ನನ್ನ ತಂದೆ ತಾಯಿ ತೀರಿಕೊಂಡಾಗಲೂ ಇಷ್ಟು ನೋವಾಗಿರಲಿಲ್ಲ.. BSYಗೆ ಬುದ್ಧಿ ಕಲಿಸ್ತೇವೆ -ವಾಟಾಳ್​ ಗುಡುಗು

ನನ್ನ ತಂದೆ ತಾಯಿ ತೀರಿಕೊಂಡಾಗ್ಲು ನನ್ನಗೆ ನೋವು ಆಗಿರಲಿಲ್ಲ. ಇವತ್ತು ಯಡಿಯೂರಪ್ಪ ತುಂಬಾ ನೋವು ಮಾಡಿದ್ದಾರೆ. ಈ ಯಡಿಯೂರಪ್ಪಗೆ ಬುದ್ಧಿ ಕಲಿಸ್ತೇವೆ ಎಂದು ವಾಟಾಳ್ ನಾಗಾರಾಜ್ ಸಿಟ್ಟಾದರು.

ನನ್ನ ತಂದೆ ತಾಯಿ ತೀರಿಕೊಂಡಾಗಲೂ ಇಷ್ಟು ನೋವಾಗಿರಲಿಲ್ಲ.. BSYಗೆ ಬುದ್ಧಿ ಕಲಿಸ್ತೇವೆ -ವಾಟಾಳ್​ ಗುಡುಗು
BSYಗೆ ಬುದ್ಧಿ ಕಲಿಸ್ತೇವ -ವಾಟಾಳ್​ ಗುಡುಗು
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Dec 05, 2020 | 2:39 PM

ಬೆಂಗಳೂರು: 25 ಸಾವಿರ ಕನ್ನಡ ಪರ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಹೋಗಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ಈ ರಾಜ್ಯಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೋಸಗಾರ. ಯಡಿಯೂರಪ್ಪ ಮಾಡಿದ ಮೋಸದಿಂದ ನೋವಾಗಿದೆ. ಕನ್ನಡಿಗರನ್ನು ತುಳಿದು ಬೇರೆಯವರಿಗೆ ಪಟ್ಟ ಕಟ್ಟುತ್ತಿದ್ದಾರೆ. ತಮಿಳು, ತೆಲುಗು, ಮರಾಠಿಗರಿಗೆ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂದು ವಾಟಾಳ್​ ಕಿಡಿಕಾರಿದರು. ನಾವು ಬಂದ್‌ಗೆ ಅನುಮತಿಯನ್ನು ಪಡೆಯಬೇಕಾ? ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜೈಲ್ ಭರೋ ಚಳವಳಿಗೆ ಬುಧವಾರ ಸಭೆ ಕರೆದಿದ್ದೇವೆ ಎಂದು ಟಿವಿ9ಗೆ ವಾಟಾಳ್ ನಾಗರಾಜ್ ಹೇಳಿದರು.

‘ಸಿಎಂ B.S.ಯಡಿಯೂರಪ್ಪ ಪರಭಾಷಾ ಏಜೆಂಟ್’ ಸಿಎಂ ಬಿ.ಎಸ್.ಯಡಿಯೂರಪ್ಪ ಒಬ್ಬ ದ್ರೋಹಿ. ಸಿಎಂ ಬಿ.ಎಸ್.ಯಡಿಯೂರಪ್ಪ ಈ ದೇಶದ ಹಿಟ್ಲರ್. ಸಿಎಂ B.S.ಯಡಿಯೂರಪ್ಪ ಪರಭಾಷಾ ಏಜೆಂಟ್. ಬಿಜೆಪಿ, RSS ಕನ್ನಡ ವಿರೋಧಿಯಾಗಿವೆ ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶ ಹೊರಹಾಕಿದರು. ನನ್ನ ತಂದೆ ತಾಯಿ ತೀರಿಕೊಂಡಾಗ್ಲು ನನ್ನಗೆ ನೋವು ಆಗಿರಲಿಲ್ಲ. ಇವತ್ತು ಯಡಿಯೂರಪ್ಪ ತುಂಬಾ ನೋವು ಮಾಡಿದ್ದಾರೆ. ಈ ಯಡಿಯೂರಪ್ಪಗೆ ಬುದ್ಧಿ ಕಲಿಸ್ತೇವೆ ಎಂದು ವಾಟಾಳ್ ನಾಗಾರಾಜ್ ಸಿಟ್ಟಾದರು.

ಟೌನ್ ಹಾಲ್​ನತ್ತ ಹೊರಟ ವಾಟಾಳ್ ನಾಗಾರಾಜ್ ಕಾರ್ಪೋರೇಷನ್ ಮುಂಭಾಗದ ರಸ್ತೆಯಲ್ಲಿ ತಮ್ಮ ಸಹ ಕನ್ನಡ ಪರ ಹೋರಾಟಗಾರರೊಂದಿಗೆ ಸಾಗಿದರು. ಈ ನಡುವೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ಮಧ್ಯೆ ವಾಗ್ವಾದ ಸಹ ನಡೆಯಿತು. ಆಗ, ವಾಟಾಳ್ ಹಾಗೂ ಇತರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕಾರ್ಪೊರೇಷನ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಸಹ ಉಂಟಾಯಿತು.

Published On - 11:37 am, Sat, 5 December 20