ಮಗಳ ಮೇಲೆ ಅಪ್ಪ-ಅಣ್ಣನಿಂದ ತೀವ್ರ ಹಲ್ಲೆ.. ಯುವತಿಯ ಕೈ ಬೆರಳು ಕಟ್!

ಪೋಷಕರು ಯುವತಿಯ ಕುತ್ತಿಗೆ ಕುಯ್ಯಲು ಯತ್ನಿಸಿದಾಗ ಕೈ ಅಡ್ಡ ತಂದ ಪರಿಣಾಮ ಕೈ ಬೆರಳು ಕತ್ತರಿಸಿ ಹೋಗಿದ್ದು, ಸದ್ಯಕ್ಕೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಗಳ ಮೇಲೆ ಅಪ್ಪ-ಅಣ್ಣನಿಂದ ತೀವ್ರ ಹಲ್ಲೆ.. ಯುವತಿಯ ಕೈ ಬೆರಳು ಕಟ್!
ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ
Follow us
sandhya thejappa
|

Updated on:Dec 06, 2020 | 10:10 AM

ಚಾಮರಾಜನಗರ : ಎರಡು ವರ್ಷಗಳಿಂದ ಪ್ರೀತಿಸಿದ ಪ್ರಿಯಕರನೊಂದಿಗೆ ಮದುವೆಯಾಗಲು ಯವತಿಯ ಪೋಷಕರು ಭಾರಿ ವಿರೋಧ ವ್ಯಕ್ತಪಡಿಸಿದ್ದು, ಮನೆಯವರಿಂದಲೇ ಯುವತಿಯ ಮೇಲೆ ತೀವ್ರ ಹಲ್ಲೆ ನಡೆದಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯದಲ್ಲಿ ನಡೆದಿದೆ.

ಪೋಷಕರು ಯುವತಿಯ ಕುತ್ತಿಗೆ ಕುಯ್ಯಲು ಯತ್ನಿಸಿದಾಗ ಕೈ ಅಡ್ಡ ತಂದ ಪರಿಣಾಮ ಕೈ ಬೆರಳು ಕತ್ತರಿಸಿ ಹೋಗಿದ್ದು, ಸದ್ಯಕ್ಕೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮದುವೆಗೆ ತೀವ್ರ ಆಕ್ರೋಶ: ಪಿ.ಜಿ.ಪಾಳ್ಯದ ಸತ್ಯ ಎಂಬಾತನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದು, ಇಬ್ಬರ ಮದುವೆಗೆ ಯುವತಿ ಮನೆಯವರು ಒಪ್ಪಿರಲಿಲ್ಲ. ಹೀಗಿದ್ದೂ ಪ್ರೇಮಿಗಳು ಡಿಸೆಂಬರ್ 7ರಂದು ಮದುವೆಯಾಗಲು ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡು ಯುವತಿಯ ತಂದೆ ಶಿವಸ್ವಾಮಿ ಹಾಗೂ ಅಣ್ಣ ಮಹೇಂದ್ರನಿಂದ ಮನೆ ಮಗಳಾದ ಧನಲಕ್ಷಿ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಯುವತಿಯ ಮೇಲೆ ಹಲ್ಲೆ ನಡೆಸಿದ ತಂದೆ ಮತ್ತು ಅಣ್ಣನ ವಿರುದ್ಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:12 pm, Sat, 5 December 20