ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತೇ ಉಪಹಾರ ಸೇವಿಸಿದ ಸಂತೋಷ ಲಾಡ್

ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತೇ ಉಪಹಾರ ಸೇವಿಸಿದ ಸಂತೋಷ ಲಾಡ್

ಕಿರಣ್ ಹನುಮಂತ್​ ಮಾದಾರ್
|

Updated on:Jul 12, 2024 | 5:49 PM

ಇಂದು (ಶುಕ್ರವಾರ) ಧಾರವಾಡ ನಗರದ ಸ್ಟೇಶನ್ ರಸ್ತೆಯಲ್ಲಿರುವ ಬೃಂದಾವನ ಹೊಟೇಲ್​ಗೆ ವಿವಿಧ ಕಡೆಯ ಭೇಟಿ ಬಳಿಕ ಉಪಹಾರಕ್ಕೆಂದು ಸಚಿವ ಸಂತೋಷ್ ಲಾಡ್​ ಬಂದಿದ್ದರು. ಈ ಸಂದರ್ಭದಲ್ಲಿ ಮನೆಗೆ ಹೊರಟಿದ್ದ ಶಾಲಾ ಬಾಲಕಿಯರನ್ನು ಕರೆದು ತಮ್ಮೊಂದಿಗೆ ಕುಳ್ಳಿರಿಸಿಕೊಂಡು ಲಾಡ್ ಉಪಹಾರ, ಚಹಾ ಸೇವನೆ ಮಾಡಿದರು. ಜೊತೆಗೆ ಮಕ್ಕಳಿಗೆ ಜಾಮೂನು ತಿನ್ನಿಸಿದರು.

ಧಾರವಾಡ, ಜು.12: ಕಾರ್ಮಿಕ ಸಚಿವ ಸಂತೋಷ ಲಾಡ್(Santosh Lad) ಅವರು ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವನೆ ಮಾಡಿದ್ದಾರೆ. ಇಂದು (ಶುಕ್ರವಾರ) ಧಾರವಾಡ ನಗರದ ಸ್ಟೇಶನ್ ರಸ್ತೆಯಲ್ಲಿರುವ ಬೃಂದಾವನ ಹೊಟೇಲ್​ಗೆ ವಿವಿಧ ಕಡೆಯ ಭೇಟಿ ಬಳಿಕ ಉಪಹಾರಕ್ಕೆ ಎಂದು ಬಂದಿದ್ದರು. ಈ ವೇಳೆ ಹೊಟೇಲ್​ ಫುಲ್ ರಶ್ ಇದ್ದ ಕಾರಣ, ಮೆಟ್ಟಿಲ ಮೇಲೆಯೇ ಕುಳಿತ ಸಚಿವ ಲಾಡ್, ಇದೇ ವೇಳೆ ಮನೆಗೆ ಹೊರಟಿದ್ದ ಶಾಲಾ ಬಾಲಕಿಯರನ್ನು ಕರೆದು ತಮ್ಮೊಂದಿಗೆ ಕುಳ್ಳಿರಿಸಿಕೊಂಡು ಲಾಡ್ ಉಪಹಾರ, ಚಹಾ ಸೇವನೆ ಮಾಡಿದರು. ಜೊತೆಗೆ ಮಕ್ಕಳಿಗೆ ಜಾಮೂನು ತಿನ್ನಿಸಿದರು. ಸಚಿವರಾದರೂ ಮಕ್ಕಳೊಟ್ಟಿಗೆ ಕುಳಿತು ಉಪಹಾರ ಸೇವಿಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 12, 2024 05:44 PM