ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು

|

Updated on: Nov 20, 2019 | 10:33 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ. ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ […]

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು
Follow us on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ.

ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?:
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ ನೀರು ಕುಡೀತಿದ್ವು. ಹೀಗಾಗಿ 2013ರಲ್ಲಿ ಇಲಿ ಸೇನೆಯನ್ನ ಹಿಡಿಯೋಕೆ ಟೆಂಡರ್ ಕೊಟ್ಟಿದ್ರು. ಆದ್ರೆ, ಟೆಂಡರ್ ಪಡೆದಿದ್ದ ಆಸಾಮಿ 6 ತಿಂಗಳಲ್ಲಿ 20 ಇಲಿಗಳನ್ನ ಹಿಡಿದು 2 ಲಕ್ಷ ರೂಪಾಯಿ ಬಿಲ್ ಪಡೆದಿದ್ದ. ಅಲ್ಲಿಂದ ಇಲ್ಲಿಯವರೆಗೂ ಬಿಬಿಎಂಪಿಯಲ್ಲಿ ಱಟ್ಸ್ ಪರ್ಮನೆಂಟ್ ಗೆಸ್ಟ್ ಆಗಿವೆ.

ಬೆಕ್ಕಗಳೇ ಬೆಸ್ಟ್ ಅಂತಾರೆ ಮೇಯರ್:
ಒಂದಿಲ್ಲೊಂದು ಎಡವಟ್ಟಿನಲ್ಲಿ ಸುದ್ದಿಯಾಗೋ ಬಿಬಿಎಂಪಿಗೆ ಇಲಿಗಳ ಕಾಟ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಡಾಕ್ಯುಮೆಂಟ್​ಗಳನ್ನ ಸ್ವಾಹ ಮಾಡ್ತಿದ್ದ ಇಲಿಗಳು ಈಗ ಮೇಯರ್ ಕೊಠಡಿಗೆ ಎಂಟ್ರಿ ಕೊಟ್ಟಿವೆ. ಹೀಗಾಗಿ ಟೆಂಡರ್ ಕೊಟ್ಟು ಲಕ್ಷ ಲಕ್ಷ ಖರ್ಚು ಮಾಡೋ ಬದ್ಲು, ಬೆಕ್ಕುಗಳನ್ನ ತರೋದೆ ಬೆಸ್ಟ್ ಅಂತಿದ್ದಾರೆ ಮೇಯರ್ ಗೌತಮ್ ಕುಮಾರ್.