ಕಾಂಗ್ರೆಸ್ ಎಂದರೆ ಡಿಕೆಶಿ, ಸಿದ್ದರಾಮಯ್ಯ ಅಷ್ಟೇ ಅಲ್ಲ, ಏಕಪಕ್ಷೀಯ ನಿರ್ಧಾರಗಳೇ ಸೋಲಿಗೆ ಕಾರಣ: ‘ಕೈ’ ನಾಯಕರ ಅಸಮಾಧಾನ

ಕಾಂಗ್ರೆಸ್ ಪರಾಮರ್ಶೆ; ಲೋಕಸಭೆ ಚುನಾವಣೆಯಲ್ಲಿ ಮಖಾಡೆ ಮಲಗದಿದ್ದರೂ ಕಾಂಗ್ರೆಸ್​​​ ಪಕ್ಷಕ್ಕೆ ಭಾರೀ ಮುಖಭಂಗವಾಗಿತ್ತು. ಎಲ್ಲಿ ಸೋಲಾಯಿತು, ಎಲ್ಲಿ ಎಡವಟ್ಟಾಯಿತು ಎಂಬುದನ್ನು ಪತ್ತೆ ಹಚ್ಚಲು ಎಐಸಿಸಿ ಅಖಾಡಕ್ಕೆ ಇಳಿದಿದೆ. ಸತ್ಯ ಶೋಧನಾ ಸಮಿತಿ ಮುಂದೆ ಖಂಡ ತುಂಡವಾಗಿ ಸತ್ಯಾಂಶಗಳನ್ನು ನಾಯಕರು ಮುಂದಿಟ್ಟಿದ್ದಾರೆ. ಆ ಕಾರಣಗಳು ಇಲ್ಲಿವೆ.

ಕಾಂಗ್ರೆಸ್ ಎಂದರೆ ಡಿಕೆಶಿ, ಸಿದ್ದರಾಮಯ್ಯ ಅಷ್ಟೇ ಅಲ್ಲ, ಏಕಪಕ್ಷೀಯ ನಿರ್ಧಾರಗಳೇ ಸೋಲಿಗೆ ಕಾರಣ: ‘ಕೈ’ ನಾಯಕರ ಅಸಮಾಧಾನ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್Image Credit source: PTI
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on:Jul 12, 2024 | 8:44 AM

ಬೆಂಗಳೂರು, ಜುಲೈ 12: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿನ ಕಾರಣಗಳ ಪರಾಮರ್ಶೆಗೆ ಕಾರಣಗಳನ್ನು ತಿಳಿಯಲು ಎಐಸಿಸಿ ರಚಿಸಿದ ಮಧುಸೂದನ್ ಮಿಸ್ತ್ರಿ ನೇತೃತ್ವದ ಸತ್ಯ ಶೋಧನಾ ಸಮಿತಿ ರಾಜ್ಯಕ್ಕೆ ಆಗಮಿಸಿದೆ. ಡಬಲ್ ಡಿಜಿಟ್ ಬಂದೇ ಬರುತ್ತೇವೆ ಎಂದು ತೊಡೆ ತಟ್ಟುತ್ತಿದ್ದ ಕಾಂಗ್ರೆಸ್ ನಾಯಕರು ಕೇವಲ 9 ಸೀಟಿಗೆ ಸೀಮಿತವಾಗಿದ್ದರು. ನಿರೀಕ್ಷಿತ ಗುರಿ ಮುಟ್ಟದ ಕಾಂಗ್ರೆಸ್​​ನ ಸೋಲಿನ ಹಿಂದಿನ ಅಸಲಿ ಕಾರಣಗಳನ್ನು ಪತ್ತೆ ಹಚ್ಚಲು ಮುಂದಾಗಿರುವ ಸತ್ಯ ಶೋಧನಾ ಸಮಿತಿ ಮುಂದೆ ಗಂಭೀರ ವಿಚಾರಗಳೇ ಪ್ರಸ್ತಾಪವಾಗಿವೆ. ಕೆಪಿಸಿಸಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿರುವ ಮಧುಸೂದನ್ ಮಿಸ್ತ್ರಿ ಸಮಿತಿ ಲಿಖಿತ ರೂಪದಲ್ಲಿ ಎಐಸಿಸಿಗೆ ವರದಿ ನೀಡಲಿದೆ. ಗುರುವಾರ ನಡೆದ ಸಭೆಯಲ್ಲಿ ಸಿಡಬ್ಲ್ಯುಸಿ ಸದಸ್ಯರು, ಶಾಸಕರು, ಸಚಿವರು, ಹಿರಿಯ ನಾಯಕರು ಸಮಿತಿ ಮುಂದೆ ಹಾಜರಾಗಿ ತಮ್ಮ ತಮ್ಮ ಲೋಕಸಭಾ ಕ್ಷೇತ್ರದ ಸಮಸ್ಯೆ, ಲೋಪದೋಷ, ನಾಯಕರ ನಡವಳಿಕೆ ಬಗ್ಗೆಯೂ ಅಭಿಪ್ರಾಯ ತಿಳಿಸಿದ್ದಾರೆ.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಏಕಪಕ್ಷೀಯ ನಿರ್ಧಾರಗಳ ಬಗ್ಗೆಯೂ ಪ್ರಸ್ತಾಪವಾಗಿದೆ. ಅದುವೇ ಸೋಲಿಗೆ ಪ್ರಮುಖ ಕಾರಣವಾಯಿತು. ಕಾಂಗ್ರೆಸ್ ಎಂದರೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಷ್ಟೇ ಅಲ್ಲ ಎಂದು ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಲಿಗೆ ಕಾಂಗ್ರೆಸ್ ನಾಯಕರು ನೀಡಿದ ಕಾರಣಗಳಿವು

  • ಕಾಂಗ್ರೆಸ್ ಶಾಸಕರೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
  • ಕಾಂಗ್ರೆಸ್ ಶಾಸಕರ ಹೊಂದಾಣಿಕೆಯಿಂದಲೇ ಹಲವು ಕಡೆ ಕಾಂಗ್ರೆಸ್ ಸೋತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಲೀಡ್ ಬಂದು ಕಾಂಗ್ರೆಸ್ ಶಾಸಕರು ಗೆಲ್ಲುತ್ತಾರೆ , ಅದೇ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ಲೀಡ್ ಕೊಡುತ್ತಾರೆ.
  • ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಉಸ್ತುವಾರಿ ಸಚಿವರ ಹೊಂದಾಣಿಕೆಯಿಂದಲೇ ಹೀಗೆ ಆಗುತ್ತಿದೆ.
  • ಕಾಂಗ್ರೆಸ್ ಶಾಸಕರ ಮ್ಯಾಚ್ ಫಿಕ್ಸಿನಿಂದಲೇ ವಿಜಯಪುರದಲ್ಲಿ ಸೋಲಾಗಿದೆ.
  • ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಬಿಜೆಪಿಗೆ ಲೀಡ್ ಬರುತ್ತಿದೆ.
  • ಕಾಂಗ್ರೆಸ್ ಪಕ್ಷವನ್ನ ಉಳಿಸಬೇಕು ಎಂದರೆ ಮ್ಯಾಚ್ ಫಿಕ್ಸಿಂಗ್ ನಿಲ್ಲಿಸಬೇಕು.
  • ಸಿಎಂ, ಡಿಸಿಎಂ ನಾಯಕತ್ವದ ಬಗ್ಗೆಯೂ ಉಲ್ಲೇಖ.
  • ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿತ್ತು, ಲೋಕಸಭೆಯಲ್ಲಿ ಸಾಮೂಹಿಕ ನಾಯಕತ್ವ ಇರಲಿಲ್ಲ.
  • ಲೋಕಸಭೆ ಚುನಾವಣೆಯಲ್ಲಿ ಹಿರಿಯರ ಸಲಹೆಗಳನ್ನ ಪರಿಗಣಿಸಿಲ್ಲ.
  • ಸಿಎಂ, ಡಿಸಿಎಂ ಇಬ್ಬರೇ ಏಕ ಪಕ್ಷೀಯವಾಗಿ ಎಲ್ಲಾ ನಿರ್ಧಾರ ಕೈಗೊಂಡಿದ್ದಾರೆ.
  • ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಮನ್ನಣೆ ನೀಡದೆ ಇರುವುದು ಸೋಲಿಗೆ ಕಾರಣ.
  • ಸಚಿವರ ಕುಟಂಬಸ್ಥರಿಗೆ ಟಿಕೆಟ್ ಕೊಟ್ಟಿರುವುದು ಕೆಲ ಹಿನ್ನಡೆ ಆಗಿದೆ.
  • ನಾಲ್ಕು ಕಡೆ ಪ್ಲಸ್ ಆದರೂ ಬೇರೆ ಕಡೆ ಹಿನ್ನಡೆ ಆಗಿದೆ.
  • ಕಾರ್ಯಕರ್ತರನ್ನು ಪರಿಗಣಿಸಿಲ್ಲ.
  • ನಿಗಮಮಂಡಳಿ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಸಿಎಂ, ಡಿಸಿಎಂ ಬೆಂಬಲಿಗರಿಗೆ ಮಣೆ ಹಾಕಿದ್ದಾರೆ.
  • ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
  • ಕರಾವಳಿ ಭಾಗದಲ್ಲಿ ಚುನಾವಣಾ ತಂತ್ರಗಾರಿಕೆ ಸರಿಯಾಗಿ ಮಾಡಿಲ್ಲ.
  • ಇದೇ ರೀತಿ ಮುಂದುವರೆದರೆ ಪಕ್ಷಕ್ಕೆ ದೊಡ್ಡ ಪ್ರಮಾಣದ ಹಿನ್ನಡೆ ಆಗಲಿದೆ.
  • ಕಾಂಗ್ರೆಸ್ ಪಕ್ಷ ಎಂದರೆ ಕೇವಲ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮಾತ್ರವಲ್ಲ ಅನೇಕ ಹಿರಿಯರೂ ಇದ್ದಾರೆ.

ಹೀಗೆ ಲೋಪದೋಷಗಳ ಸರಮಾಲೆಯೇ ಸಮಿತಿ ಮುಂದೆ ಪ್ರಸ್ತಾಪವಾಗಿದೆ. ಸಚಿವರು ತಮ್ಮ ತಮ್ಮ ಕ್ಷೇತ್ರದ ಸೋಲಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಬಿಜೆಪಿ ಜೆಡಿಎಸ್ ಮೈತ್ರಿಯೇ ಲೋಕಸಭೆ ಹಿನ್ನಡೆಗೆ ಪ್ರಮುಖ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಅಭಿವೃದ್ಧಿಗೆ ಹಣವಿಲ್ಲ, ಸಿಎಂ ಹಿಂದೆ ಇರುವುದಕ್ಕೆ ನನಗೆ ಹಣ ಬಂದಿದೆ: ಸತ್ಯ ಒಪ್ಪಿಕೊಂಡ ಆರ್ಥಿಕ ಸಲಹೆಗಾರ ರಾಯರೆಡ್ಡಿ

ಇಂದು ಕೂಡ ಸತ್ಯ ಶೋಧನಾ ಸಮಿತಿ ಸೋಲಿನ ಪರಾಮರ್ಶೆ ಮುಂದುವರಿಸಲಿದೆ. ಇಂದು ಕೆಪಿಸಿಸಿ ಪದಾಧಿಕಾರಿಗಳು, 2024 ಲೋಕಸಭೆ ಅಭ್ಯರ್ಥಿಗಳು, ವಿಧಾನಸಭಾ ಅಭ್ಯರ್ಥಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ನಿಗಮಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಿಗೆ ಸಮಯ ನಿಗದಿ ಮಾಡಲಾಗಿದೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:38 am, Fri, 12 July 24

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್