮುದಾಯದವರು ವಿಜಯೋತ್ಸವ ಆಚರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕರ್ನಾಟಕ ಬಂದ್​ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ
ಧಾರವಾಡದಲ್ಲಿ ಮರಾಠಿಗರ ವಿಜಯೋತ್ಸವ
Follow us on

ಧಾರವಾಡ: ರಾಜ್ಯಾದ್ಯಂತ ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಕನ್ನಡಿಗರು ಹೋರಾಟ ನಡೆಸುತ್ತಿದ್ದರೆ ಇತ್ತ ನಗರದಲ್ಲಿ ಮರಾಠ ಸಮುದಾಯದವರು ವಿಜಯೋತ್ಸವ ಆಚರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮರಾಠ ಸಮುದಾಯದವರು ಶಿವಾಜಿ ವೃತ್ತದಲ್ಲಿರೋ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವ ಆಚರಿಸಿದರು. ಪೊಲೀಸ್ ಬಿಗಿಭದ್ರತೆಯ ನಡುವೆ ವಿಜಯೋತ್ಸವ ಆಚರಿಸಿದ ಮರಾಠಿಗರು ಶಿವಾಜಿಗೆ ಜಯಘೋಷ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.

ಇತ್ತ, ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮರಾಠ ಸಮುದಾಯದವರು ಸಹ ವಿಜಯೋತ್ಸವ ನಡೆಸಿದರು. ಶಿವಾಜಿ ವೃತ್ತದ ಬಳಿ ಸಿಹಿ ಹಂಚಿ ಸಂಭ್ರಮಿಸಿದ ಮರಾಠಿಗರು ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಮಾಲೀಕರಿಗೆ ಸಿಹಿ ಹಂಚಿದರು. ಜೊತೆಗೆ, ಶಿವಾಜಿ ಪರ ಘೋಷಣೆ ಸಹ ಕೂಗಿದರು.

ಊರು ಮೇಲೆ ಊರು ಬಿದ್ರೂ ನವಜೋಡಿ ಡೋಂಟ್​ ಕೇರ್: ಬಂದ್​ ಮಧ್ಯೆ ಮಸ್ತ್​ ವೆಡ್ಡಿಂಗ್​ ಫೋಟೋಶೂಟ್

Published On - 12:57 pm, Sat, 5 December 20