ಸಮಾಜ ಸೇವೆಯಲ್ಲ, ಇದು ‘ಕರ್ತವ್ಯ’; ಜನಾನುರಾಗಿ ಈ ಬೆಂಗಳೂರು ಹುಡುಗ ವಿನೋದ್

ಇವರ ಹೆಸರು ವಿನೋದ್ ಕರ್ತವ್ಯ. ವೃತ್ತಿಯಲ್ಲಿ ಡಿಆರ್​​ಡಿಒ ತಾಂತ್ರಿಕ ಅಧಿಕಾರಿ. ನಮ್ಮ ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ, ಅದನ್ನು ನಾವು ಸಮಾಜಕ್ಕೆ ಮರಳಿಸಬೇಕು. ಹಾಗಾಗಿ ನಾನು ಮಾಡುತ್ತಿರುವುದು ಸಾಮಾಜಿಕ ಸೇವೆ ಅಲ್ಲ, ಕರ್ತವ್ಯ ಎಂದು ಹೇಳುವ ಜನಾನುರಾಗಿಯಾದ ಈ ಯುವಕನಿಗೆ ನಾಡು ನುಡಿ ಬಗ್ಗೆ ಅಪಾರ ಹೆಮ್ಮೆ. ಸಮಾಜದ ಬಗ್ಗೆ ಅತೀವ ಕಾಳಜಿ. ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ನೇತೃತ್ವವಹಿಸಿರುವ 'ಬೆಂಗಳೂರು ಹುಡುಗ' ತಂಡದ ಸಂಸ್ಥಾಪಕ ವಿನೋದ್ ಅವರ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಿರುನೋಟ ಬೀರುವ ಲೇಖನ ಇಲ್ಲಿದೆ.

ಸಮಾಜ ಸೇವೆಯಲ್ಲ, ಇದು ಕರ್ತವ್ಯ; ಜನಾನುರಾಗಿ ಈ ಬೆಂಗಳೂರು ಹುಡುಗ ವಿನೋದ್
ವಿನೋದ್ ಕರ್ತವ್ಯ

Updated on: Jul 25, 2024 | 1:15 PM

ಫೇಸ್​​ಬುಕ್​​​ನಲ್ಲಿ ಸ್ಕ್ರಾಲ್ ಮಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಹೆಸರು ಬೆಂಗಳೂರು ಹುಡುಗ ವಿನೋದ್ ಕರ್ತವ್ಯ (Vinod karthavya). ವೃತ್ತಿ ಡಿಆರ್​​​ಡಿಒದಲ್ಲಿ(DRDO) ತಾಂತ್ರಿಕ ಅಧಿಕಾರಿ. ಹೆಸರಿನ ಬಗ್ಗೆ ಕುತೂಹಲದಿಂದ ಫೇಸ್​​ಬುಕ್ ಫೀಡ್ ನೋಡಿದಾಗ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಒಂದಷ್ಟು ವಿಷಯ ಗೊತ್ತಾಗಿಬಿಟ್ಟಿತು. ಇವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಅವರಲ್ಲಿ ಮಾತನಾಡಿಸಿದಾಗ ಅವರು ಹೇಳಿದ್ದು, ನಾವು ಮಾಡುತ್ತಿರುವುದು ಸೇವೆ ಅಲ್ಲ, ಕರ್ತವ್ಯ. ಸಮಾಜ ನಮಗೆ ಕೊಟ್ಟಿದ್ದನ್ನು ನಾವು ಸಮಾಜಕ್ಕೆ ಮರಳಿಸುತ್ತಿದ್ದೇವೆ. ಹೆಸರಿನ ಜತೆಗೆ ‘ಕರ್ತವ್ಯ’ ಎಂದು ಸೇರಿಸಿಕೊಂಡಿರುವ ಬಗ್ಗೆ ಮಾತು ಆರಂಭಿಸಿದ ವಿನೋದ್, ತಾವು ಯಾವ ರೀತಿ ಸಾಮಾಜಿಕ ಕರ್ತವ್ಯಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ಟಿವಿ9 ಆ್ಯಪ್​​ಗೆ ವಿವರಿಸಿದ್ದಾರೆ. ಹುಟ್ಟಿ ಬೆಳೆದದ್ದು ಬಡತನದಲ್ಲಿ. ಅಪ್ಪ ಸೋಮಶೇಖರ್ ಮಗ್ಗದ ಕೆಲಸ ಮಾಡುತ್ತಿದ್ದರು. ಅಮ್ಮ ಇಂದ್ರಾಣಿ. ಮನೆಯಲ್ಲಿ ಬಡತನವಿದ್ದರೂ ಅಪ್ಪ ಅಮ್ಮ ನನಗೆ ಉತ್ತಮ ಶಿಕ್ಷಣವನ್ನು ಕೊಡಿಸಿದರು. ನಾನು ಐಐಟಿ ಮುಗಿಸಿ, ಬಿಕಾಂ ಮಾಡಿ ನಂತರ ಡಿಪ್ಲೋಮಾ ಇಂಜಿನಿಯರಿಂಗ್ ಮಾಡಿದ್ದೆ. ಸಂಜೆ ಕಾಲೇಜಿಗೆ ಹೋಗಿ ಶಿಕ್ಷಣ ಪೂರೈಸಿದ್ದೆ. ನನ್ನ 19ನೇ ವಯಸ್ಸಿನಲ್ಲಿ ಡಿಆರ್​​ಡಿಒದಲ್ಲಿ ನೌಕರಿ ಸಿಕ್ಕಿತು. ಬದುಕು ಸುಧಾರಿಸಿತು, ಮನೆ ಕೂಡಾ ಆಯ್ತು. ಈಗ ಒಂಥರಾ ನೆಮ್ಮದಿಯ ಬದುಕು. ಹೀಗಿರುವಾಗಲೇ ಯೋಚನೆ ಹೊಳೆದದ್ದು ಸರ್ಕಾರ ಅಂದ್ರೆ ತೆರಿಗೆದಾರರ ದುಡ್ಡಿನಿಂದಲೇ ಅಲ್ಲವೇ ಇದೆಲ್ಲ ಸಾಧ್ಯವಾಗಿದ್ದು, ಅದರ ಋಣ ನಮ್ಮ ಮೇಲಿದೆ. ನಾವು ನಮ್ಮ ಸುತ್ತಮುತ್ತಲಿನ ಜನರಿಗಾಗಿ, ಸಾರ್ವಜನಿಕರಿಗಾಗಿ ಏನಾದರೊಂದು ಕೆಲಸ ಮಾಡಬೇಕು ಎಂಬುದು. ಹಾಗೆ ನಾನು  ಸಮಾನ ಮನಸ್ಕರಾದ ಐವರು ಗೆಳೆಯರು ಜತೆ ಸೇರಿ 2013ರಲ್ಲಿ ಅಂಬೇಡ್ಕರ್ ಜಯಂತಿಯಂದು ಅನಾಥಾಶ್ರಮವೊಂದಕ್ಕೆ...

Published On - 5:09 pm, Fri, 12 July 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ