ಕಾವೇರಿ ನೀರು ಬಿಡಲಾಗಲ್ಲ ಅಂತ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಸರ್ಕಾರದ ನಿರ್ಧಾರ
ಇವತ್ತಿನ ಸಭೆಯಲ್ಲಿ ಸಿದ್ದರಾಮಯ್ಯ, ಶಿವಕುಮಾರ್ ಅಲ್ಲದೆ, ಎನ್ ಚಲುವರಾಯಸ್ವಾಮಿ, ಹೆಚ್ ಸಿ ಮಹದೇವಪ್ಪ, ಕೆಹೆಚ್ ಮುನಿಯಪ್ಪ, ಭೈರತಿ ಸುರೇಶ್, ಕೆಎನ್ ರಾಜಣ್ಣ ಅವರೊಂದಿಗೆ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಲವಾದರೂ ಸರ್ಕಾರ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡು ನೀರು ಬಿಡಲ್ಲ ಅಂತ ಖಡಾಖಂಡಿತವಾದ ನಿಲುವು ಪ್ರಕಟಿಸುತ್ತದೆಯೋ ಅಂತ ಕಾದು ನೋಡಬೇಕು.
ಬೆಂಗಳೂರು: ತಮಿಳುನಾಡಿಗೆ ಒಂದು ಟಿಎಂಸಿ ನೀರು ಬಿಡಬೇಕೆಂದು ಕಾವೇರಿ ಜಲ ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಮತ್ತು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಇತರ ಕೆಲ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಬ್ರೀಫ್ ಮಾಡಿದರು. ಸಿಡಬ್ಲ್ಯೂಅರ್ಸಿ ಯ ಶಿಫಾರಸ್ಸಿನ ಹಾಗೆ ನೀರು ಬಿಡಲಾಗಲ್ಲ ಅಂತ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದು ಸಭೆಯಲ್ಲಿ ತೆಗೆದಯಕೊಂಡ ಮೊದಲ ನಿರ್ಣಯವಾದರೆ ವಿಷಯವನ್ನು ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಕರೆಯುವುದು ಎರಡನೇಯದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸರ್ವಪಕ್ಷ ಸಭೆಯನ್ನು ಶಿವಕುಮಾರ್ ಅವರು ಜುಲೈ 14, ಭಾನುವಾರ ಸಂಜೆ 4 ಗಂಟೆಗೆ ಕರೆದಿದ್ದಾರೆ ಮತ್ತು ತಾನೂ ಸಹ ಭಾಗಿಯಾಗುವುದಾಗಿ ಅವರು ಹೇಳಿದರು. ಕಾವೇರಿ ನೀರಿನ ವಿಷಯ ಬಂದಾಗ ಎಲ್ಲ ಪಕ್ಷಗಳು ಒಟ್ಟಾಗಿ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಹಾಗಾಗಿ ಎಲ್ಲ ಪಕ್ಷಗಳ ನಾಯಕರು ಪುನಃ ಸಭೆ ಸೇರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಎಂದರೆ ಡಿಕೆಶಿ, ಸಿದ್ದರಾಮಯ್ಯ ಅಷ್ಟೇ ಅಲ್ಲ, ಏಕಪಕ್ಷೀಯ ನಿರ್ಧಾರಗಳೇ ಸೋಲಿಗೆ ಕಾರಣ: ‘ಕೈ’ ನಾಯಕರ ಅಸಮಾಧಾನ