Samsung Galaxy Z Fold 6: ಲೇಟೆಸ್ಟ್ ಗ್ಯಾಲಕ್ಸಿ ಫೋಲ್ಡ್ ಫೋನ್ ಲಾಂಚ್ ಮಾಡಿದ ಸ್ಯಾಮ್‌ಸಂಗ್
ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ನಲ್ಲಿ ನೂತನ ಸರಣಿಯ ಫೋಲ್ಡೇಬಲ್ ಫೋನ್ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಲಾಂಚ್ ಮಾಡಿದೆ.
ಗ್ಯಾಜೆಟ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಲೋಕದ ಪ್ರಮುಖ ಬ್ರ್ಯಾಂಡ್ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಪ್ಯಾರಿಸ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ನಲ್ಲಿ ನೂತನ ಸರಣಿಯ ಫೋಲ್ಡೇಬಲ್ ಫೋನ್ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಲಾಂಚ್ ಮಾಡಿದೆ. ಹೊಸ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್ 5 ತೆಳ್ಳಗಿರುವ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯಾಗಿದೆ. ಅದರ ಜತೆಗೆ, ಸ್ನ್ಯಾಪ್ಡ್ರಾಗನ್ 8 ಜೆನ್ 3 ಮೊಬೈಲ್ ಪ್ರೊಸೆಸರ್ ಬೆಂಬಲ ಹೊಂದಿದ್ದು, ಅ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಸರಣಿಯಲ್ಲೇ ಎಐ ಒಳಗೊಂಡಿರುವ ಮತ್ತು ಆಕರ್ಷಕ ಬಳಕೆಯ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ. ಹೊಸ ಸರಣಿ ಫೋನ್ ಬೆಲೆ ಮತ್ತು ಇತರ ವಿವರ ವಿಡಿಯೊದಲ್ಲಿದೆ.
Latest Videos