AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದಿಂದ ವಾಪಸ್ಸಾದ ಸಂತೋಷ ಲಾಡ್; ರೈಲು ಅಪಘಾತದಲ್ಲಿ ಸಿಲುಕಿದ್ದ ಕನ್ನಡಿಗರ ಪರಿಸ್ಥಿತಿ ಬಗ್ಗೆ ಸಚಿವರಿಂದ ಮಾಹಿತಿ

ಒಡಿಶಾ ತ್ರಿವಳಿ ರೈಲು ದುರಂತದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಸಂತೋಷ ಲಾಡ್​ ಅವರನ್ನು ಒಡಿಶಾಗೆ ಕಳುಹಿಸಿದ್ದರು. ಇದೀಗ ಸಂತೋಷ ಲಾಡ್​ ಅವರು ರಾಜ್ಯಕ್ಕೆ ವಾಪಾಸ್​​ ಆಗಿದ್ದಾರೆ.

ಒಡಿಶಾದಿಂದ ವಾಪಸ್ಸಾದ ಸಂತೋಷ ಲಾಡ್; ರೈಲು ಅಪಘಾತದಲ್ಲಿ ಸಿಲುಕಿದ್ದ ಕನ್ನಡಿಗರ ಪರಿಸ್ಥಿತಿ ಬಗ್ಗೆ ಸಚಿವರಿಂದ ಮಾಹಿತಿ
ಸಚಿವ ಸಂತೋಷ್ ಲಾಡ್​
Follow us
ವಿವೇಕ ಬಿರಾದಾರ
|

Updated on: Jun 06, 2023 | 11:23 AM

ಧಾರವಾಡ: ಒಡಿಶಾದ (Odisha) ಬಾಲಾಸೋರ್ (Balasore) ಜಿಲ್ಲೆಯಲ್ಲಿ ಶುಕ್ರವಾರ (ಜೂ.2) ರಾತ್ರಿ ಸಂಭವಿಸಿದ್ದ ಭೀಕರ ತ್ರಿವಳಿ ರೈಲು ಅಪಘಾತಕ್ಕೆ (Odisha Train Accident) ದೇಶವೇ ಮರುಗುತ್ತಿದೆ. ದುರಂತ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ (Santosh Lad) ಮಾತನಾಡಿ ದುರಂತದಲ್ಲಿ ಕರ್ನಾಟಕದ 150-160 ಜನ ಸಿಲುಕಿಕೊಂಡಿದ್ದರು. ಪುರಿ ಜಗನ್ನಾಥ್​ದಲ್ಲಿ ಇದ್ದವರು 17 ಜನ ವಾಪಸ್ ಬಂದಿದ್ದಾರೆ. 30ಕ್ಕೂ ಹೆಚ್ಚು ವಾಲಿಬಾಲ್ ಆಟಗಾರರನ್ನು ಕರೆತರಲಾಗಿದೆ. ಘಟನೆ ನಡೆದ ರೈಲಿನಲ್ಲಿ ಇದ್ದವರು 110 ಜನ ಜಾರ್ಖಂಡ್​ಗೆ ಹೋಗಿದ್ದಾರೆ. ಯಾರಿಗೂ ತೊಂದರೆ ಆಗದಂತೆ 150 ರಿಂದ 160 ಜನರನ್ನ ರಕ್ಷಣೆ ಮಾಡಿದ್ದೇವೆ. ನನ್ನ ಮಾಹಿತಿಯಂತೆ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಿದರು.

ಈ ರೈಲು ದುರಂತದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಸಂತೋಷ ಲಾಡ್​ ಅವರನ್ನು ಒಡಿಶಾಗೆ ಕಳುಹಿಸಿದ್ದರು. ಇದೀಗ ಸಂತೋಷ ಲಾಡ್​ ಅವರು ರಾಜ್ಯಕ್ಕೆ ವಾಪಾಸ್​​ ಆಗಿದ್ದಾರೆ.

ಕರ್ನಾಟಕದಲ್ಲಿ ಅತೀ‌ ಶೀಘ್ರದಲ್ಲೇ ಎಮರ್ಜೆನ್ಸಿ ಸರ್ಕಾರ ಬರುತ್ತೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೆ ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಉತ್ತರ ಸಿಗುತ್ತೆ. ಸುಮ್ಮನೆ ಅವರೊಂದು ಹೇಳಿದ್ದಾರೆ, ನಾವೊಂದು ಹೇಳಿದ್ದೇವೆ ಅಂತೇನಿಲ್ಲ. ಅವರು ಅಭಿವೃದ್ಧಿ ಬಡತನದ ಬಗ್ಗೆ ಮಾತನಾಡೋದು ಒಳ್ಳೆಯದು ಎಂದರು.

ಇದನ್ನೂ ಓದಿ: Odisha Train Accident: 40 ಪ್ರಯಾಣಿಕರ ಮೃತದೇಹಗಳ ಮೇಲೆ ಒಂದೇ ಒಂದು ಗಾಯದ ಗುರುತು ಕೂಡ ಇರಲಿಲ್ಲ

ಕಾಂಗ್ರೆಸ್​ಗೆ ಅಧಿಕಾರದ ಅಮುಲು ಏರಿದೆ ಎಂಬ ಬಿಜೆಪಿ ಹೇಳಿಕೆ ವಿಚಾರವಾಗಿ ಮಾತನಾಡಿ ಮೊನ್ನೆಯಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಒಟ್ಟಾರೆ ನಮ್ಮ ಉದ್ದೇಶ ಸರ್ಕಾರದ ಯೋಜನೆ ಜಾರಿಗೆ ತರುವುದಿದೆ. ಮಾತುಕೊಟ್ಟ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ವಿಶೇಷವಾಗಿ ನಮ್ಮ ಗಮನ ಆ ಕಡೆ ಇರುತ್ತೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಕಲಿ ಜಾಬ್ ಕಾರ್ಡ್ ವಿಚಾರವಾಗಿ ಮಾತನಾಡಿ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಕಲಿ ಜಾಬ್ ಕಾರ್ಡ್ ಇರುವ ಬಗ್ಗೆ ಮಾಹಿತಿ ಬೇಕು. ನಕಲಿ ಜಾಬ್ ಕಾರ್ಡ್​ಗೆ ಕೆಲವು ಮಾನದಂಡ ಹಾಕಿದ್ದೇವೆ. ಒಂದು ವೇಳೆ ನಕಲಿ ಅಂತ ಗೊತ್ತಾದರೆ ಅವುಗಳನ್ನ ತೆಗೆಯುತ್ತೇವೆ ಎಂದು ತಿಳಿಸಿದರು.

ಸಂತೋಷ ಲಾಡ್ ಧಾರವಾಡ ಉಸ್ತುವಾರಿ ಆಗ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಜಾರಿಕೊಂಡರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ